Sandalwood Leading OnlineMedia

ಧರಣಿ ಮಂಡಲ ಮಧ್ಯದೊಳಗೆ ಸಿನಿಮಾ ನೋಡಿ ಮೆಚ್ಚಿ ಕೊಂಡಾಡಿದ ಡಾಲಿ ಧನಂಜಯ, ಶ್ರುತಿ ಹರಿಹರನ್

 

ಶ್ರೀಧರ್ ಶಿಕಾರಿಪುರ ನಿರ್ದೇಶನದ ಚೊಚ್ಚಲ ಸಿನಿಮಾ ‘ಧರಣಿ ಮಂಡಲ ಮಧ್ಯದೊಳಗೆ’ ಬಿಡುಗಡೆಯಾಗಿ ಎಲ್ಲೆಡೆ ದೊಡ್ಡ ಮಟ್ಟದ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ವಿಮರ್ಶಕರಿಂದ ಹಾಗೂ ಸಿನಿಮಾ ನೋಡಿದ ಪ್ರತಿಯೊಬ್ಬ ಪ್ರೇಕ್ಷಕರು ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನಟ ಡಾಲಿ ಧನಂಜಯ್ ಹಾಗೂ ನಟಿ ಶ್ರುತಿ ಹರಿಹರನ್ ಕೂಡ ಸಿನಿಮಾ ವೀಕ್ಷಿಸಿದ್ದು ಸಿನಿಮಾ ತಂಡಕ್ಕೆ ಸಾಥ್ ನೀಡಿದ್ದಾರೆ.

 

ನಟಿ ಶ್ರುತಿ ಹರಿಹರನ್ ಮಾತನಾಡಿ ಟೈಟಲ್ ಕೇಳಿದಾಗಲೇ ಸಿನಿಮಾದಲ್ಲಿ ಏನಿರಬಹುದು ಎಂಬ ಕುತೂಹಲವಿತ್ತು. ಆದ್ರೆ ಸಿನಿಮಾ ನೋಡಿದ ಮೇಲೆ ಇಷ್ಟೊಂದು ಇಷ್ಟವಾಗುತ್ತೆ ಎಂದು ನಿರೀಕ್ಷೆಯೇ ಮಾಡಿರಲಿಲ್ಲ. ಬರವಣಿಗೆ, ಕಲಾವಿದರ ಅಭಿನಯ ತುಂಬಾ ಅದ್ಭುತವಾಗಿದೆ. ಪ್ರತಿ ಪಾತ್ರಗಳು ನಮಗೆ ಹತ್ತಿರ ಅನ್ನಿಸುತ್ತೆ. ನಿರ್ದೇಶಕರು ಸಿನಿಮಾ ಹೆಣೆದ ರೀತಿ, ಬರವಣಿಗೆ ತುಂಬಾ ಚೆನ್ನಾಗಿದೆ. ಪ್ರತಿ ಪಾತ್ರಕ್ಕೂ ಕಥೆಯಲ್ಲಿ ನ್ಯಾಯ ಒದಗಿಸಿದ್ದಾರೆ. ನವೀನ್ ಶಂಕರ್, ಐಶಾನಿ ಶೆಟ್ಟಿ, ಯಶ್ ಶೆಟ್ಟಿ, ನಿರ್ಮಾಪಕ ಓಂಕಾರ್ ಕೂಡ ಅದ್ಭುತವಾಗಿ ನಟಿಸಿದ್ದಾರೆ. ಗುಳ್ಟು ಚಿತ್ರದಿಂದಲೇ ನಾನು ನವೀನ್ ಶಂಕರ್ ಫ್ಯಾನ್. ನವೀನ್ ಕನ್ನಡ ಇಂಡಸ್ಟ್ರಿಯ ಅದ್ಭುತ ನಟ. ಇಡೀ ತಂಡಕ್ಕೆ ಒಳ್ಳೆಯದಾಗಲಿ. ಎಲ್ಲರೂ ಬಂದು ಸಿನಿಮಾ ನೋಡಿ ಎಂದು ಚಿತ್ರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ರು.

 

