ಡಾಲಿ ಧನಂಜಯ್ ನಟನೆಯ ‘ಕೋಟಿ ಸಿನಿಮಾ ರಿಲೀಸ್ಗೆ ರೆಡಿ ಇದೆ. ಜೂನ್ 14ರಂದು ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಪರಮ್ ಅವರು ಈ ಚಿತ್ರ ನಿರ್ದೇಶನ ಮಾಡಿದ್ದಾರೆ. ಪರಮೇಶ್ವರ್ ಗುಂಡ್ಕಲ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಇದು ಅವರ ಚೊಚ್ಚಲ ಚಿತ್ರ. ವಾಸುಕಿ ವೈಭವ್ ಈ ಸಿನಿಮಾದ ಹಾಡುಗಳಿಗೆ ಸಂಗೀತ ನೀಡಿದ್ದಾರೆ.
ಇದನ್ನೂ ಓದಿ :“My Favorite Possession – a CD gifted by Chiru’’ – Meghana Raj Sarja : chittara exclusive
ಈ ಚಿತ್ರಕ್ಕೆ ಮೋಕ್ಷಾ ಕುಶಾಲ್ ನಾಯಕಿ. ಮೋಕ್ಷಾ ಅವರು ಈಗತಾನೇ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಅವರಿಗೆ ಧನಂಜಯ್ ಜೊತೆ ನಟಿಸೋ ಅವಕಾಶ ಸಿಕ್ಕಿದೆ. ನವಮಿ ಅನ್ನೋದು ಅವರ ಸಿನಿಮಾದ ಪಾತ್ರದ ಹೆಸರು. ಈ ಚಿತ್ರ ಗಮನ ಸೆಳೆಯುವ ಸೂಚನೆ ಸಿಕ್ಕಿದೆ. ಶಾಲಾ ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಕ್ರೀಡೆಗಳಲ್ಲಿ ಹೆಚ್ಚಾಗಿ ಭಾಗವಹಿಸುತ್ತಿದ್ದ ಮೋಕ್ಷಾ ಕುಶಾಲ್ ನಟನೆಗೆ ಬರಲು ಮಾಡೆಲಿಂಗ್ ಕಾರಣವಂತೆ.
ಎಂಜಿನಿಯರಿಂಗ್ ಓದುವಾಗ ಕಾಲೇಜು ಫೆಸ್ಟ್ನ ಫ್ಯಾಷನ್ ಶೋಗಳಲ್ಲಿ ಹೆಚ್ಚು ಭಾಗವಹಿಸುತ್ತಿದ್ದ ಅವರಿಗೆ ಸಾಂಸ್ಕೃತಿಕ ಕಾರ್ಯಕ್ರಮದ ಬಳಿಕ ಅಭಿಮಾನಿಗಳು ಫೋಟೋ ಕ್ಲಿಕ್ಕಿಸಿಕೊಳ್ಳತ್ತಿದ್ದರಂತೆ. ಆ ಕ್ರೇಜ್ ನೋಡಿನೇ ಸಿನಿಮಾ ರಂಗಕ್ಕೆ ಬರುವ ಮನಸ್ಸು ಮಾಡಿದ್ದಾರೆ.
ಇದನ್ನೂ ಓದಿ :ತೆಲುಗು ಇಂಡಸ್ಟ್ರಿಯಲ್ಲೂ ಜರ್ನಿ ಶುರು ಮಾಡಿದ ಸಪ್ತಮಿ ಗೌಡ
ಮೋಕ್ಷಾ ಕುಶಾಲ್ ಅವರಿಗೆ ಜಾಹೀರಾತುಗಳಲ್ಲಿ ನಟಿಸಿದ ಅನುಭವ ಇದೆ. ಅವರು ಕೊಡಗು ಮೂಲದವರು. ಅವರಿಗೆ ಸಿನಿಮಾ ರಂಗದಲ್ಲಿ ಗೆಲುವು ಕಾಣಲು ಈ ಚಿತ್ರ ಸಾಕಷ್ಟು ಮುಖ್ಯವಾಗಲಿದೆ. ಮೋಕ್ಷಾ ಕುಶಾಲ್ ಅವರು ಇನ್ಸ್ಟಾಗ್ರಾಮ್ನಲ್ಲಿ ಗ್ಲಾಮರಸ್ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಈ ಫೋಟೋಗಳು ಗಮನ ಸೆಳೆದಿವೆ. ಸದ್ಯ ಕೋಟಿ ಸಿನಿಮಾ ಮೂಲಕ ಬೆಳ್ಳಿ ತೆರೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ.