ಮಲಯಾಳಂ ಚಿತ್ರರಂಗದ ಖ್ಯಾತ ನಟ ಹಾಗೂ ನಿರ್ಮಾಪಕ ದುಲ್ಕರ್ ಸಲ್ಮಾನ್ ಅವರಿಗೆ ಸಿನಿಮಾಗಳಷ್ಟೇ ಅಲ್ಲ, ಕಾರುಗಳ ಮೇಲೂ ಅಪಾರ ಅಭಿಮಾನವಿದೆ. ಇತ್ತೀಚೆಗಷ್ಟೇ ಕಸ್ಟಮ್ಸ್ ಅಧಿಕಾರಿಗಳು ಅವರ ಮನೆಯಲ್ಲಿ ದಾಳಿ ನಡೆಸಿದ್ದರೂ, ದುಲ್ಕರ್ ಅವರ ಕಾರು ಸಂಗ್ರಹವೇ ಸದಾ ಚರ್ಚೆಯಲ್ಲಿರುತ್ತದೆ.

ಅವರು ಕಾರುಗಳನ್ನು ಕೇವಲ ಶ್ರೀಮಂತಿಕೆಯ ಪ್ರದರ್ಶನಕ್ಕಾಗಿ ಖರೀದಿಸುವುದಿಲ್ಲ. ಅವರಿಗೆ ಕಾರುಗಳ ಬಗ್ಗೆ ನಿಜವಾದ ಪ್ರೀತಿ ಇದೆ. ಹಳೆಯ ಕ್ಲಾಸಿಕ್ ಮಾದರಿಗಳಿಂದ ಹಿಡಿದು ಇತ್ತೀಚಿನ ಸೂಪರ್‌ಲಗ್ಜುರಿ ಮಾದರಿಗಳವರೆಗೂ ಅವರ ಗ್ಯಾರೇಜ್‌ನಲ್ಲಿ ಹಲವಾರು ಕಾರುಗಳು ಮಿಂಚುತ್ತವೆ. 80ರ ದಶಕದ ಕಾರುಗಳಿಂದ ಆರಂಭಿಸಿ ಫೆರಾರಿ, ಬಿಎಂಡಬ್ಲು, ಮರ್ಸಿಡಿಸ್ ಬೆಂಜ್, ಪೋರ್ಷೆ, ವೋಲ್ವೋ ಮುಂತಾದ ಜಗತ್ತಿನ ಅಗ್ರಮಟ್ಟದ ಕಂಪೆನಿಗಳ ವಾಹನಗಳನ್ನು ದುಲ್ಕರ್ ತಮ್ಮ ಸಂಗ್ರಹದಲ್ಲಿ ಹೊಂದಿದ್ದಾರೆ.

ದುಲ್ಕರ್ ಸಲ್ಮಾನ್ ಬಿಎಂಡಬ್ಲುವಿನ ಎಂ3 ಸರಣಿಯ E28, E20, E34, E36, E46, E92 ಮಾದರಿಯ ಹಳೆಯ ಕಾರುಗಳನ್ನು ಖರೀದಿಸಿ ಇಟ್ಟುಕೊಂಡಿದ್ದಾರೆ. ಪೋರ್ಷೆ ಬ್ರ್ಯಾಂಡ್‌ನ 911, 916, 917 ಸೇರಿ 1974ರಲ್ಲಿ ಬಿಡುಗಡೆಯಾದ ಟಾರ್ಗಾ ಮಾದರಿಯ ಕಾರು ಕೂಡ ಅವರ ಬಳಿ ಇದೆ. ಇದೇ ಕಾರನ್ನು ‘ಶಾನ್’ ಸಿನಿಮಾದಲ್ಲಿ ಬಳಸಲಾಗಿತ್ತು. ಇದರ ಜೊತೆಗೆ ಟೊಯೋಟಾ ಲ್ಯಾಂಡ್ ಕ್ರೂಸರ್‌ನ 40, 60, 80, 100 ಸರಣಿಯ ಎಸ್‌ಯುವಿಗಳು, ವೋಲ್ವೋ ಸ್ಟೇಷನ್ ವ್ಯಾಗನ್ ಹಾಗೂ ಫೋರ್ಡ್ ಪಿಕಪ್ ಟ್ರಕ್ ಅವರ ಗ್ಯಾರೇಜ್‌ನಲ್ಲಿ ಸೇರಿಕೊಂಡಿವೆ.
ಇತ್ತೀಚಿನ ಐಶಾರಾಮಿ ಮಾದರಿಗಳಲ್ಲಿ 6 ಕೋಟಿಗೂ ಹೆಚ್ಚು ಬೆಲೆಯ ಫೆರಾರಿ 296 GTB, ಮರ್ಸಿಡಿಸ್ ಬೆಂಜ್ AMG, ಪೋರ್ಷೆ ಪನೆರಮಾ, ಮರ್ಸಿಡಿಸ್ ಮೇಬ್ಯಾಕ್ GLS 600, ಮರ್ಸಿಡಿಸ್ ಎಸ್-ಕ್ಲಾಸ್ ಹಾಗೂ AMG A45, ಬಿಎಂಡಬ್ಲು 7 ಸೀರೀಸ್, ಲ್ಯಾಂಡ್ ರೋವರ್ ಡಿಫೆಂಡರ್ ಕಾರುಗಳು ಗಮನ ಸೆಳೆಯುತ್ತವೆ. ಜೊತೆಗೆ ವೋಲ್ವೊ ಪೋಲೊ GTI, ಮಿನಿ ಕೂಪರ್, ಮಾಜ್ದಾ MX-5, ಟೊಯೋಟಾ ಇನ್ನೋವಾ ಹೈಕ್ರಾಸ್ ಹಾಗೂ ಇನ್ನೋವಾ ಕ್ರಿಸ್ಟಾ ಸಹ ದುಲ್ಕರ್ ಅವರ ಸಂಗ್ರಹದ ಭಾಗವಾಗಿದೆ.
ಹೀಗೆ ಹಳೆಯ ಕ್ಲಾಸಿಕ್ ಕಾರುಗಳಿಂದ ಹಿಡಿದು ಕೋಟ್ಯಂತರ ರೂಪಾಯಿ ಬೆಲೆಯ ಲಗ್ಜುರಿ ಸೂಪರ್ ಕಾರುಗಳವರೆಗೆ ದುಲ್ಕರ್ ಸಲ್ಮಾನ್ ತಮ್ಮ ಗ್ಯಾರೇಜ್‌ನಲ್ಲಿ ಸಂಗ್ರಹಿಸಿ “ಕಾರುಗಳ ಕಿಂಗ್” ಎಂಬ ಬಿರುದನ್ನು ಗಿಟ್ಟಿಸಿಕೊಂಡಿದ್ದಾರೆ.
