Left Ad
ವಿಭಿನ್ನ ಪೈಂಟಿ0ಗ್‌ನೊ0ದಿಗೆ ಮೌನ ಮುರಿದ ಪತ್ನಿ ವಿಜಯಲಕ್ಷ್ಮಿ; ವೈರಲ್ ಆಯ್ತು ಪೈ0ಟಿ0ಗ್! - Chittara news
# Tags

ವಿಭಿನ್ನ ಪೈಂಟಿ0ಗ್‌ನೊ0ದಿಗೆ ಮೌನ ಮುರಿದ ಪತ್ನಿ ವಿಜಯಲಕ್ಷ್ಮಿ; ವೈರಲ್ ಆಯ್ತು ಪೈ0ಟಿ0ಗ್!

 

ನಟ ದರ್ಶನ್ ಅಭಿಮಾನಿಗಳು ಕುಗ್ಗಿ ಹೋಗಿದ್ದಾರೆ. ನೆಚ್ಚಿನ ನಟ ವಿಚಾರಣಾಧೀನ ಕೈದಿಯಾಗಿ ಜೈಲು ಸೇರಿರುವುದು ಬೇಸರ ತಂದಿದೆ. ಇದೀಗ ದರ್ಶನ್ ಪತ್ನಿ ವಿಜಯ ಲಕ್ಷ್ಮಿ ಅಭಿಮಾನಿಗಳಲ್ಲಿ ವಿಶೇಷ ಮನವಿ ಮಾಡಿದ್ದಾರೆ. ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.ಇತ್ತೀಚೆಗೆ ವಿಜಯಲಕ್ಷ್ಮಿ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ದರ್ಶನ್ ಭೇಟಿ ಮಾಡಿ ಬಂದಿದ್ದರು. ಈ ವೇಳೆ ಪುತ್ರ ವಿನೀಶ್ ಕೂಡ ಜೊತೆಗಿದ್ದ. ಬಳಿಕ ವಿನೋದ್ ಪ್ರಭಾಕರ್ ಕೂಡ ದರ್ಶನ್ ಭೇಟಿ ಮಾಡಿದ್ದರು.

READ MORE: ‘ಟಾಕ್ಸಿಕ್’ ಚಿತ್ರದ ಬಗ್ಗೆ Latest Talks: ಯಾರಾಗ್ತಾರೆ ಯಶ್ ಹಿರೋಯಿನ್!

“ನನ್ನ ಪ್ರೀತಿಯ ಸಹೋದರರೇ, ದರ್ಶನ್ ಅವರಿಗೆ ನೀವು, ತಮ್ಮ ಅಭಿಮಾನಿಗಳು ಎಂದರೆ ಅಪಾರವಾದ ಪ್ರೀತಿ. ನೀವು ಅವರನ್ನು ಪ್ರೀತಿಸುವಷ್ಟೇ ಅವರು ತಮ್ಮ “ಸೆಲೆಬ್ರಿಟಿಗಳನ್ನು” ತನ್ನ ಹೃದಯದಲ್ಲೇ ಹೊತ್ತಿರುವುದು ನಿಮಗೇ ಗೊತ್ತಿದೆ” “ಇದೊಂದು ಪರೀಕ್ಷೆಯ ಸಮಯ. ನನಗೆ,ನಿಮಗೆ, ನಮ್ಮೆಲ್ಲರಿಗೆ. ನಾವು ತಾಳ್ಮೆ ಕಳೆದುಕೊಂಡು ಮಾತನಾಡುವುದರಿಂದ ಹಾನಿಯಾಗುವುದು ನಮಗೆ. ಆದ್ದರಿಂದ ತಾಳ್ಮೆ, ಶಾಂತಿಯಿಂದಿರೋಣ. ನಿಮ್ಮ ಆತಂಕವನ್ನು ನಾನು, ದರ್ಶನರಿಗೆ ತಲುಪಿಸಿದ್ದೇನೆ. ಅವರೂ ನಿಮ್ಮ ಪ್ರತಿ ಕಾಳಜಿ ವ್ಯಕ್ತಪಡಿಸಿದ್ದಾರೆ”

 

READ MORE : ‘ತಾಜ್’ ಟ್ರೈಲರ್ ರಿಲೀಸ್: ಶೀಘ್ರದಲ್ಲೇ ತೆರೆ ಮೇಲೆ ನೈಜ ಹಿಂದು-ಮುಸ್ಲಿ0 ಲವ್‌ಸ್ಟೋರಿ!

“ನಾವು ನಮ್ಮ ನ್ಯಾಯಾಲಯಗಳ ಮೇಲೆ ವಿಶ್ವಾಸವಿಡೋಣ. ನಮಗೆ ನ್ಯಾಯ ಸಿಗುವ ಸಂಪೂರ್ಣ ಭರವಸೆ ನನಗಿದೆ. ಇಂತಹ ಕಷ್ಟದ ಸಮದಲ್ಲಿ, ದರ್ಶನರ ಅನುಪಸ್ಥಿತಿಯನ್ನು ದುರುಪಯೋಗ ಪಡೆಸಿಕೊಂಡು ಅವರಿಗೆ ಕೇಡು ಬಯಸುವ/ಮಾಡುವವರನ್ನು ತಾಯಿ ಚಾಮುಂಡೇಶ್ವರಿ ನೋಡಿಕೊಳ್ಳುತ್ತಾಳೆ. ಒಳ್ಳೆಯ ಸಮಯ ಮತ್ತೆ ಮರಳಿ ಬರಲಿದೆ. ಸತ್ಯಮೇವ ಜಯತೆ” ಎಂದು ಪೋಸ್ಟ್ ಮಾಡಿದ್ದಾರೆ.  ಈ ವಿಭಿನ್ನ ಪೈಂಟಿ0ಗ್ ಸಧ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಈ ಅದ್ಭುತ ಪೈಂಟಿ0ಗ್ ರಚಿಸಿದ ಕಲಾಕಾರ ಯಾರು ಎಂದು ತಲಾಶ್ ಆರಂಭವಾಗಿದೆ. 

POST LINK:- https://www.instagram.com/p/C8rf8CGolVI/?utm_source=ig_web_copy_link&igsh=MzRlODBiNWFlZA==

 

 

 

 

 

Spread the love
Translate »
Right Ad