Sandalwood Leading OnlineMedia

ಡಾಲರ್ಸ್ ಪೇಟೆ’ ಸೇರಿದ ಮದಗಜ ಕುಶಾಲ್ಸ್…ಫಸ್ಟ್ ಲುಕ್ ಪೋಸ್ಟರ್ ರಿಲೀಸ್

ಟೈಟಲ್ ಮೂಲಕ‌ ನಿರೀಕ್ಷೆ ಹೆಚ್ಚಿಸಿರುವ ಡಾಲರ್ಸ್ ಪೇಟೆ ಸಿನಿಮಾದಿಂದ ಹೊಸ ಅಪ್ ಡೇಟ್ ಸಿಕ್ಕಿದೆ. ಕೆಲ ದಿನಗಳ ಹಿಂದೆ ಡಾನ್ ಪಳನಿ ಪೋಸ್ಟರ್ ಅನಾವರಣ  ಮಾಡಿದ್ದ ಚಿತ್ರತಂಡ ಇದೀಗ ಮತ್ತೊಬ್ಬ ಪ್ರಮುಖ ಪಾತ್ರಧಾರಿಯನ್ನು ಪರಿಚಯಿಸಿದೆ.  ಮದಗಜ ಹಾಗೂ ಜೇಮ್ಸ್ ಚಿತ್ರಗಳಲ್ಲಿ ನಟಿಸಿದ್ದ ಕುಶಾಲ್ಸ್, ರಾಜ ಎಂಬ ಪಾತ್ರದಲ್ಲಿ ಅಭಿನಯಿಸಿದ್ದು, ಅವರ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.  ಮಾರ್ಫಿ, ಮದಗಜ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ ಮೋಹನ್ ಎನ್  ಮುನಿನಾರಾಯಣಪ್ಪ ಡಾಲರ್ಸ್ ಪೇಟೆ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದು, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಈಗಾಗಲೇ ಚಿತ್ರೀಕರಣ ಮಾಡಿರುವ ಡಾಲರ್ಸ್ ಪೇಟೆ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಶೀಘ್ರದಲ್ಲಿಯೇ ಟೀಸರ್ ರಿಲೀಸ್ ಮಾಡಲು ಯೋಜನೆ ಹಾಕಿಕೊಂಡಿದೆ.

ಅದ್ಭುತ ಪ್ರತಿಕ್ರಿಯೆ ಪಡೆದುಕೊಂಡ `ಉಂಡೆನಾಮ’ Trailer :  ಚಿತ್ರ ಏಪ್ರಿಲ್ 14 ರಂದು ತೆರೆಗೆ

 

ಹೈಪರ್ ಲಿಂಕ್ ಥ್ರಿಲ್ಲರ್ ‌ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ಲೂಸಿಯಾ ಪವನ್ ಪತ್ನಿ ಸೌಮ್ಯ ಜಗನ್ ಮೂರ್ತಿ, ಆಕರ್ಷ್ ಕಮಲ, ವೆಂಕಟ್, ರಾಜ್, ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದು, ದಿಯಾ ಪೃಥ್ವಿ ಅಂಬರ್ ಗೆಸ್ಟ್ ಅಪಿಯರೆನ್ಸ್ ಚಿತ್ರದಲ್ಲಿದೆ. ಉಳಿದಂತೆ ದತ್ತು ಬಣಕರ್, ಕೌಶಿಲ್, ರಾಘವೇಂದ್ರ, ಹೊನ್ನವಳ್ಳಿ, ಡ್ರಾಮಾ ಜೂನಿಯರ್ಸ್ ಮಹೇಂದ್ರ ಒಳಗೊಂಡ ಕಲಾಬಳಗ ಚಿತ್ರದಲ್ಲಿದೆ. ಸೂರಜ್ ಜೋಯಿಸ್ ಸಂಗೀತ ನಿರ್ದೇಶನ, ಆನಂದ್ ಸುಂದರೇಶ ಛಾಯಾಗ್ರಹಣ, ಮಹೇಶ್ ತೊಗಟ್ಟ ಸಂಕಲನ, ಅರ್ಜುನ್ ರಾಜ್ ಮತ್ತು ನರಸಿಂಹ ಸಾಹಸ ನಿರ್ದೇಶನ, ರಮೇಶ್ ಎಸ್, ಮನೋಹರ ಸಹಬರವಣಿಗೆ ಸಿನಿಮಾಕ್ಕಿದೆ. ಪೆಂಟ್ರಿಕ್ಸ್ ಎಂಟಟೈನ್ಮೆಂಟ್ ಬ್ಯಾನರ್ ನಡಿ ಪೂಜಾ ಟಿ.ವೈ ಚಿತ್ರ ನಿರ್ಮಾಣ ಮಾಡಿದ್ದಾರೆ.

Share this post:

Related Posts

To Subscribe to our News Letter.

Translate »