Left Ad
ಕನ್ನಡಿಗರ ಹೃದಯಗಳಲ್ಲಿ ಸದಾ ಜೀವಂತ – 75ನೇ ಹುಟ್ಟುಹಬ್ಬದ ಅಂಗವಾಗಿ ವಿಷ್ಣುವರ್ಧನ್‌ಗೆ ವಿಶೇಷ ಗೌರವ - Chittara news
# Tags

ಕನ್ನಡಿಗರ ಹೃದಯಗಳಲ್ಲಿ ಸದಾ ಜೀವಂತ – 75ನೇ ಹುಟ್ಟುಹಬ್ಬದ ಅಂಗವಾಗಿ ವಿಷ್ಣುವರ್ಧನ್‌ಗೆ ವಿಶೇಷ ಗೌರವ

ಅದೊಂದು ಕೊರಗು ಅಭಿಮಾನಿಗಳ ವಲಯದಲ್ಲಿ ಇದ್ದೇ ಇತ್ತು. ಕನ್ನಡದ ಹೆಮ್ಮೆಯ ನಟ ವಿಷ್ಣುವರ್ಧನ್ ಅವರು ನಿಧನರಾಗಿ ೧೫ ವರ್ಷಗಳಾದರೂ ಅವರಿಗೆ ರಾಜ್ಯ ಸರ್ಕಾರದಿಂದ ‘ಕರ್ನಾಟಕ ರತ್ನ’ ಪ್ರಶಸ್ತಿ ಸಿಗಲಿಲ್ಲ ಎಂಬ ಬೇಸರ ಹಲವರಲ್ಲಿ ಇದ್ದೇ ಇತ್ತು. ಆ ಬೇಸರ ಕೊನೆಗೂ ಶಮನವಾಗಿದೆ. ಇತ್ತೀಚೆಗೆ ಡಾ. ವಿಷ್ಣುವರ್ಧನ್ ಮತ್ತು ಬಿ. ಸರೋಜಾ ದೇವಿ ಅವರಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿಯನ್ನು ಘೋಷಿಸಿ ಸರ್ಕಾರ ಆದೇಶ ಹೊರಡಿಸಿದೆ. ವಿಷ್ಣುವರ್ಧನ್ ಅವರ ೭೫ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಪ್ರಶಸ್ತಿ ಘೋಷಣೆಯಾಗಿರುವುದು, ಇದಕ್ಕಿಂತ ಇನ್ನೇನು ಸಿಹಿಸುದ್ದಿ ಬೇಕು?

ವಿಷ್ಣುವರ್ಧನ್ ಅವರಿಗೆ ಇಂಥದ್ದೊAದು ಪ್ರಶಸ್ತಿ ಯಾವತ್ತೋ ಬರಬೇಕಿತ್ತು. ಕಾರಣಾಂತರಗಳಿAದ ಅದು ತಡವಾಗಿದೆ. ೨೦೦೯ರಲ್ಲಿ ವಿಷ್ಣುವರ್ಧನ್ ಅವರು ನಿಧನರಾದಾಗಲೇ ಇಂಥದ್ದೊAದು ಕೂಗು ಕೇಳಿಬಂದಿತ್ತು. ಆದರೆ, ಅದು ಸಾಧ್ಯವಾಗಿರಲಿಲ್ಲ. ಈಗ ಜಂಟಿ ಹೋರಾಟದಿಂದ ಅದು ಸಾಧ್ಯವಾಗಿದೆ. ಒಂದು ಕಡೆ ಭಾರತಿ ವಿಷ್ಣವರ್ಧನ್ ಮತ್ತು ಅಳಿಯ ಅನಿರುದ್ಧ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ವಿಷ್ಣುವರ್ಧನ್ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಸಿಗಬೇಕೆಂದು ಮನವಿ ಮಾಡಿದ್ದರು. ಹಿರಿಯ ನಟಿಯರಾದ ಡಾ. ಜಯಮಾಲ, ಶ್ರುತಿ ಮತ್ತು ಮಾಳವಿಕಾ ಅವಿನಾಶ್ ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಬಂದಿದ್ದರು. ವಿಷ್ಣುವರ್ಧನ್ ಅವರ ಅಭಿಮಾನಿಗಳು ಆಗಾಗ ಬೇಡಿಕೆ ಇಡುತ್ತಲೇ ಇದ್ದರು. ಇದೆಲ್ಲದರ ಫಲವಾಗಿ ವಿಷ್ಣುವರ್ಧನ್ ಅವರಿಗೆ ಈ ಅಮೃತ ಮಹೋತ್ಸವ ವರ್ಷದಲ್ಲಿ ಕರ್ನಾಟಕ ಸರ್ಕಾರದ ಅತ್ಯುನ್ನತ ಪ್ರಶಸ್ತಿ ಸಿಕ್ಕಿದೆ.

ಕನ್ನಡ ಚಿತ್ರರಂಗ ಕಂಡ ಅತ್ಯಂತ ವರ್ಸಟೈಲ್ ನಟ ಎಂದರೆ ಅದು ವಿಷ್ಣುವರ್ಧನ್. ಅವರನ್ನು ‘ಸಾಹಸ ಸಿಂಹ’ ಎಂದು ಕರೆಯಲಾಗುತ್ತದಾದರೂ, ಅವರು ಬರೀ ಆಕ್ಷನ್ ಚಿತ್ರಗಳಿಗೆ ಮತ್ತು ಪಾತ್ರಗಳಿಗೆ ಸೀಮಿತವಾಗಲಿಲ್ಲ. ಎಲ್ಲಾ ರೀತಿಯ ಪಾತ್ರಗಳನ್ನು ಮಾಡಿದರು. ಯಾವುದೇ ಇಮೇಜಿಗೆ ಅಂತಿಕೊಳ್ಳದೆ ನಡೆದರು. ಅವರ ಸಮಕಾಲೀನರಾದ ಬೇರೆ ನಟರೆಲ್ಲಾ ಒಂದೊAದು ಇಮೇಜಿಗೆ ಅಂಟಿಕೊAಡರು. ಹಾಗಂತ ಅವರು ಬೇರೆ ಜಾನರ್‌ನ ಚಿತ್ರಗಳನ್ನು ಮಾಡಲಿಲ್ಲ ಎಂದರ್ಥವಲ್ಲ. ಎಲ್ಲಾ ರೀತಿಯ ಪಾತ್ರಗಳನ್ನು ಮಾಡಿದರು. ಆದರೆ, ಕಾರಣಾಂತರಗಳಿAದ ಒಂದು ಇಮೇಜಿಗೆ ಅಂಟಿಕೊAಡರು. ವಿಷ್ಣುವರ್ಧನ್ ಮಾತ್ರ ಹಾಗೆ ಮಾಡಲಿಲ್ಲ. ಅವರು ಎಲ್ಲಾ ರೀತಿಯ ಪಾತ್ರಗಳನ್ನು ಮಾಡಿದರು.

ಉದಾಹರಣೆಗೆ ೧೯೭೮ರ ವರ್ಷವನ್ನು ತೆಗೆದುಕೊಳ್ಳಿ. ಇದು ವಿಷ್ಣುವರ್ಧನ್ ಅವರ ಪಾಲಿಗೆ ಮಹತ್ವವಾದ ವರ್ಷ. ಏಕೆಂದರೆ, ಇದೊಂದೇ ವರ್ಷ ಅವರ ಅಭಿನಯದ ೧೫ ಚಿತ್ರಗಳು ಬಿಡುಗಡೆಯಾದವು. ವರ್ಷವೊಂದಕ್ಕೆ ವಿಷ್ಣುವರ್ಧನ್ ಅಭಿನಯದ ಇಷ್ಟೊಂದು ಚಿತ್ರಗಳು ಬಿಡುಗಡೆಯಾಗಿದ್ದು ಅದೇ ಮೊದಲು ಮತ್ತು ಅದೇ ಕೊನೆ. ಈ ೧೫ ಚಿತ್ರಗಳಲ್ಲಿ ಒಂದಕ್ಕಿAತ ಒಂದು ವಿಭಿನ್ನವಾದ ಪಾತ್ರಗಳನ್ನು ಅವರು ಮಾಡಿದ್ದಾರೆ. ವರ್ಷದ ಮೊದಲ ಚಿತ್ರವಾಗಿ ‘ಹೊಂಬಿಸಲು’ ಬಿಡುಗಡೆಯಾಯಿತು ಎಂದು ಹೇಳಲಾಗುತ್ತದೆ. ಈ ಚಿತ್ರದಲ್ಲಿ ವಿಷ್ಣುವರ್ಧನ್ ಡಾ. ನಟರಾಜ್ ಎಂಬ ವೈದ್ಯನ ಪಾತ್ರವನ್ನು ನಿರ್ವಹಿಸಿದ್ದರು. ಈ ಚಿತ್ರದ ಅಭಿನಯಕ್ಕಾಗಿ ಅವರಿಗೆ ರಾಜ್ಯ ಸರ್ಕಾರದಿಂದ ಅತ್ಯುತ್ತಮ ನಟ ಪ್ರಶಸ್ತಿಯೂ ಸಿಕ್ಕಿತ್ತು.

