Sandalwood Leading OnlineMedia

ಡ್ರಾಮಾ ಜ್ಯೂನಿಯರ್ ಪಟ್ಟ ಪಡೆದ ಸಮೃದ್ಧಿ

ಡ್ರಾಮಾ ಜ್ಯೂನಿಯರ್ ಪಟ್ಟ ಪಡೆದ ಸಮೃದ್ಧಿ

ರ್ನಾಟಕದ ಅತಿ ದೊಡ್ಡ ಮಕ್ಕಳ ರಿಯಾಲಿಟಿ ಶೋ ಡ್ರಾಮಾ ಜೂನಿಯರ್ಸ್ ಸೀಸನ್ 4 ಗ್ರಾಂಡ್ ಫಿನಾಲೆ ಗೆ ಅದ್ಧೂರಿಯಾಗಿ ತೆರೆ ಬಿದ್ದಿದೆ . ಖಾಸಗಿ ಚಾನಲ್ ಪ್ರಸ್ತುತ ಪಡಿಸಿದ್ದ ಈ ಶೋ ಸತತ 23 ವಾರಗಳ ಕಾಲ ಇಡೀ ಕರುನಾಡನ್ನು ರಂಜಿಸಿ ಇಂದು ಕರ್ನಾಟಕದ ಮನೆಮನೆಯ ಮುದ್ದಾದ ಕಾರ್ಯಕ್ರಮವಾಗಿದೆ. ಇನ್ನು ಈ ಸೀಸನ್ ನ ವಿಜೇತರಾಗಿ ಕುಂದಾಪುರದ ಸಮೃದ್ಧಿ ಎಸ್ ಮೊಗವೀರ್ ರವರು ಹೊರಹೊಮ್ಮಿದ್ದಾರೆ.

https://www.instagram.com/p/Chh2BxPKnyQ/

ಸಮೃದ್ಧಿ ಅವರು “ನಾನು ಈ ಶೋ ಗೆದ್ದಿರೋದು ನನಗೆ  ತುಂಬ ಖುಷಿ ನೀಡಿದೆ. ನಾನು ಇಲ್ಲಿ ಕಲಿತಿರೋದನ್ನು ನನ್ನ ಗೆಳೆಯರಿಗೂ ಹೇಳಲು ಬಯಸುವೆ. ನನಗೆ ವೋಟ್ ಹಾಕಿದ ಎಲ್ಲರಿಗೂ ಧನ್ಯವಾದಗಳು” ಡ್ರಾಮಾ ಜ್ಯೂನಿಯರ್ಸ್ ನೋಡುತ್ತಿದ್ದ ನನಗೆ ಈ ಶೋಗೆ ಬರುವ ಆಸೆ ಮೊದಲಿನಿಂದಲೂ ಇತ್ತು. ಆಮೇಲೆ ಸೀಸನ್ 4 ಆಡಿಶನ್‌ಗೆ ಕರೆದಾಗ ನೋಡೋಣ ಅಂತ ಡೈಲಾಗ್ ಹೇಳಿ ಬಂದೆ, ಆ ಆಡಿಶನ್‌ನಲ್ಲಿ ಆಯ್ಕೆಯಾದೆ. ಮೆಗಾ ಆಡಿಶನ್‌ನಲ್ಲಿ ಪ್ರತಿಭಾವಂತ ಮಕ್ಕಳು ಬಂದಿದ್ದರು.ಅವರನ್ನು ನೋಡಿ ಭಯ ಆಗಿತ್ತು. ಆದರೂ ಕೂಡ ನನಗೆ ಬಂದಷ್ಟು ಆಕ್ಟಿಂಗ್ ಮಾಡಿದ್ದೆ, ಆಯ್ಕೆಯಾದೆ. ನಾನು ಆಯ್ಕೆಯಾಗಿದ್ದನ್ನು ನನಗೆ ನಂಬಲಾಗಲಿಲ್ಲ. ಟಿವಿ ಎಂದರೆ ಏನು ಅಂತ ನನಗೆ ಗೊತ್ತಿರಲಿಲ್ಲ, ಟಿವಿ ಒಡೆದುಕೊಂಡು ಹೋಗಿ ಅದರೊಳಗೆ ಆಕ್ಟಿಂಗ್ ಮಾಡಬೇಕು ಅಂತ ಅಂದುಕೊಂಡಿದ್ದೆ” ಎಂದು ಹೇಳಿದ್ದಾರೆ.

ಹಿರಿಯ ನಟಿ ಲಕ್ಷ್ಮಿ, ಕ್ರೇಜಿಸ್ಟಾರ್‌ ರವಿಚಂದ್ರನ್‌ ಹಾಗೂ ಡಿಂಪಲ್‌ ಕ್ವೀನ್‌ ರಚಿತಾ ರಾಮ್ ಈ ಬಾರಿಯ ತೀರ್ಪುಗಾರರಾಗಿದ್ದರೆ ಮಾಸ್ಟರ್‌ ಆನಂದ್‌ ಕಾರ್ಯಕ್ರಮದ ನಿರೂಪಣೆ ಮಾಡಿದ್ದರು. ಈ ಬಾರಿ ಸುಮಾರು 31 ಜಿಲ್ಲೆಗಳಲ್ಲಿ ನಡೆದ ಆಡಿಷನ್‌ನಲ್ಲಿ 15 ಸಾವಿರಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. ಅದರಲ್ಲಿ 15 ಮಕ್ಕಳು ಸ್ಪರ್ಧಿಗಳಾಗಿ ಆಯ್ಕೆಯಾಗಿದ್ದರು.

 

 

Share this post:

Translate »