ಪೃಥ್ವಿ ಅಂಬಾರ್ ನಟನೆಯ ಸುಕೇಶ್ ಶೆಟ್ಟಿ ನಿರ್ದೇಶನದ ದೂರದರ್ಶನ ಚಿತ್ರಕ್ಕೆ Mysuru international Film festival ನಲ್ಲಿ “ಅತ್ತ್ಯತ್ತಮ ಕನ್ನಡ ಚಲನ ಚಿತ್ರ” ಪ್ರಶಸ್ತಿ.ದೂರದರ್ಶನ`ಸುಕೇಶ್ ಶೆಟ್ಟಿ ನಿರ್ದೇಶನಲ್ಲಿ, ವಿ ಎಸ್ ಮೀಡಿಯಾ ಬ್ಯಾನರ್ ಅಡಿಯಲ್ಲಿ ರಾಜೇಶ್ ಭಟ್ ನಿರ್ಮಾಣ ದಲ್ಲಿ ಮೂಡಿಬಂದಿರೋ ಸಿನಿಮಾ ಈಗಾಗಲೇ ೧೮ ಡಿಜಿಟಲ್ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ಸ್ ಗಳಲ್ಲಿ ಚಿತ್ರ ಲಭ್ಯವಿದ್ದು ಎಲ್ಲರೂ ವೀಕ್ಷಿಸಬಹುದು.
೮೦-೯೦ ರ ದಶಕದ ಕಥಾ ಹಂದರವನ್ನ ಹಾಸ್ಯ ಸನ್ನಿವೇಶಗಳ ಜೊತೆ ಕಟ್ಟಿಕೊಡುತ್ತ ಒಂದು ಕಾಲ್ಪನಿಕ ಊರಿನಲ್ಲಿರುವ ಮನೆಗೆ ಮೊದಲ ಬಾರಿ ಟೆಲಿವಿಷನ್ ಬಂದಾಗ ಆಗುವ ವಿಷಯದ ಸುತ್ತ ಮಜವಾಗಿ ಹೆಣೆದಿರುವ ಕಥೆ ನೋಡುಗರನ್ನ ಮನ ರಂಜಿಸುತ್ತಿದೆ.ಇತ್ತೀಚೆಗೆ ಮೈಸರೂರಿನಲ್ಲಿ ನಡೆದ international film festival -೨೩ ರಲ್ಲಿ ಅತ್ತ್ಯತ್ತಮ ಕನ್ನಡ ಚಲನ ಚಿತ್ರ ಪ್ರಶಸ್ತಿಯ ಗರಿಯನ್ನ ತನ್ನದಾಗಿಸಿಕೊಂಡಿದೆ.
ಪೃಥ್ವಿ ಅಂಬರ್ ನಾಯಕ ನಟನಾಗಿ ನಟಿಸಿದ್ದು, ಸುಂದರ್ ,ಉಗ್ರಂ ಮಂಜು ಮತ್ತು ಅಯಾನ ಮುಖ್ಯ ಭೂಮಿಕೆಯಲ್ಲಿದ್ದಾರೆ.