ಇದಾದ ನಂತರ ‘ಕಿಲಾಡಿ ಕಿಟ್ಟು’, ‘ವಂಶ ಜ್ಯೋತಿ’, ‘ಮುಯ್ಯಿಗೆ ಮುಯ್ಯಿ’, ‘ಪ್ರತಿಮಾ’, ‘ಸಿರಿತನಕ್ಕೆ ಸವಾಲ್’, ‘ಕಿಲಾಡಿ ಜೋಡಿ’, ‘ವಸಂತ ಲಕ್ಷಿö್ಮÃ’, ‘ಮಧುರ ಸಂಗಮ’, ‘ಸಿಂಗಾಪೂರ್‌ನಲ್ಲಿ ರಾಜ-ಕುಳ್ಳ’ ಮುಂತಾದ ಚಿತ್ರಗಳಲ್ಲಿ ನಟಿಸಿದರು. ಈ ಎಲ್ಲಾ ಚಿತ್ರಗಳಲ್ಲೂ ಅವರು ವಿಭಿನ್ನ ಪಾತ್ರಗಳಲ್ಲಿ ನಟಿಸಿರುವುದು ವಿಶೇಷ. ಅಷ್ಟೇ ಅಲ್ಲ, ಈ ಪೈಕಿ ಹಲವು ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸನ್ನೂ ಪಡೆದಿವೆ. ಬರೀ ಅದೊಂದೇ ವರ್ಷವಲ್ಲ, ವಿಷ್ಣುವರ್ಧನ್ ಅವರು ನಟಿಸಿದ ಚಿತ್ರಗಳನ್ನು ಗಮನಿಸಿದರೆ, ಈ ತರಹ ವಿಭಿನ್ನತೆ ಮೆರೆದಿದ್ದು ಮೆರೆದಿದ್ದು ವೃತ್ತಿಜೀವನದ ಪೂರಾ ಕಾಣುತ್ತದೆ.

ಬರೀ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಷ್ಟೇ ಅಲ್ಲ, ವಿಷ್ಣುವರ್ಧನ್ ಅವರು ಯಾವತ್ತು ಗೆಲುವು-ಸೋಲಿನ ಬಗ್ಗೆ ಯೋಚಿಸಿದವರಲ್ಲ. ೧೯೭೨ರಿಂದ ೧೯೯೭ರವರೆಗೂ ಅವರು ಚಿತ್ರಜೀವನವನ್ನು ಸೂಕ್ಷö್ಮವಾಗಿ ವಲೋಕಿಸಿದರೆ, ಅವರು ಯಾವತ್ತೂ ಕೆಲಸವನ್ನು ಕಡಿಮೆ ಮಾಡಲೇ ಇಲ್ಲ. ೧೯೯೦ರವರೆಗೂ ಪ್ರತೀ ವರ್ಷ ವಿಷ್ಣುವರ್ದನ್ ಅಭಿನಯದ ಎಂಟ್ಹತ್ತು ಚಿತ್ರಗಳು ಬಿಡುಗಡೆಯಾಗುತ್ತಿದ್ದವು. ಕೆಲವು ವರ್ಷಗಳಲ್ಲಿ ಆ ಸಂಖ್ಯೆ ಇನ್ನಷ್ಟು ಹೆಚ್ಚಿದ್ದೂ ಉಂಟು. ೧೯೯೦ರ ದಶಕದ ನಂತರ ವಿಷ್ಣುವರ್ಧನ್ ಅಭಿನಯದ ಚಿತ್ರಗಳ ಸಂಖ್ಯೆ ಸ್ವಲ್ಪ ಕಡಿಮೆಯಾಯಿತು. ಆದರೂ ವರ್ಷವೊಂದಕ್ಕೆ ಮಿನಿಮಮ್ ಐದು ಚಿತ್ರಗಳು ಬಿಡುಗಡೆಯಾಗುತ್ತಿದ್ದವು. ೨೦೦೦ದ ನಂತರ ಅದು ಸ್ವಲ್ಪ ಕಡಿಮಯಾಯಿತು. ಹಾಗಂತ ಒಂದೇ ಒಂದು ವರ್ಷವೂ ಅವರ ಅಭಿನಯದ ಚಿತ್ರವೊಂದು ಬಿಡುಗಡೆಯಾಗದೇ ಇರುವ ಉದಾಹರಣೆಯೇ ಇಲ್ಲ. ಆ ಮಟ್ಟಿಗೆ ವಿಷ್ಣುವರ್ಧನ್ ಅವರು ಕನ್ನಡ ಚಿತ್ರರಂಗ ಕಂಡ ಅತ್ಯಂತ veಡಿsಚಿಣiಟe ಮತ್ತು ಛಿoಟಿsisಣeಟಿಣ ನಟ ಎಂದರೆ ತಪ್ಪಿಲ್ಲ.

