ಈ ಫೊಟೋದಲ್ಲಿರುವ ಪುಟ್ಟ ಬಾಲಕಿ ಈಗ ಸ್ಯಾಂಡಲ್ವುಡ್ನ ಖ್ಯಾತ ನಟಿ. ತುಂಟಿಯಾಗಿ ಕಾಣಿಸ್ತಿರೋ ಈ ಬಾಲೆ ಯಾರು ಗೊತ್ತಾ? ಸ್ಯಾಂಡಲ್ವುಡ್ನಲ್ಲಿ ರೀಸೆಂಟ್ ಆಗಿ ಹಿಟ್ ಸಿನಿಮಾ ಕೊಟ್ಟ ಈ ನಟಿ ಈಗ ತಂದೆಯ ರ‍್ತ್ಡೇಗೆ ಈ ಫೋಟೋ ಮೂಲಕ ವಿಶ್ ಮಾಡಿದ್ದಾರೆ. ಯಾರಂತ ಗೆಸ್ ಮಾಡಿ ನೋಡೋಣ.
ಇದನ್ನೂ ಓದಿ:Very Talented : ಚೈತ್ರ ಆಚಾರ್
ಗುಂಡು ಮುಖದ ಈ ಚೆಲುವೆ ಅವರ ಲೇಟೆಸ್ಟ್ ಸಿನಿಮಾಗಳಿಂದಾಗಿ ಮುನ್ನೆಲೆಗೆ ಬಂದರು. ಎರಡು ಸಿನಿಮಾಗಳನ್ನು ಬ್ಯಾಕ್ ಟು ಬ್ಯಾಕ್ ಮಾಡುವ ಮೂಲಕ ಈ ಚೆಲುವೆಗೆ ಕನ್ನಡ ಮಾತ್ರವಲ್ಲದೆ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ತಕ್ಷಣದ ಫೇಮ್ ಸಿಕ್ಕಿದೆ. ಬಹುತೇಕ ಹೆಚ್ಚಿನ ಸಮಯದಲ್ಲಿ ಈ ನಟಿ ನ್ಯಾಚುರಲ್ ಬ್ಯೂಟಿಯಾಗಿರುತ್ತಾರೆ.
ಅಂದ ಹಾಗೆ ಈ ಪುಟ್ಟ ಪೋರಿ ಈಗ ಸುಂದರಿಯಾಗಿದ್ದಾರೆ. ಅಷ್ಟೇ ಅಲ್ಲದೆ ಇವರಿಗೆ ಎಳನೀರು ಕುಡಿಯೋದು ಅಂದ್ರೆ ತುಂಬಾ ಇಷ್ಟ. ಕೈಯಲ್ಲಿ ಎಳನೀರು ಹಿಡಿದು ಬಾಯಿಗೆ ಒತ್ತಿ ಪಕ್ಕಾ ದೇಸಿ ಸ್ಟೈಲ್ನಲ್ಲಿ ಎಳನೀರು ಕುಡಿದೇ ಬಿಡುತ್ತಾರೆ. ಈಗಲಾದರೂ ಗೊತ್ತಾಯ್ತಾ?
ಇದನ್ನೂ ಓದಿ:Holi Festival: ಹೋಳಿ ಹಬ್ಬದಂದು ಕಲರ್ ಕಲರ್ ಹಾಡಿಗೆ ನಟಿ ಸುಧಾರಾಣಿ ಮಸ್ತ್ ಸ್ಟೆಪ್ಸ್
ಗುಂಡು ಮುಖದ ಈ ಹುಡುಗಿ ಪುಟ್ಟ ಬಾಲೆ ಇದ್ದಾಗ ಎಷ್ಟು ಚೂಟಿಯೋ ಈಗ ಅಷ್ಟೇ ಕ್ಯೂಟ್. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದು ಆಗಾಗ ಫೋಟೋಸ್ ಹಾಗೂ ವಿಡಿಯೋಸ್ಗಳನ್ನು ತಮ್ಮ ಅಭಿಮಾನಿಗಳ ಜೊತೆ ಶೇರ್ ಮಾಡುತ್ತಲೇ ಇರುತ್ತಾರೆ.
ಇದು ಬೇರೆ ಯಾರೂ ಅಲ್ಲ. ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ನಟಿಸಿರುವ ರುಕ್ಮಿಣಿ ವಸಂತ್. ಹೋದಲ್ಲೆಲ್ಲಾ ಎಳನೀರು ಕುಡಿಯುವ ಅಪ್ಪಟ ಕನ್ನಡತಿ ಹುಡುಗಿ. ಅವರು ತಂದೆಯ ಜನ್ಮದಿನದಂದು ವಿಶೇಷವಾಗಿ ಈ ಫೋಟೋ ಮೂಲಕ ವಿಶ್ ಮಾಡಿದ್ದಾರೆ.
ಇದನ್ನೂ ಓದಿ:ಹೊಸಪೇಟೆಯಲ್ಲಿ ಅದ್ದೂರಿಯಾಗಿ ನೆರವೇರಿತು ಹೊಂಬಾಳೆ ಫಿಲಂಸ್ ನಿರ್ಮಾಣದ “ಯುವ” ಚಿತ್ರದ ಪ್ರೀ ರಿಲೀಸ್ ಇವೆಂಟ್ .
