ಬಿಗ್ ಬಾಸ್ ಸೀಸನ್ 10.. ಈ ಬಾರಿ ಸಾಕಷ್ಟು ಅವಘಡಗಳು ಇಲ್ಲಿಂದಾನೇ ಶುರುವಾಗಿದೆ. ಪೊಲೀಸರು ಆಗಾಗ ವಿಸಿಟ್ ಕೊಟ್ಟು ಬರುತ್ತಲೇ ಇದ್ದಾರೆ. ಸದ್ಯ ಈ ಸೀಸನ್ ನಲ್ಲಿ ಇರುವ ಸ್ಪರ್ಧಿ ಡ್ರೋನ್ ಪ್ರತಾಪ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಈ ಹಿನ್ನೆಲೆ ಕುಂಬಳಗೋಡು ಪೊಲೀಸರು ಬಿಗ್ ಬಾಸ್ ಮನೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಬಂದಿದ್ದಾರೆ.ಬಿಗ್ ಬಾಸ್ ಕಂಟೆಸ್ಟೆಂಟ್ ಗಳಿಗೆ ರೆಗ್ಯೂಲರ್ ಆಗಿ ತಪಾಸಣೆ ಮಾಡುವುದು ಸಂಜೀವಿನಿ ಆಸ್ಪತ್ರೆ. ಪ್ರತಾಪ್ ಅವರಿಗೂ ಸಂಜೀವಿನಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಚಿಕಿತ್ಸೆಯನ್ನು ನೀಡಲಾಗಿದೆ. ಈ ಸಂಬಂಧ ಅಲ್ಲಿನ ವೈದ್ಯರು ನಡೆದ ಘಟನೆಯನ್ನು ವಿವರಿಸಿದ್ದಾರೆ.
ಇದನ್ನೂ ಓದಿ ಸೆನ್ಸಾರ್ ಪಾಸಾದ “ಮಂಡ್ಯಹೈದ”
ಡ್ರೋನ್ ಪ್ರತಾಪ್ ಅವರನ್ನು ಆಸ್ಪತ್ರೆಗೆ ಕರೆತಂದಾಗ ಮಧ್ಯರಾತ್ರಿಯಾಗಿತ್ತು. ಅವರೆ ಏನೇನು ಆಗಯತ್ತಿದೆ ಎಂಬುದನ್ನು ಹೇಳಿದರು. ಸ್ವಲ್ಪ ಸುಸ್ತಾಗಿದ್ದರು. 8-10 ಸಲ ಲೂಸ್ ಮೋಷನ್ ಆಗಿತ್ತಂತೆ. ಅದಾದ ಮೇಲೆ ವಾಮಿಂಟಿಂಗ್ ಕೂಡ ಆಗಿತ್ತು. ಇಲ್ಲಿಗೆ ಬಂದ ಮೇಲೆ ಎಲ್ಲಾ ರೀತಿಯ ತಪಾಸಣೆ ನಡೆಸಿದ್ದೀವಿ. ಬಿಪಿ ಕೂಡ ಚೆಕ್ ಮಾಡಿದ್ವಿ. ಕಡಿಮೆ ಇತ್ತು. ಒಂದು ಐಸಿಯುನಲ್ಲಿ ಇಟ್ಟಿದ್ದೆವು. ಇವತ್ತು ಸರಿ ಇದ್ದರು. ಬಳಿಕ ರಕ್ತ ಪರೀಕ್ಷೆ ಎಲ್ಲಾ ಮಾಡಿದ್ದೀವಿ. ಆರೋಗ್ಯ ಸರಿಯಾಗಿದ್ದರಿಂದ ಇವತ್ತು ಡಿಸ್ಚಾರ್ಜ್ ಮಾಡಿ ಕಳುಹಿಸಿದ್ದೇವೆ. ಮಾತ್ರೆಯೆಲ್ಲಾ ತೆಗೆದುಕೊಂಡಿರುವ ಉಅವ ಲಕ್ಷಣಗಳು ಕಾಣಿಸಲಿಲ್ಲ. ಗ್ಯಾಸ್ಟ್ರಿಕ್ ಸಮಸ್ಯೆ ಆಗಿದ್ದರಿಂದ ಲೂಸ್ ಮೋಷನ್ ಆಗಿದೆ. ಸೂಸೈಡ್ ಅಟೆಮ್ಟ್ ಆಗಿರುವ ಲಕ್ಷ ಕಂಡು ಬಂದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.