ವಿಷ್ಣುವರ್ಧನ್ ಅವರಿಗೆ ಸಿಕ್ಕಿರುವ ರಾಜ್ಯ ಪ್ರಶಸ್ತಿಗಳು

ವಿಷ್ಣುವರ್ಧನ್ ಅವರಿಗೆ ರಾಜ್ಯ ಸರ್ಕಾರದಿಂದ ಇದುವರೆಗೂ ಎರಡು ಪ್ರಮುಖ ಪ್ರಶಸ್ತಿಗಳು ಸಿಕ್ಕಿದ್ದವು. ಕನ್ನಡ ಚಿತ್ರರಂಗಕ್ಕೆ ಸಲ್ಲಿಸಿರುವ ಸೇವೆಯನ್ನು ಗುರುತಿಸಿ, ಅವರಿಗೆ ೨೦೦೮ರಲ್ಲಿ ಡಾ. ರಾಜಕುಮಾರ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ಅದಕ್ಕೂ ಮೊದಲೇ ೧೯೯೦ರಲ್ಲಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗಿತ್ತು. ವಿಷ್ಣುವರ್ಧನ್ ಅವರ ನಿಧನದ ನಂತರ, ಡಾ. ವಿಷ್ಣುವರ್ಧನ್ ಪ್ರಶಸ್ತಿಯನ್ನು ಸ್ಥಾಪಿಸಿ, ಜೀವಮನಾನದ ಸಾಧನೆ ಮಾಡಿದ ಚಿತ್ರರಂಗದ ಹಲವು ಗಣ್ಯರಿಗೆ ಪ್ರಶಸ್ತಿಯನ್ನು ನೀಡಲಾಯಿತು. ೧೯೯೯-೨೦೦೦ದಲ್ಲಿ ಈ ಪ್ರಶಸ್ತಿ ಸ್ಥಾಪನೆಯಾಗಿ, ಮೊದಲ ಪ್ರಶಸ್ತಿಯನ್ನು ಡಾ. ರಾಜಕುಮಾರ್ ಅವರ ಸಹೋದರ ವರದಪ್ಪನವರಿಗೆ ಮರಣೋತ್ತರವಾಗಿ ನೀಡಲಾಯಿತು. ಇದಲ್ಲದೆ, ವಿಷ್ಣುವರ್ಧನ್ ಅವರ ಅಭಿನಯಕ್ಕೆ ಏಳು ಬಾರಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ನೀಡಲಾಗಿದೆ. ವಿಶೇಷವೆಂದರೆ, ತಾವು ನಾಯಕನಾಗಿ ಅಭಿನಯಿಸಿದ ಮೊದಲ ಮತ್ತು ಕೊನೆಯ ಚಿತ್ರಗಳ ಅಭಿನಯಕ್ಕಾಗಿ ವಿಷ್ಣುವರ್ಧನ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದಿದ್ದಾರೆ. ವಿಷ್ಣುವರ್ಧನ್ ನಾಯಕರಾಗಿ ಅಭಿನಯಿಸಿದ ಮೊದಲ ಚಿತ್ರವೆಂದರೆ ಅದು ೧೯೭೨ರಲ್ಲಿ ಬಿಡುಗಡೆಯಾದ ‘ನಾಗರಹವು’. ಇನ್ನು, ಕೊನೆಯ ಚಿತ್ರವೆಂದರೆ ಅದು ೨೦೧೦ರಲ್ಲಿ ಬಿಡುಗಡೆಯಾದ ‘ಆಪ್ತರಕ್ಷಕ’. ಈ ಎರಡೂ ಚಿತ್ರಗಳ ಅಭಿನಯಕ್ಕಾಗಿ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿರುವುದರ ಜೊತೆಗೆ, ‘ಹೊಂಬಿಸಿಲು’, ‘ಬಂಧನ’, ‘ಲಯನ್ ಜಗಪತಿ ರಾವ್’, ‘ಲಾಲಿ’ ಮತ್ತು ‘ವೀರಪ್ಪ ನಾಯ್ಕ’ ಚಿತ್ರಗಳಲ್ಲಿನ ಅಭಿನಯಕ್ಕಾಗಿ ರಾಜ್ಯ ಸರ್ಕಾರದಿಂದ ಈ ಪ್ರಶಸ್ತಿ ಸಿಕ್ಕಿದೆ. ಡಾ. ರಾಜಕುಮಾರ್ ಅವರನ್ನು ಹೊರತುಪಡಿಸಿದರೆ, ಕನ್ನಡ ಚಿತ್ರರಂಗದಲ್ಲಿ ಈ ಪ್ರಶಸ್ತಿಯನ್ನು ಹೆಚ್ಚು ಬಾರಿ (೭ ಬಾರಿ) ಪಡೆದ ನಟರೆಂದರೆ ಅದು ವಿಷ್ಣುವರ್ಧನ್ ಮಾತ್ರ.

