ನಟ ಯಶ್ ಮತ್ತು ದುಲ್ಖರ್ ಸಲ್ಮಾನ್ ಆಪ್ತ ಸ್ನೇಹಿತರು. ಈ ಇಬ್ಬರು ಕಲಾವಿದರು ಮುಖತಃ ಮಾತಿಗೆ ಸಿಕ್ಕಿದ್ದು ಕೆಲವೇ ಬಾರಿಯಾದರೂ, ಸಿನಿಮಾಗಳ ವಿಚಾರದಲ್ಲಿ ಒಬ್ಬರಿಗೊಬ್ಬರು ಸಾಥ್ ನೀಡಿದ ಉದಾಹರಣೆಗಳಿವೆ. ಇದೀಗ ಇದೇ ನಟ ಸ್ಯಾಂಡಲ್‌ವುಡ್ ಬಗ್ಗೆ ಮಾತನಾಡಿದ್ದಾರೆ. ಇಲ್ಲಿನ ಹೀರೋಗಳ ಬಗ್ಗೆಯೂ ಮನಸ್ಸಿನಾಳದಿಂದ ಉತ್ತರಿಸಿದ್ದಾರೆ. ನಟ ಯಶ್ ಅವರ ಆತಿಥ್ಯವನ್ನೂ ನೆನಪಿಸಿಕೊಂಡಿದ್ದಾರೆ.
ಗಮನಸೆಳೆಯುತ್ತಿದೆ ವಿಭಿನ್ನವಾಗಿ ರಿಲೀಸ್ ಆದ `ರೂಪಾಯಿ’ ಚಿತ್ರದ ಟ್ರೇಲರ್
ಟ್ವಿಟರ್‌ನಲ್ಲಿ ಸರಿಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಅಭಿಮಾನಿಗಳ ಜತೆಗೆ ಸಂಪರ್ಕದಲ್ಲಿದ್ದ ದುಲ್ಖರ್, ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಈ ವೇಳೆ ಕನ್ನಡ ಸಿನಿಮಾ ಬಗ್ಗೆ ಮತ್ತು ಯಶ್ ಬಗ್ಗೆಯೂ ಒಂದಷ್ಟು ಪ್ರಶ್ನೆಗಳು ಅವರಿಗೆ ಎದುರಾಗಿವೆ. “ನೀವು ಮಲಯಾಳಂ, ತಮಿಳು, ತೆಲುಗು, ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದೀರಿ.. ಸದ್ಯಕ್ಕೆ ಯಾವುದಾದರೂ ಕನ್ನಡ ಸಿನಿಮಾ ಮಾಡುವ ಯೋಜನೆ ಇದೆಯೇ? ಎಂಬ ಪ್ರಶ್ನೆ ಬಂದಿತ್ತು.
ಆ ಪ್ರಶ್ನೆಗೆ ಉತ್ತರಿಸಿದ ದುಲ್ಖರ್, “ಖಂಡಿತ ಕನ್ನಡ ಸಿನಿಮಾಗಳಲ್ಲಿ ನಟಿಸುವ ಆಸೆ ಇದೆ. ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರೋದ್ಯಮವು ನಿರ್ಮಿಸುತ್ತಿರುವ ಎಲ್ಲಾ ಸಿನಿಮಾಗಳನ್ನು ನಾನು ಇಷ್ಟಪಟ್ಟಿದ್ದೇನೆಅಷ್ಟೇ ಅಲ್ಲದೆ ಕನ್ನಡದ ನಟರು, ನಿರ್ದೇಶಕರೂ ನನಗೆ ಪರಿಚಯ. ಅವರ ಜತೆಗೂ ಈ ವಿಚಾರದ ಬಗ್ಗೆ ಮಾತನಾಡುತ್ತಿರುತ್ತೇನೆ” ಎಂದಿದ್ದಾರೆ.
ನಿರೀಕ್ಷೆ ಹೆಚ್ಚಿಸಿದ ವಾಮಾಚಾರ ಕುರಿತಾದ ‘ಸಕೂಚಿ’ ಟ್ರೇಲರ್
ಹಾಗಾದರೆ ನಟ ಯಶ್ ಬಗ್ಗೆ ಏನು ಹೇಳಲು ಬಯಸುತ್ತೀರಿ? ಎಂದಾಗ.. ಮೈಸೂರಿನ ದಿನಗಳನ್ನು ಸ್ಮರಿಸಿಕೊಂಡರು. “ಯಶ್ ಮೈಸೂರಿನಲ್ಲಿ ತಮ್ಮ ತಂಡಕ್ಕೆ ನೀಡಿದ ಸತ್ಕಾರವನ್ನು ದುಲ್ಖರ್ ಸ್ಮರಿಸಿಕೊಂಡರು. ‘ಯಶ್ ವಿನಯವಂತ ಮತ್ತು ಬೆಸ್ಟ್ ಹೋಸ್ಟ್. ನಾವು ಮೈಸೂರಿನಲ್ಲಿ ಸಿನಿಮಾ ಚಿತ್ರೀಕರಿಸುತ್ತಿದ್ದಾಗ ನನಗೆ ಮತ್ತು ನಮ್ಮಿಡೀ ತಂಡಕ್ಕೆ ಒಳ್ಳೆ ಊಟ ಕೊಟ್ಟು ಅವರು ಸತ್ಕರಿಸಿದ ರೀತಿಯನ್ನು ಮರೆಯಲಾರೆ. ರಾಕಿಂಗ್ ಸ್ಟಾರ್‌ಗೆ ತುಂಬು ಪ್ರೀತಿ’ ಎಂದು ದುಲ್ಖರ್ ಉತ್ತರಿಸಿದರು.