Rashmika Mandanna: ದುಲ್ಖರ್ ಜೊತೆ ರಶ್ಮಿಕಾ ಮೊದಲ ಸಿನಿಮಾ 50 ಕೋಟಿ ಗಳಿಕೆ! ಸೀತಾರಾಮಂ ಸೂಪರ್ ಹಿಟ್
ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಖ್ಯಾತಿಗಳಿಸಿದ ರಶ್ಮಿಕಾ ಬಳಿಕ ಟಾಲಿವುಡ್ ಗೆ ಹಾರಿದರು. ಅಲ್ಲಿಯೂ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಇದೀಗ ಕಾಲಿವುಡ್, ಬಾಲಿವುಡ್ ಅಂತ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಎಲ್ಲರ ಪಾಲಿಗೆ ಲಕ್ಕಿ ಹೀರೋಯಿನ್ ಆಗಿದ್ದಾರೆ. ಅವರು ಮಾಡಿದ ಎಲ್ಲ ಸಿನಿಮಾಗಳೂ ಸೂಪರ್ ಹಿಟ್ ಆಗುತ್ತಿವೆ
ರಶ್ಮಿಕಾ ಮಂದಣ್ಣ ಅವರ ದುಲ್ಖರ್ ಸಲ್ಮಾನ್ ಜೊತೆಗಿನ ಮೊದಲ ಸಿನಿಮಾ ಸಕ್ಸಸ್ಫುಲ್ ಆಗಿ ಹಿಟ್ ಆಗಿದೆ. ದುಲ್ಖರ್ ಸಲ್ಮಾನ್ ನಟನೆಯ ಸೀತಾ ರಾಮಂ 50 ಕೋಟಿ ಗಳಿಸಿ ಮುನ್ನುಗುತ್ತಿದೆ.
ರಶ್ಮಿಕಾ ಮಂದಣ್ಣ ನಟನೆಯ ಆಗಸ್ಟ್ 5ರಂದು ವಿಶ್ವಾದ್ಯಂತ ರಿಲೀಸ್ ಆದ ರಶ್ಮಿಕಾ ಮಂದಣ್ಣ ನಟನೆಯ ‘ಸೀತಾ ರಾಮಂ’ ಸಿನಿಮಾ ಈವರೆಗೆ 50 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂಬುದು ರಶ್ಮಿಕಾ ಮಂದಣ್ಣ ಪಾಲಿನ ಹೆಮ್ಮೆಯ ವಿಚಾರ. ಈ ಸಿನಿಮಾದ ಭರ್ಜರಿ ಗೆಲುವಿನಿಂದಾಗಿ ಅವರ ಡಿಮ್ಯಾಂಡ್ ಇನ್ನಷ್ಟು ಹೆಚ್ಚಾಗಿದೆ. ಪ್ರೇಕ್ಷಕರಿಂದ ಈ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಯಿತು. ವಿಮರ್ಶಕರು ಕೂಡ ಸಿನಿಮಾವನ್ನು ಹಾಡಿ ಹೊಗಳಿದರು. ಎಲ್ಲದರ ಪರಿಣಾಮವಾಗಿ ಈ ಚಿತ್ರಕ್ಕೆ ಒಳ್ಳೆಯ ಕಲೆಕ್ಷನ್ ಆಗಿದೆ
‘ಸೀತಾ ರಾಮಂ’ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಆದಾಗ ಎಲ್ಲರಿಗೂ ಅಚ್ಚರಿ ಆಗಿತ್ತು. ಹಿಜಾಬ್ ಧರಿಸಿದ ಗೆಟಪ್ನಲ್ಲಿ ಅವರು ಕಾಣಿಸಿಕೊಂಡಿದ್ದರು. ಆಫ್ರೀನ್ ಎಂಬ ಮುಸ್ಲಿಂ ಹುಡುಗಿಯ ಪಾತ್ರವನ್ನು ಅವರು ಈ ಸಿನಿಮಾದಲ್ಲಿ ನಿಭಾಯಿಸಿದ್ದಾರೆ. ಅವರ ಜೊತೆ ದುಲ್ಕರ್ ಸಲ್ಮಾನ್ ಹಾಗೂ ಮೃಣಾಲ್ ಠಾಕೂರ್ ಕೂಡ ಮುಖ್ಯ ಪಾತ್ರಗಳನ್ನು ಮಾಡಿದ್ದಾರೆ.