Sandalwood Leading OnlineMedia

ಕನಸುಗಾರನ `P.L-2’ಗೆ ನಾಯಕಿ ಯಾರು ಗೊತ್ತಾ!?

ಕ್ರೇಜಿಸ್ಟಾರ್ ರವಿಚಂದ್ರನ್ ‘ಪ್ರೇಮಲೋಕ’ ಸಿನಿಮಾ ಬರೆದ ದಾಖಲೆಗಳು ಒಂದೆರಡಲ್ಲ. ರವಿಚಂದ್ರನ್ ನಿರ್ಮಿಸಿ, ನಿರ್ದೇಶಿಸಿ, ನಟಿಸಿದ ಈ ರೊಮ್ಯಾಂಟಿಕ್ ಮ್ಯೂಸಿಕಲ್ ಲವ್ ಸ್ಟೋರಿ ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನ ಸೃಷ್ಟಿಸಿತ್ತು. ಸದ್ಯ ‘ಪ್ರೇಮಲೋಕ’-2 ಮಾಡಲು ಕ್ರೇಜಿಸ್ಟಾರ್ ಮುಂದಾಗಿದ್ದಾರೆ.‘ಪ್ರೇಮಲೋಕ’ ಸಿನಿಮಾ ಮಾಡುವ ಬಗ್ಗೆ ರವಿಚಂದ್ರನ್ ಸಾಕಷ್ಟು ಬಾರಿ ಮಾತನಾಡಿದ್ದಾರೆ. ಶೀಘ್ರದಲ್ಲೇ ಆ ಸಿನಿಮಾ ಸೆಟ್ಟೇರಲಿದೆ. ಪುತ್ರ ಮನೋರಂಜನ್ ಹೀರೊ ಆಗಿ ನಟಿಸಲಿದ್ದಾರೆ. ಬಹಳ ಹಿಂದೆಯೇ ಮಗನನ್ನು ಹೀರೊ ಮಾಡಿ ‘ಪ್ರೇಮಲೋಕದಲ್ಲಿ ರಣಧೀರ’ ಎನ್ನುವ ಚಿತ್ರವನ್ನು ಕ್ರೇಜಿಸ್ಟಾರ್ ಆರಂಭಿಸಿದ್ದರು. ಆದರೆ ಬಳಿಕ ಆ ಸಿನಿಮಾ ನಿಂತಿತ್ತು.

READ MORE; ಶರಣ್ ಅಭಿನಯದ “ಛೂ ಮಂತರ್” ಚಿತ್ರದ ಬಿಡುಗಡೆ ಮುಂದಕ್ಕೆ .

10 ವರ್ಷಗಳ ಹಿಂದೆ ತಮ್ಮ ಹುಟ್ಟುಹಬ್ಬದ ದಿನ ನೈಸ್ ರಸ್ತೆಯಲ್ಲಿ ಸೆಟ್ ಆಗಿ ಸಿನಿಮಾ ಮುಹೂರ್ತ ನೆರವೇರಿಸಿದ್ದರು. ಆದರೆ ಆಗ ಸಿನಿಮಾ ನಿಂತು ಬಳಿಕ ಬೇರೊಂದು ಸಿನಿಮಾ ಮೂಲಕ ಮನೋರಂಜನ್ ಚಿತ್ರರಂಗಕ್ಕೆ ಬಂದಿದ್ದರು. ಇದೀಗ ಸರಿಯಾಗಿ 10 ವರ್ಷಗಳ ಬಳಿಕ ಅದೇ ದಿನ ಅಂದರೆ ತಮ್ಮ ಹುಟ್ಟುಹಬ್ಬದ ದಿನವೇ ‘ಪ್ರೇಮಲೋಕ’-2 ಚಿತ್ರಕ್ಕೆ ಚಾಲನೆ ಸಿಗುತ್ತದೆ ಎನ್ನಲಾಗ್ತಿದೆ.ಸದ್ಯ ರವಿಚಂದ್ರನ್ ‘ಪ್ರೇಮಲೋಕ’-2 ಚಿತ್ರದ ಕಥೆ, ಚಿತ್ರಕಥೆ ಸಿದ್ಧಪಡಿಸುತ್ತಿದ್ದಾರೆ. ಹಂಪಿ ಉತ್ಸವದಲ್ಲಿ ಮಾತನಾಡುತ್ತಾ ಕ್ರೇಜಿಸ್ಟಾರ್ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. “ಮುಂದಿನ ವರ್ಷವೇ ‘ಪ್ರೇಮಲೋಕ’-2 ಸಿನಿಮಾ ತೆರೆಗೆ ತರುತ್ತೇನೆ. ಈ ಬಾರಿ ಪ್ರಯೋಗ ಮಾಡಲ್ಲ. ನನಗೆ ಇಷ್ಟವಾಗುವಂತಹ ಸಿನಿಮಾ ಅಲ್ಲ. ನಿಮಗೆ ಇಷ್ಟವಾಗುವಂತಹ ಸಿನಿಮಾ ಮಾಡ್ತೀನಿ. 20 ರಿಂದ 25 ಹಾಡುಗಳು ಇರುತ್ತವೆ” ಎಂದಿದ್ದರು.