ದ್ವಿಪಾತ್ರಗಳಲ್ಲಿ ದಾಖಲೆ

ಈಗಿನ ಹೀರೋಗಳು ಒಂದು ಚಿತ್ರದಲ್ಲಿ ಒಂದು ಪಾತ್ರ ಮಾಡುವುದಕ್ಕೆ ಸುಸ್ತಾಗುವಾಗ, ವಿಷ್ಣುವರ್ಧನ್ ಅವರು ದಾಖಲೆಯ ೧೯ ಚಿತ್ರಗಳಲ್ಲಿ ದ್ವಿಪಾತ್ರಗಳಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ೧೯೭೯ರಲ್ಲಿ ಬಿಡುಗಡೆಯಾದ ‘ವಿಜಯ್ ವಿಕ್ರಮ್’ ಚಿತ್ರದಲ್ಲಿ ವಿಷ್ಣುವರ್ಧನ್ ಅವರು ಮೊದಲ ಬಾರಿಗೆ ದ್ವಿಪಾತ್ರಗಳಲ್‌ಲಿ ಕಾಣಿಸಿಕೊಂಡಿದ್ದರು. ನಂತರದ ವರ್ಷಗಳಲ್ಲಿ ‘ಕಾಳಿಂಗ’, ‘ನಾಗ ಕಾಳ ಭೈರವ’, ‘ಊರಿಗೆ ಉಪಕಾರಿ’, ‘ಕಲ್ಲು ವೀಣೆ ನುಡಿಯಿತು’, ‘ಸಿಡಿದೆದ್ದ ಸಹೋದರ’, ‘ಸೌಭಾಗ್ಯ ಲಕ್ಷಿö್ಮÃ’, ‘ಶವಿಶಂಕರ್’, ‘ಲಯನ್ ಜಗಪತಿ ರಾವ್’, ‘ಪೊಲೀಸ್ ಮತ್ತು ದಾದಾ’, ‘ಕಿಲಾಡಿಗಳು’, ‘ಮೋಜುಗಾರ ಸೊಗಸುಗಾರ’, ‘ಅಪ್ಪಾಜಿ’, ‘ಸೂರ್ಯವಂಶ’, ‘ಯಜಮಾನ’, ‘ದಿಗ್ಗಜರು’, ‘ಜಮೀನ್ದರ‍್ರು’ ಮತ್ತು ‘ಆಪ್ತರಕ್ಷಕ’ ಚಿತ್ರಗಳಲ್ಲಿ ದ್ವಿಪಾತ್ರಗಳಲ್ಲಿ ನಟಿಸಿದ್ದಾರೆ. ಇದಲ್ಲದೆ ಅವರು ‘ಸತ್ಯಂ ಶಿವಂ ಸುಂದರA’ ಚಿತ್ರದಲ್ಲಿ ಮೂರು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು ವಿಶೇಷ.

ನಿಧನದ ನಂತರವೂ ನಟನೆ

ಬಹುಶಃ ಇಡೀ ಭಾರತೀಯ ಚಿತ್ರರಂಗದಲ್ಲೇ ನಿಧನದ ನಂತರವೂ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ ಎಂದರೆ ಅದು ಡಾ. ವಿಷ್ಣುವರ್ಧನ್. ೨೦೦೯ರಲ್ಲಿ ವಿಷ್ಣುವರ್ಧನ್ ನಿಧನರಾದರು. ಅದಾಗಿ ಮರುವರ್ಷ ಅವರ ಕೊನೆಯ ಚಿತ್ರ ‘ಆಪ್ತರಕ್ಷಕ’ ಬಿಡುಗಡೆಯಾಯಿತು. ಇದಾದ ಮೇಲೂ ಅವರು ಮೂರು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ ಎಂಬುದು ವಿಶೇಷ. ಮೊದಲಿಗೆ ೨೦೧೬ರಲ್ಲಿ ಬಿಡುಗಡೆಯಾದ ‘ನಾಗರಹಾವು’ ಚಿತ್ರದಲ್ಲಿ ಅವರನ್ನು ಗ್ರಾಫಿಕ್ಸ್ ಮೂಲಕ ಸೃಷ್ಟಿಸಲಾಗಿತ್ತು. ಈ ಚಿತ್ರದಲ್ಲಿ ಅವರು ನಾಗರಾಜನಾಗಿ ಕಾಣಿಸಿಕೊಂಡಿದ್ದು, ಗ್ರಾಫಿಕ್ಸ್ ಮೂಲಕ ಅವರನ್ನು ತೋರಿಸಲಾಗಿತ್ತು. ೨೦೧೮ರಲ್ಲಿ ಬಿಡುಗಡೆಯಾದ ಅನಿರುದ್ಧ್ ಅಭಿನಯದ ‘ರಾಜಸಿಂಹ’ ಚಿತ್ರದಲ್ಲೂ ವಿಷ್ಣುವರ್ಧನ್ ಅವರನ್ನು ಗ್ರಾಫಿಕ್ಸ್ ಮೂಲಕ ಸೃಷ್ಟಿಸಲಾಗಿತ್ತು. ವಿಶೇಷವೆಂದರೆ, ಈ ಚಿತ್ರದಲ್ಲಿ ವಿಷ್ಣುವರ್ಧನ್ ಅವರು ನರಸಿಂಹೇಗೌಡರ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಈ ಪಾತ್ರವು, ‘ಸಿಂಹಾದ್ರಿಯ ಸಿಂಹ’ ಚಿತ್ರದ ನರಸಿಂಹೇಗೌಡರ ಪಾತ್ರದ ಮುಂದುವರೆದ ಭಾಗವಾಗಿತ್ತು. ಇದಲ್ಲದೆ, ಈ ವರ್ಷ ಬಿಡುಗಡೆಯಾದ ‘ಛೂ ಮಂತರ್’ ಚಿತ್ರದಲ್ಲಿ ‘ಆಪ್ತಮಿತ್ರ’ದಲ್ಲಿ ವಿಷ್ಣುವರ್ಧನ್ ನಿರ್ವಹಿಸಿದ್ದ ಡಾ. ವಿಜಯ್ ಪಾತ್ರವನ್ನು ನೆನಪಿಸುವ ಮತ್ತು ಅದರ ಮುಂದುವರೆದ ಪಾತ್ರವಾಗಿದೆ.

ಇದೆಲ್ಲಕ್ಕಿಂತ ವಿಶೇಷವೆಂದರೆ, ವಿಷ್ಣುವರ್ಧನ್ ಅವರ ವೃತ್ತಿಜೀವನದಲ್ಲಷ್ಟೇ ಅಲ್ಲ, ಕನ್ನಡ ಚಿತ್ರರಂಗದ ಕ್ಲಾಸಿಕ್ ಚಿತ್ರಗಳಲ್ಲೊಂದಾದ ‘ನಾಗರಹಾವು’ ಚಿತ್ರದ ಮುಂದುವರೆದ ಭಾಗ ಇದೀಗ ಬಿಡುಗಡೆಯಾಗಿದೆ. ‘ಚಾಮಯ್ಯ ಸನ್ ಆಫ್ ರಾಮಾಚಾರಿ’ ಎಂಬ ಈ ಚಿತ್ರವು, ‘ನಾಗರಹಾವು’ ಚಿತ್ರದ ಮುಂದುವರೆದ ಭಾಗವಾಗಿದ್ದು, ಆ ಚಿತ್ರದಲ್ಲಿನ ರಾಮಾಚಾರಿ ಪಾತ್ರವನ್ನು ಈ ಚಿತ್ರದಲ್ಲಿ ಜ್ಯೂನಿಯರ್ ವಿಷ್ಣುವರ್ಧನ್ ಎಂದೇ ಜನಪ್ರಿಯರಾಗಿರುವ ಜಯಶ್ರೀ ರಾಜ್ ಮುಂದುವರೆಸಿದ್ದಾರೆ. ಮೂಲ ಚಿತ್ರದಲ್ಲಿದ್ದ ರಾಮಾಚಾರಿ, ಚಾಮಯ್ಯ ಮೇಷ್ಟುç ಸೇರಿದಂತೆ ಹಲವು ಪಾತ್ರಗಳು, ಈ ಚಿತ್ರದಲ್ಲೂ ಮುಂದುವರೆದಿವೆ.

ಕನ್ನಡದ ಮೊದಲ ಪಂಚಭಭಾಷಾ ನಟ

ಕನ್ನಡದ ಹಲವು ನಟರು ಬೇರೆ ಭಾಷೆಗಳಲ್ಲಿ ನಟಿಸಿ ಬಂದಿದ್ದಾರೆ. ಕೆಲವರು ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ನಟಿಸುವ ಮೂಲಕ ಪಂಚಭಾಷಾ ನಟರೆಂದು ಜನಪ್ರಿಯರಾಗಿದ್ದಾರೆ. ಆ ಸಾಲಿನಲ್ಲಿ ಮೊದಲಿಗೆ ನಿಲ್ಲುವವರು ವಿಷ್ಣುವರ್ಧನ್. ಕನ್ನಡದ ಮೊದಲ ಪಂಚಭಾಷಾ ನಟ ಎಂಬ ಹೆಗ್ಗಳಿಗೆಗೆ ಪಾತ್ರವಾದ ಅವರು, ೧೯೭೩ರಲ್ಲೇ ‘ಅಳೈಗಳ್’ ಎಂಬ ತಮಿಳು ಚಿತ್ರವೊಂದರಲ್ಲಿ ನಟಿಸಿದ್ದರು. ೧೯೮೦ರ ದಶಕದಲ್ಲಿ ಹಲವು ಪರಭಾಷೆಯ ಚಿತ್ರಗಳಲ್ಲಿ ನಟಿಸಿದ ಅವರು, ‘ಅಡಿಮ ಚಂಗಲ’ ಮೂಲಕ ಮಲಯಾಳಂ ಚಿತ್ರರಂಗಕ್ಕೆ, ‘ಏಕ್ ನಯಾ ಇತಿಹಾಸ್’ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಮತ್ತು ‘ಸರ್ದಾರ್ ಧರ್ಮಣ್ಣ’ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಹೊರಟರು. ಹಿಂದಿಯಲ್ಲೇ ವಿಷ್‌ಣುವರ್ಧನ್ ಅವರು ಮೂರು ಚಿತ್ರಗಳಲ್ಲಿ ನಟಿಸಿದ್ದು, ಈ ಪೈಕಿ ‘ಪೊಲೀಸ್ ಮತ್ತು ದಾದಾ’ ಹಾಗೂ ‘ವಿಷ್ಣು ವಿಜಯ’ ಚಿತ್ರಗಳು ಕನ್ನಡ ಮತ್ತು ಹಿಂದಿಯಲ್ಲಿ ಏಕಕಾಲಕ್ಕೆ ನಿರ್ಮಾಣಗೊಂಡ ಚಿತ್ರಗಳಾಗಿದ್ದವು. ಇದಲ್ಲದೆ, ಅವರು ‘ಜಾಲಿಮ್’ ಎಂಬ ಚಿತ್ರದಲ್ಲೂ ನಟಿಸಿದ್ದರು. ಈ ಮೂರು ಚಿತ್ರಗಳಲ್ಲಿ ಅವರು ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುವುದರ ಜೊತೆಗೆ, ಎರಡು ಚಿತ್ರಗಳಲ್ಲಿ ಹಿಂದಿಯ ಜನಪ್ರಿಯ ನಟ ಅಕ್ಷಯ್ ಕುಮಾರ್ ಸಹ ನಟಿಸಿದ್ದರು.

Spread the love
Translate »
Right Ad