Sandalwood Leading OnlineMedia

ಹುಟ್ಟುಹಬ್ಬಕ್ಕೆ ಬಡವರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸಲು ಮುಂದಾದ ಡ್ರೋನ್ ಪ್ರತಾಪ್

ಬಿಗ್ಬಾಸ್ ಕನ್ನಡ ಸೀಸನ್ 10ರ ರನ್ನರ್ ಅಪ್ ಡ್ರೋನ್ ಪ್ರತಾಪ್, ಬಿಗ್ಬಾಸ್ ಮನೆಯಿಂದ ಹೊರಬಂದ ಬಳಿಕ ಕೆಲವು ಸಮಾಜ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಡ್ರೋನ್ ಕಂಡು ಹಿಡಿದಿದ್ದಾಗಿ ಸುಳ್ಳು ಹೇಳಿ ಭಾರಿ ಜನಪ್ರಿಯತೆಗಿಟ್ಟಿಸಿಕೊಂಡಿದ್ದ ಡ್ರೋನ್ ಪ್ರತಾಪ್, ಬಿಗ್ಬಾಸ್ ಶೋನಲ್ಲಿ ಉತ್ತಮವಾಗಿ ಆಡುವ ಮೂಲಕ ನಕಲಿ ಡ್ರೋನ್ನಿಂದ ಹೋಗಿದ್ದ ಮಾನವನ್ನು ಬಿಗ್ಬಾಸ್ ಮನೆಯಲ್ಲಿ ಮತ್ತೆ ಗಳಿಸಿಕೊಂಡಿದ್ದರು.

 

drone prathap

 

ಈಗ ಹೊರಬಂದ ಬಳಿಕ ಕೆಲವು ಸಮಾಜ ಸೇವಾ ಕಾರ್ಯಗಳನ್ನು ಮಾಡುವ ಮೂಲಕ ಹೆಸರು ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.

ಡಾ. ರಾಜ್ಕುಮಾರ್ ಸರ್ ಅವರು ನೇತ್ರದಾನ ಮಹಾದಾನ ಅಂತ ಹೇಳಿದ್ದಾರೆ. ಮುಂಬರುವ ಜೂನ್ 11ರಂದು ನನ್ನ ಹುಟ್ಟು ಹಬ್ಬ ಇದೆ. ನನ್ನ ಹುಟ್ಟು ಹಬ್ಬವನ್ನು ಈ ಬಾರಿ ವಿಶೇಷವಾಗಿ ಆಚರಿಸಿಕೊಳ್ಳಬೇಕು ಅಂತ ಅಂದುಕೊಂಡಿದ್ದೇನೆ.

ಯಾರಾದರೂ ಐದು ಮಂದಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಬೇಕು ಎಂದು ನಾನು ತೀರ್ಮಾನ ಮಾಡಿದ್ದೀನಿ. ಯಾರಾದರೂ ಬಡವರಿದ್ದು, ಅವರಿಗೆ ಶಸ್ತ್ರಚಿಕಿತ್ಸೆಯ ಹಣ ಭರಿಸಲು ಸಾಧ್ಯವಾಗದೇ ಇರುವವರು ಇದ್ದರೆ ದಯವಿಟ್ಟು ನಮಗೆ ತಿಳಿಸಿ.

ನಮಗೆ ಸಾಮಾಜಿಕ ಜಾಲತಾಣದ ಮೂಲಕ ಸಂದೇಶ ಕಳಿಸಿ ಅಥವಾ ಕಮೆಂಟ್ ಸೆಕ್ಷನ್ನಲ್ಲಿ ಅವರನ್ನು ಮೆನ್ಷನ್ ಮಾಡಿ. ನಾವು ಅಗತ್ಯವಿರುವ ಐದು ಮಂದಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸುತ್ತೇವೆ ಅಂತ ಹೇಳಿಕೊಂಡಿದ್ದಾರೆ.

 

ಐಪಿಎಲ್ ಇತಿಹಾಸದಲ್ಲಿ ಟಾಪ್-10 ಅತ್ಯಂತ ದುಬಾರಿ ಆಟಗಾರರು; ಅಧಿಕ ಮೊತ್ತಕ್ಕೆ ಸೇಲಾದ  ಭಾರತದವರು ಯಾರು?-who is the most expensive player in indian premier league  history most costliest indian players ...

 

ಈ ವಿಡಿಯೋ ನೋಡಿದ ನೆಟ್ಟಿಗರು ಧನಾತ್ಮಕವಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕೆಲವರು ಬಿಗ್ಬಾಸ್ನಲ್ಲಿ ನಿಮಗೆ ವೋಟ್ ಮಾಡಿದ್ದಕ್ಕೆ ಸಾರ್ಥಕವಾಯ್ತು, ಕಲಿ ಯುಗದ ಕರ್ಣ ನಮ್ಮ ಡ್ರೋನ್ ಪ್ರತಾಪ್ ಅಣ್ಣ, ಹೆಮ್ಮೆಯಿಂದ ಹೇಳಬಲ್ಲೆ ನಾನು ಒಳ್ಳೆಯ ವ್ಯಕ್ತಿಗೆ ವೋಟ್ ಮಾಡಿದ್ದೇನೆ ಎಂದು, ಕಾರ್ತಿಕ್ ಬದಲು ನೀನಾದ್ರೂ ಗೆದ್ದಿದ್ರೆ ಇನ್ನು ತುಂಬಾ ಕೆಲಸ ಆಗ್ತಾ ಇತ್ತು ಅನ್ಸುತ್ತೆ, ದೇವರು 100 ವರ್ಷ ಸುಖ ನೆಮ್ಮದಿ ಕೊಟ್ಟು ಕಾಪಾಡಲಿ, ಅಗತ್ಯ ಇರುವವರ ಮೊಬೈಲ್ ಸಂಖ್ಯೆ, ವಿಳಾಸಗಳನ್ನು ಕಮೆಂಟ್ ಸೆಕ್ಷನ್ನಲ್ಲಿ ಹಾಕುತ್ತಿದ್ದಾರೆ.

 

Share this post:

Related Posts

To Subscribe to our News Letter.

Translate »