READ MORE ; “I’m Superstitious about – RCB winning IPL! ‘’ -Manikanth Kadri ; Chittara Exclusive

‘ಪ್ರೇಮಲೋಕ’-2 ಚಿತ್ರಕ್ಕೆ ಯಾರು ನಾಯಕಿ ಆಗಬಹುದು? ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಕನ್ನಡ ಚಿತ್ರರಂಗಕ್ಕೆ ಹಲವು ನಟಿಯರನ್ನು ಕ್ರೇಜಿಸ್ಟಾರ್ ಪರಿಚಯಿಸಿದ್ದಾರೆ. ಬೇರೆ ಭಾಷೆಯ ನಟಿಯರನ್ನು ಕನ್ನಡಕ್ಕೆ ಕರೆ ತಂದಿದ್ದಾರೆ. ‘ಪ್ರೇಮಲೋಕ’ ಚಿತ್ರಕ್ಕಾಗಿ ಜ್ಯೂಹಿ ಚಾವ್ಲಾ ಕನ್ನಡಕ್ಕೆ ಬಂದಿದ್ದರು. ಆದರೆ ಈ ಬಾರಿ ಮನೋರಂಜನ್ ಜೊತೆ ಚೆನ್ನೈ ಚೆಲುವೆ ತೇಜು ಅಶ್ವಿನಿ ರೊಮ್ಯಾನ್ಸ್ ಮಾಡುತ್ತಾರೆ ಎನ್ನುವ ಗುಸುಗುಸು ಶುರುವಾಗಿದೆ.

‘ಮೂಡ್ರಾಂ ಕಣ್’, ‘ಎನ್ನ ಸೊಲ್ಲ ಪೋಗಿರೆ’, ‘ಕಾಥು ವಾಕಲ್ ರೆಂಡು ಕಾದಲ್’, ‘ಪ್ಯಾರೀಸ್ ಜಯರಾಜ್’ ಎನ್ನುವ ತಮಿಳು ಸಿನಿಮಾ ತೇಜು ಅಶ್ವಿನಿ ನಟಿಸಿದ್ದಾರೆ. ‘ಪ್ರೇಮಲೋಕ’-2 ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುವ ಸಾಧ್ಯತೆಯಿದೆ. ಮೇ 30ಕ್ಕೆ ಚಿತ್ರದ ಮುಹೂರ್ತದ ದಿನ ಈ ಬಗ್ಗೆ ಮಾಹಿತಿ ಸಿಗುವ ಸಾಧ್ಯತೆಯಿದೆ. ಡ್ಯಾನ್ಸರ್ ಹಾಗೂ ಕೊರಿಯೋಗ್ರಫರ್ ಆಗಿಯೂ ಆಕೆ ಗುರ್ತಿಸಿಕೊಂಡಿದ್ದಾರೆ. ರವಿಚಂದ್ರನ್ ಹಲವು ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಆದರೂ ‘ಪ್ರೇಮಲೋಕ’ ಮೀರಿಸುವ ಸಿನಿಮಾ ಮಾಡಲು ಅವರಿಂದಲೂ ಸಾಧ್ಯವಾಗಲಿಲ್ಲ. 1987ರಲ್ಲಿ ಬಿಡುಗಡೆಯಾದ ಈ ಚಿತ್ರವನ್ನು ಕನ್ನಡ ಸಿನಿರಸಿಕರು ಇನ್ನು ಮರೆತ್ತಿಲ್ಲ. ಇದೀಗ ಆ ಪ್ರೇಮಕಾವ್ಯವನ್ನು ನೆನಪಿಸುವಂತಹ ಮತ್ತೊಂದು ದೃಶ್ಯಕಾವ್ಯ ಕಟ್ಟಲು ಮುಂದಾಗಿದ್ದಾರೆ. 2017ರಲ್ಲಿ ‘ಸಾಹೇಬ’ ಸಿನಿಮಾ ಮೂಲಕ ಮನೋರಂಜನ್ ಚಿತ್ರಂಗಕ್ಕೆ ಬಂದರು. ‘ಬೃಹಸ್ಪತಿ’, ‘ಮುಗಿಲ್‌ಪೇಟೆ’, ‘ಪ್ರಾರಂಭ’ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. ಆದರೆ ದೊಡ್ಡ ಬ್ರೇಕ್ ಮಾತ್ರ ಸಿಗಲಿಲ್ಲ. ಪ್ರೇಮಲೋಕದ ಪ್ರೇಮಿಯಾಗಿಯೇ ಸಿನಿಪ್ರೇಮಿಗಳನ್ನು ರಂಜಿಸಲು ಮನಸ್ಸು ಮಾಡಿದ್ದಾರೆ. ಶೀಘ್ರದಲ್ಲೇ ಅವರ ಕನಸು ನನಸಾಗಲಿದೆ. 

 

Share this post:

Related Posts

To Subscribe to our News Letter.

Translate »