ನಟಿ ರಶ್ಮಿ ತಮ್ಮ ‘ದುನಿಯಾ’ ಚಿತ್ರದ ಮೂಲಕ ‘ದುನಿಯಾ’ ರಶ್ಮಿಯಾಗಿ ನಿಮ್ಮೆಲ್ಲರನ್ನೂ ರಂಜಿಸಿ ಕನ್ನಡದ ಮುದ್ದು ನಟಿಯಾಗಿ ಹೆಸರಾದವರು. ಬಳಿಕ ರಶ್ಮಿ ಇನ್ನೂ ಅನೇಕ ಹೊಸ ಸಿನಿಮಾಗಳ ಮೂಲಕ ಎಲ್ಲರನ್ನೂ ರಂಜಿಸಿದ್ದಾರೆ. ತಮ್ಮ ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಿರುವ ರಶ್ಮಿ ಈಗ ಇನ್ನಷ್ಟು ಮುದ್ದಾಗಿ, ಇನ್ನಷ್ಟು ಸಿಜಲಿಂಗ್ ಆಗಿ ಕಾಣುತ್ತಿದ್ದಾರೆ. ಅವರ ಸೌಂದರ್ಯ ಹೆಚ್ಚಲು ಕಾರಣ… ಅದರ ಸೀಕ್ರೇಟ್ ರಶ್ಮಿ ಬಿಚ್ಚಿಟ್ಟಿದ್ದಾರೆ.
* ನೋ ಕಾಫಿ.. ನೋ ಟೀ..!
ʻಕೇರ್ ಅನ್ನೋದು ಬೆಳಿಗ್ಗೆ ಎದ್ದ ಕೂಡಲೆ ಸ್ಟಾರ್ಟ್ ಆಗುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ನೋ ಕಾಫಿ, ನೋ ಟೀ, ಒಂದು ಲೋಟ ಬಿಸಿ ನೀರಿಗೆ ಜೇನುತುಪ್ಪ ಮತ್ತು ನಿಂಬೆರಸ ಸೇರಿಸಿ ಸೇವಿಸುತ್ತೇನೆ. ಇದರಿಂದ ತೂಕ ಕಂಟ್ರೋಲ್ ಆಗುತ್ತದೆʼ.
* ಬ್ರೇಕ್ ಫಾಸ್ಟ್‌ಗೆ ಪಪ್ಪಾಯ..!
ʻಬೆಳಿಗ್ಗೆ ಒಂದು ಬೌಲ್ ಪಪ್ಪಾಯ ಹಣ್ಣು ತಿನ್ನುತ್ತೇನೆ. ಪಪ್ಪಾಯ ಬಹಳ ಒಳ್ಳೆ ಪೌಷ್ಠಿಕಾಂಶ ಹೊಂದಿದೆ. ಪಪ್ಪಾಯ ತಿನ್ನುವುದರಿಂದ ಚರ್ಮಕ್ಕೆ ಹೆಚ್ಚು ಕಾಂತಿ ಬರುತ್ತದೆ ಅಲ್ಲದೆ ಅದು ವೇಯ್ಟ್ ಲಾಸ್‌ನಲ್ಲೂ ಸಹಾಯಕವಾಗಿದೆʼ.
* ಪ್ರತಿದಿನ ವರ್ಕೌಟ್..!
ʻವರ್ಕ್ ಔಟ್ ಮಾಡಲೇ ಬೇಕು. ಬೆಳಿಗ್ಗೆ ಜಿಮ್ ಮಾಡೇ ಮಾಡ್ತೀನಿ. ಫಿಟ್ ಆಗಿರಬೇಕು ಅಂದ್ರೆ ಎಕ್ಸರ್ಸೈಸ್ ಮಾಡಲೇಬೇಕುʼ.
* ಚಮಕ್ಕೆ ಬಳಸುವ ಪ್ರಾಡೆಕ್ಟ್..?
ʻಚರ್ಮಕ್ಕೆ ಯಾವುದೇ ಪ್ರಾಡಕ್ಟ್ ಬಳಸುವಾಗ ತುಂಬಾ ಎಚ್ಚರವಹಿಸುತ್ತೇನೆ. ಬ್ರಾಂಡೆಡ್ ಮಾತ್ರ ಉಪಯೋಗಿಸುತ್ತೀನಿ. ನನ್ನ ಫೇವರೆಟ್ ಬ್ರಾಂಡ್ ಲಾರಿಯಲ್. ನನ್ನ ಬಹುತೇಕ ಬ್ಯೂಟಿ ಪ್ರಾಡಕ್ಟ್ ಲಾ ರಿಯಲ್‌ನದ್ದೇʼ.
* ಡ್ರೆಸ್‌ಗಳ ಆಯ್ಕೆ ಹೇಗೆ..?
ʻಚೆನ್ನಾಗಿ ಕಾಣಬೇಕು ಎಂದರೆ ಒಳ್ಳೆಯ ಡ್ರೆಸ್ಸಿಂಗ್ ಸೆನ್ಸ್ ಇರಬೇಕು. ಸೀಜನ್‌ಗೆ ಒಪ್ಪುವ ಬಣ್ಣ ಮತ್ತು ಉಡುಪನ್ನು ಧರಿಸಬೇಕು. ನನಗೆ ಡೆನಿಮ್ ತುಂಬಾ ಕಂಫರ್ಟಬಲ್. ಬೇಸಿಗೆಯಲ್ಲಿ ಕಾಟನ್ ಮತ್ತು ಲೈಟ್ ಉಡುಪುಗಳು ಮತ್ತು ಚಳಿಗಾಲದಲ್ಲಿ ಡಾರ್ಕ್ ಮತ್ತು ಚರ್ಮವನ್ನು ರಕ್ಷಿಸುವಂಥಾ ಡ್ರೆಸ್‌ಗಳುʼ
ಇದಿಷ್ಟು ದುನಿಯಾ ರಶ್ಮಿ ಚಿತ್ತಾರದೊಂದಿಗೆ ತಮ್ಮ ದಿನಚರಿ ಹಂಚಿಕೊಂಡಿದ್ದಂತ ವಿಚಾರವಾಗಿದೆ. ಈಗಲೂ ತಮ್ಮ ಬ್ಯೂಟಿ ಕಡೆಗೇನೆ ದುನಿಯಾ ರಶ್ಮಿ ಹೆಚ್ಚು ಒತ್ತು ಕೊಡುತ್ತಾರೆ.