ಹೆಚ್ಚಿನ ಜನ ಮನರಂಜನೆಗಾಗಿ ಓಟಿಟಿಯನ್ನೇ ಅವಲಂಬಿಸಿದ್ದಾರೆ. ಥಿಯೇಟರ್ ನಲ್ಲಿ ಸಿನಿಮಾ ರಿಲೀಸ್ ಆದರೂ ಕೂಡ ಅಷ್ಟಾಗಿ ಥಿಯೇಟರ್ ಕಡೆಗೆ ಬರುತ್ತಿಲ್ಲ. ಹೊಸದಾಗಿ ಯಾವ ಸಿನಿಮಾ, ವೆಬ್ ಸೀರಿಸ್ ಸ್ಟ್ರೀಮಿಂಗ್ ಆಗುತ್ತದೆ ಎಂದು ಕಾದು ಕೂತಿರುತ್ತಾರೆ. ಹಾಗಾದರೆ ಈ ವಾರ ಯಾವೆಲ್ಲಾ ಸಿನಿಮಾ, ವೆಬ್ ಸೀರಿಸ್ ಪ್ರೈಂ ವೀಡಿಯೋ, ನೆಟ್ಫ್ಲಿಕ್ಸ್, ಜೀ5, ಜಿಯೋ ಸಿನಿಮಾದಲ್ಲಿ ರಿಲೀಸ್ ಆಗುತ್ತದೆ ಎಂಬ ಮಾಃಇತಿ ಇಲ್ಲಿದೆ ನೋಡಿ.
ಅಮೇಜಾನ್ ಪ್ರೈಂ ನಲ್ಲಿ ಬಹುನಿರೀಕ್ಷಿತ ‘ಆಡುಜೀವಿತಂ’ಸಿನಿಮಾ ಬರುತ್ತದೆ ಎನ್ನುವ ನಿರೀಕ್ಷೆಯಿದೆ. ಉಳಿದಂತೆ ಡೋರಾಮ್ಯಾನ್ ಸೀಸನ್ -19, ಷಿನ್ಚಿನ್ ಸೀಸನ್-16, ದಿ ಕರ್ದಾಷಿಯನ್ಸ್, ಸೀಸನ್-5, ದಿ ಬೀಚ್ ಬಾಯ್ಸ್, ರೋಲಾಂಡ್ ಗಾರೋಸ್, ಮಾರ್ವೆಲ್ ಸ್ಟುಡಿಯೋಸ್: ಅಸೆಂಬುಲ್ಡ್: ದಿ ಕಿಂಗ್ ಆಫ್ ಎಕ್ಸ್ಮನ್, ಪಾಲೈನ್ ಸ್ಟ್ರೀಮಿಂಗ್ ಆಗಲಿದೆ.
ನೆಟ್ಫ್ಲಿಕ್ಸ್ ನಲ್ಲಿ ಇಲ್ಲೂಜನ್ಸ್ ಫರ್ ಸೇಲ್, ಫ್ರಾಂಕೋ ಎಸ್ಕಾಮಿಲ್ಲಾ: ಲೇಡಿಸ್ಮ್ಯಾನ್, ಇನ್ ಗುಡ್ ಹ್ಯಾಂಡ್ಸ್-2, ಅಟ್ಲಾಸ್, ಗಾಡೋಡೆನ್ನ್ ದಿ ವೇ ಆಫ್ ಲೋನ್ ಊಲ್ಫ್, ಮೈ ಓನ್ಲಿ ