Sandalwood Leading OnlineMedia

ಟ್ರೇಲರ್ ಮೂಲಕ ಪ್ರೇಕ್ಷಕರಿಗೆ ಹತ್ತಿರವಾದ `ದೂರದರ್ಶನ’

ಸುಕೇಶ್ ಶೆಟ್ಟಿ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ದೂರದರ್ಶನ’ ಸಿನಿಮಾ ಸ್ಯಾಂಡಲ್ ವುಡ್ ಅಂಗಳದಲ್ಲಿ ನಿರೀಕ್ಷೆ ಹುಟ್ಟಿಸಿದೆ. ಮಾರ್ಚ್ 3ರಂದು ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಚಿತ್ರದಲ್ಲಿ ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಹಾಗೂ ಅಯಾನ ನಾಯಕ, ನಾಯಕಿಯಾಗಿ ನಟಿಸಿದ್ದಾರೆ. ಡ್ರಾಮಾ ಹಾಗೂ ಹ್ಯೂಮರ್ ಸಬ್ಜೆಕ್ಟ್ ಒಳಗೊಂಡ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದೆ.  ನಾಯಕ ಪೃಥ್ವಿ ಅಂಬರ್ ಮಾತನಾಡಿ ಈ ಸಿನಿಮಾ ಎಲ್ಲರಿಗೂ ತುಂಬಾ ಹತ್ತಿರ ಆಗುತ್ತೆ. ಒಂದು ಕಾದಂಬರಿ ಓದಿದ ಅನುಭವವನ್ನು ಈ ಸಿನಿಮಾ ಎಲ್ಲರಿಗೂ ನೀಡುತ್ತೆ. ನಾನು ಮನು ಎಂಬ ಪಾತ್ರ ಮಾಡಿದ್ದೇನೆ. ಬಾಲ್ಯದಲ್ಲಿ ಮಾಡಿದ ತರಲೆ ಎಲ್ಲವನ್ನು ಈ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ನಿರ್ದೇಶಕರು ತುಂಬಾ ಚೆನ್ನಾಗಿ ಈ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ದೂರದರ್ಶನ ಒಂದು ಒಳ್ಳೆಯ ಕಟೆಂಟ್ ಸಿನಿಮಾ. ಲವ್ ಸ್ಟೋರಿ, ಕಾಮಿಡಿ, ಎಮೋಷನ್ಸ್ ಎಲ್ಲವೂ ಈ ಚಿತ್ರದಲ್ಲಿದೆ. ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಿ ಎಂದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡ್ರು.

ಮಾರ್ಚ್ 3ಕ್ಕೆ, ಬಹುನಿರೀಕ್ಷಿತ ಸಸ್ಪೆನ್ಸ್-ಥ್ರಿಲ್ಲರ್ ‘ಒಂದಂಕೆ ಕಾಡು’ ರಿಲೀಸ್

ನಾಯಕಿ ಅಯಾನ ಮಾತನಾಡಿ ಈ ಸಿನಿಮಾ ನಮ್ಮ ನಿರ್ದೇಶಕರ ಡ್ರೀಮ್ ಪ್ರಾಜೆಕ್ಟ್. ಈ ಚಿತ್ರದಲ್ಲಿ ನನಗೆ ಅವಕಾಶ ಕೊಟ್ಟಿದಕ್ಕೆ ತುಂಬಾ ಧನ್ಯವಾದ ತಿಳಿಸುತ್ತೇನೆ. ಚಿತ್ರದಲ್ಲಿ ಮೈತ್ರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಸಿಂಪಲ್ ಹುಡುಗಿ ಪಾತ್ರ. ಲವ್ ಸ್ಟೋರಿ ಕೂಡ ಇದೆ. ಎಲ್ಲಾ ಕಲಾವಿದರೊಂದಿಗೆ ನಟಿಸಿದ್ದು ತುಂಬಾ ಖುಷಿ ಕೊಟ್ಟಿದೆ ಎಂದು ಸಂತಸ ಹಂಚಿಕೊಂಡ್ರು. ನಿರ್ದೇಶಕ ಸುಕೇಶ್ ಶೆಟ್ಟಿ ಮಾತನಾಡಿ ಈ ಸಿನಿಮಾ ಈ ಮಟ್ಟಿಗೆ ಬಂದು ನಿಂತಿದೆ ಅಂದ್ರೆ ಅದಕ್ಕೆ ಕಾರಣ ನಮ್ಮ ನಿರ್ಮಾಪಕರು. ಅವರಿಗೆ ನಾನು ಧನ್ಯವಾದ ತಿಳಿಸುತ್ತೇನೆ. ಸಿನಿಮಾ ಮಾರ್ಚ್ 3ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರ ಒಂದಷ್ಟು ವಿಷಯಗಳಿಗೆ ಸ್ಪೆಷಲ್ ಎನಿಸಿಕೊಳ್ಳುತ್ತೆ. ರೆಗ್ಯೂಲರ್ ಸ್ಟೈಲ್ ಬಿಟ್ಟು ತುಂಬಾ ಆಪ್ತವಾಗೋ ಹಾಗೆ ಸಿನಿಮಾವನ್ನು ನರೇಟ್ ಮಾಡಲಾಗಿದೆ. ಎರಡು ಕಾಲು ಗಂಟೆ ಒಂದು ಊರೊಳಗೆ ಹೋಗಿ ಎಂಜಾಯ್ ಮಾಡಿದ ಅನುಭವವನ್ನು ಈ ಸಿನಿಮಾ ಪ್ರತಿಯೊಬ್ಬರಿಗೂ ನೀಡಲಿದೆ. ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಿ ಎಂದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡ್ರು. ನಿರ್ಮಾಪಕ ರಾಜೇಶ್ ಭಟ್ ಮಾತನಾಡಿ ಈ ಸಿನಿಮಾ ಕೇವಲ ನನ್ನೊಬ್ಬನಿಂದ ಆಗಿಲ್ಲ. ತಾಂತ್ರಿಕ ವರ್ಗ, ಕಲಾವಿದರ ಸಹಕಾರ ಇವರೆಲ್ಲರಿಂದ ಈ ಸಿನಿಮಾ ಆಗಿದೆ. ನಿರ್ದೇಶಕ ಸುಕೇಶ್ ಶೆಟ್ಟಿ ಜೊತೆ ಕೆಲಸ ಮಾಡಿದ್ದು ತುಂಬಾ ಹೆಮ್ಮೆ ಎನಿಸುತ್ತೆ. ಎಲ್ಲರ ಸಪೋರ್ಟ್ ಸಿನಿಮಾ ಮೇಲೆ ಇರಲಿ ಎಂದು ತಿಳಿಸಿದ್ರು.

ಗಮನಸೆಳೆಯುತ್ತಿದೆ ಮೇಘನಾ ರಾಜ್ ನಟನೆಯ `ತತ್ಸಮ ತದ್ಭವ’ ಪೋಸ್ಟರ್

 

ಉಗ್ರಂ ಮಂಜು ಮಾತನಾಡಿ ಇಡೀ ತಂಡ ಶ್ರಮ ಹಾಗೂ ಪ್ರೀತಿಯಿಂದ ಮಾಡಿರುವ ಸಿನಿಮಾ ‘ದೂರದರ್ಶನ’. ಚಿತ್ರದಲ್ಲಿ ಕಿಟ್ಟಿ ಎಂಬ ಪಾತ್ರ ಮಾಡಿದ್ದೇನೆ. 80.90ರ ದಶಕದಲ್ಲಿ ನೋಡುವ ಸ್ನೇಹ, ದ್ವೇಷ ಜೊತೆಗೆ ಕುಟುಂಬದ ಕನಸನ್ನು ನೆರವೇರಿಸುವ ಹುಡುಗನ ಪಾತ್ರ. ಎಲ್ಲಾ ಕಲಾವಿದರು, ತಾಂತ್ರಿಕ ವರ್ಗದ ಸಹಕಾರದಿಂದ ಈ ಚಿತ್ರ ಈ ಮಟ್ಟಿಗೆ ಬಂದಿದೆ. ನಿರ್ದೇಶಕ ಸುಕೇಶ್ ಶೆಟ್ಟಿ ನನಗೆ ಕಥೆ ಹೇಳುವಾಗ ಏನು ಪ್ರಾಮಿಸ್ ಮಾಡಿದ್ದರೋ ಹಾಗೆಯೇ ಸಿನಿಮಾ ಮೂಡಿ ಬಂದಿದೆ. ಅವರ ಎಫರ್ಟ್ ನೋಡಿ ಹೆಮ್ಮೆ ಎನಿಸುತ್ತೆ. ಮಾರ್ಚ್ 3ರಂದು ಎಲ್ಲರೂ ಸಿನಿಮಾ ನೋಡಿ ನಮ್ಮ ತಂಡವನ್ನು ಪ್ರೋತ್ಸಾಹಿಸಿ ಎಂದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡ್ರು.  ವಿ ಎಸ್ ಎಂಟರ್ಟೈನ್ಮೆಂಟ್ ಬ್ಯಾನರ್ ನಡಿ ರಾಜೇಶ್ ಭಟ್ ಚಿತ್ರವನ್ನು ನಿರ್ಮಾಣ ಮಾಡಿದ್ದು, ಉಗ್ರಂ ಮಂಜು ಕಾರ್ಯಕಾರಿ ನಿರ್ಮಾಣ ಚಿತ್ರಕ್ಕಿದೆ. ಉಗ್ರಂ ಮಂಜು, ಸುಂದರ್, ಹರಿಣಿ, ದೀಪಕ್ ರೈ ಪಾಣಾಜೆ, ರಘು ರಮಣಕೊಪ್ಪ, ಹುಲಿ ಕಾರ್ತಿಕ್, ಸೂರಜ್ ಮಂಗಳೂರು, ಸೂರ್ಯ ಕುಂದಾಪುರ ಒಳಗೊಂಡ ತಾರಾಗಣ ಚಿತ್ರದಲ್ಲಿದೆ. ಅರುಣ್ ಸುರೇಶ್ ಕ್ಯಾಮೆರಾ ವರ್ಕ್, ಪ್ರದೀಪ್ ಆರ್ ರಾವ್ ಸಂಕಲನ, ನಂದೀಶ್ ಟಿ ಜಿ ಸಂಭಾಷಣೆ, ವಾಸುಕಿ ವೈಭವ ಸಂಗೀತ ಚಿತ್ರಕ್ಕಿದೆ.

Share this post:

Related Posts

To Subscribe to our News Letter.

Translate »