ರುಕ್ಮಿಣಿ ವಸಂತ್ ಅವರು ಎಳನೀರು ಪ್ರಿಯೆ. ಎಲ್ಲಿ ಹೋದರೂ ಅವರು ಎಳನೀರು ಖರೀದಿಸಿ ಕುಡಿಯುತ್ತಾರೆ. ಸಾಫ್ಟ್ ಡ್ರಿಂಕ್ಸ್, ಜ್ಯೂಸ್ ಬದಲಾಗಿ ನಟಿ ನ್ಯಾಚುರಲ್ ಎಳನೀರು ಕುಡಿದು ಚಿಲ್ ಮಾಡ್ತಾರೆ.
ಸ್ಯಾಂಡಲ್ವುಡ್ನ ಬ್ಯೂಟಿ ರುಕ್ಮಿಣಿ ವಸಂತ್ ತನ್ನ ಮುದ್ದು ಮುಖ ಹಾಗೂ ಅದ್ಭುತ ಅಭಿನಯದಿಂದ ಅಭಿಮಾನಿಗಳ ಹೃದಯ ಕದ್ದಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಯಶಸ್ಸಿನ ಬಳಿಕ ರುಕ್ಮಿಣಿಗೆ ಸಾಲು ಸಾಲು ಸಿನಿಮಾ ಆರ‍್ಗಳು ಬಂದಿದೆ. ತೆಲುಗಿನಲ್ಲೂ ಸಪ್ತ ಸಾಗರದಾಚೆ ಸಿನಿಮಾ ಉತ್ತಮ ಪ್ರರ‍್ಶನ ಕಂಡಿತು. ಬಳಿಕ ಟಾಲಿವುಡ್ನಲ್ಲೂ ರುಕ್ಮಿಣಿ ವಸಂತ್ಗೆ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ತೆಲುಗು ಸಿನಿಮಾ ಆಫರ್ ಕೈ ಬೀಸಿ ಕರೆಯುತ್ತಿವೆ.
ಇದನ್ನೂ ಓದಿ :ಬೇಸಿಗೆಯ ಬಿಸಿಲಿನಲ್ಲಿ ಜಲಪಾತಕ್ಕೆ ಬಿದ್ದು ತಂಪು ಮಾಡಿಕೊಂಡ ಸಾನ್ಯಾ..!
ನಟಿ ರುಕ್ಮಿಣಿ ವಸಂತ್ ಇದೀಗ ತಮ್ಮ ಮೊದಲ ತೆಲುಗು ಚಿತ್ರಕ್ಕೆ ಸಹಿ ಹಾಕಿದ್ದಾರೆ. ತೆಲುಗಿನ ಮಾಸ್ ರಾಜ ರವಿತೇಜಗೆ ರುಕ್ಮಿಣಿ ವಸಂತ್ ಜೋಡಿಯಾಗಿದ್ದಾರೆ. ಖ್ಯಾತಿಯ ನರ‍್ದೇಶಕ ಕೆವಿ ಅನುದೀಪ್ ಜೊತೆ ಕೆಲಸ ಮಾಡಲು ರುಕ್ಮಿಣಿ ಕಾಯ್ತಿದ್ದಾರೆ. ಬರ‍್ಬಲ್ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟ ರುಕ್ಮಿಣಿ ವಸಂತ್ ಮಾಡಿರೋದು ಕೆಲವೇ ಸಿನಿಮಾ ಆದ್ರು ರ‍್ನಾಟಕದ ಕ್ರಶ್ ಆಗಿ ಮಿಂಚುತ್ತಿದ್ದಾರೆ. ರಶ್ಮಿಕಾ ಬಳಿಕ ರುಕ್ಮಿಣಿ ನ್ಯಾಷನಲ್ ಕ್ರಶ್ ಆಗೋದು ಪಕ್ಕಾ ಎನ್ನಲಾಗ್ತಿದೆ.
ಇದನ್ನೂ ಓದಿ:ಬ್ಲೌಸ್ ಇಲ್ಲದೆ ಹಳೆಯ ಕಾಲದವರಂತೆ ಸೀರೆ ಉಟ್ಟ ಪ್ರಿಯಾಮಣಿ! ದೈವಿಕ ಕಳೆ ಇದೆ ಎಂದ ಫ್ಯಾನ್ಸ್
ಸಪ್ತಸಾಗರದಾಚೆ ಸಿನಿಮಾ ಬಳಿಕ ಗಣೇಶ್ ಜೊತೆ ಬಾನದಾರಿಯಲ್ಲಿ ಸಿನಿಮಾ ಮೂಲಕ ಸ್ಕ್ರೀನ್ ಮೇಲೆ ಮಿಂಚಿದ್ರು. ಶಿವಣ್ಣ ಭೈರತಿ ರಣಗಲ್ ಸಿನಿಮಾದಲ್ಲೂ ರುಕ್ಮಿಣಿ ವಸಂತ್ ನಾಯಕಿಯಾಗಿದ್ದಾರೆ. ಶ್ರೀಮುರಳಿ ಬಹುನಿರೀಕ್ಷಿತ ಸಿನಿಮಾ ‘ಬಘೀರ’ದಲ್ಲೂ ನಟಿ ರುಕ್ಮಿಣಿ ವಸಂತ್ ನಾಯಕಿಯಾಗಿದ್ದಾರೆ ಕನ್ನಡದಲ್ಲಿ ರುಕ್ಮಿಣಿ ವಸಂತ್ ಬ್ಯುಸಿ ನಟಿಯಾಗಿದ್ದಾರೆ. ಈ ಮೂಲಕ ಟಾಪ್ ನಟಿಯರ ಲಿಸ್ಟ್ ಸೇರಿದ್ದಾರೆ.