‘ಥಗ್ಸ್ ಆಫ್ ರಾಮಘಡ’ ಮೊದಲ ಸಾಂಗ್ ಬಿಡುಗಡೆ- ಮುಂದಿನ ವರ್ಷ ಸಿನಿಮಾ ತೆರೆಗೆ

ಡಾಲಿ ಧನಂಜಯ್ ಮಾತನಾಡಿ ಈ ಸಿನಿಮಾ ಬಗ್ಗೆ ಎಷ್ಟು ಮಾತನಾಡಿದ್ರು ಕಡಿಮೆಯೇ. ಕೊನೆವರೆಗೂ ಸಿನಿಮಾ ಹಿಡಿದಿಡುತ್ತೆ. ಸಿನಿಮಾದ ಪ್ರತಿಕ್ಷಣನೂ ತುಂಬಾ ಚೆನ್ನಾಗಿತ್ತು. ರೈಟಿಂಗ್, ಕ್ಯಾಮೆರಾ ವರ್ಕ್ ಎಲ್ಲವೂ ಅದ್ಭುತವಾಗಿದೆ. ನಿರ್ದೇಶಕ ಶ್ರೀಧರ್ ಶಿಕಾರಿಪುರ ಕನ್ನಡ ಚಿತ್ರರಂಗಕ್ಕೆ ಒಳ್ಳೆಯ ಗಿಫ್ಟ್ ಎನ್ನಬಹುದು. ಪ್ರತಿಯೊಬ್ಬ ಕಲಾವಿದರು ಪಾತ್ರಕ್ಕೆ ಜೀವ ತುಂಬಿದ್ದಾರೆ. ಇದು ಗೆಲ್ಲಬೇಕಾಗಿರೋ ಸಿನಿಮಾ. ಈ ಸಿನಿಮಾ ನೋಡಿ ಮೆಚ್ಚಿ ಒಂದು ಚಾನೆಲ್ ದೊಡ್ಡ ಆಫರ್ ಕೊಟ್ಟಿದೆ. ನಾಳೆ ಟಿವಿಯಲ್ಲೋ, ಒಟಿಟಿಯಲ್ಲೋ ಬಿಡುಗಡೆಯಾದ ಮೇಲೆ ನೋಡಿ ಚಿತ್ರಮಂದಿರದಲ್ಲಿ ಸಿನಿಮಾ ಮಿಸ್ ಮಾಡಿಕೊಂಡ್ವಿ ಅನ್ನೋದಕ್ಕಿಂತ ಈಗಲೇ ಸಿನಿಮಾ ನೋಡಿ ಎಂದು ಮನಸಾರೆ ಚಿತ್ರತಂಡಕ್ಕೆ ಶುಭ ಕೋರಿದ್ರು.  ಚಿತ್ರದ ನಿರ್ಮಾಪಕ ಒಂಕಾರ್ ಮಾತನಾಡಿ ಧನಂಜಯ್ ಸರ್ ಹಾಗೂ ಶ್ರುತಿ ಹರಿಹರನ್ ಅವರು ತಮ್ಮ ಬ್ಯುಸಿ ಶೆಡ್ಯೂಲ್ ನಡುವೆ ನಮ್ಮಂತ ಹೊಸಬರ ಬೆನ್ನು ತಟ್ಟಲು ಬಂದಿದ್ದಾರೆ. ಅವರ ಪ್ರೀತಿ, ಸಹಕಾರಕ್ಕೆ ಧನ್ಯವಾದಗಳು. ಒಂದು ಹೊಸ ಪ್ರಯತ್ನವನ್ನು ಹೊಸ ತಂಡ ಮಾಡಿದ್ದೇವೆ. ಆದಷ್ಟು ಬೇಗ ಎಲ್ಲರೂ ಸಿನಿಮಾ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ ಎಂದು ತಿಳಿಸಿದ್ರು. 

 

‘ಕಬ್ಜ’ಚಿತ್ರದ ಹಿಂದಿ ಅವತರಣಿಕೆ ಹಕ್ಕುಗಳು ಬಾಲಿವುಡ್ನ ಪ್ರತಿಷ್ಠಿತ ನಿರ್ಮಾಣ ಮತ್ತು ವಿತರಣಾ ಸಂಸ್ಥೆಯ ತೆಕ್ಕೆಗೆ: ಹಿಂದಿ ಟೀಸರ್ಗೆ ಬಾಲಿವುಡ್ ಫಿದಾ

ಧರಣಿ ಮಂಡಲ ಮಧ್ಯದೊಳಗೆ ಸಿನಿಮಾ ಡಿಸೆಂಬರ್ 2ರಂದು ಬಿಡುಗಡೆಯಾಗಿದ್ದು, ಚಿತ್ರದಲ್ಲಿ ಯಶ್ ಶೆಟ್ಟಿ, ಸಿದ್ದು ಮೂಲಿಮನಿ, ಪ್ರಕಾಶ್ ತುಮ್ಮಿನಾಡು, ಒಂಕಾರ್, ನಿತೇಶ್ ಮಹಾನ್, ಜಯಶ್ರೀ ಆರಾಧ್ಯ, ಶಾಂಭವಿ ಒಳಗೊಂಡ ತಾರಾಗಣವಿದೆ. ಬಾಕ್ಸ್ ಆಫೀಸ್ ಸಿನಿ ಕ್ರಿಯೇಷನ್ಸ್ ಬ್ಯಾನರ್ ನಡಿ ಒಂಕಾರ್ ಸಿನಿಮಾವನ್ನು ನಿರ್ಮಾಣ ಮಾಡಿದ್ದು. ವೀರೇಂದ್ರ ಕಂಚನ್, ಗೌತಮಿ ರೆಡ್ಡಿ ಸಹ ನಿರ್ಮಾಣವಿದೆ. ಕೀರ್ತನ್ ಪೂಜಾರಿ ಕ್ಯಾಮೆರಾ ವರ್ಕ್, ರೋಣದ ಬಕ್ಕೇಶ್, ಕಾರ್ತಿಕ್ ಚೆನ್ನೋಜಿರಾವ್ ಸಂಗೀತ ನಿರ್ದೇಶನ, ಉಜ್ವಲ್ ಚಂದ್ರ ಸಂಕಲನ ಚಿತ್ರಕ್ಕಿದೆ.

 

 

 

Share this post:

Related Posts

To Subscribe to our News Letter.

Translate »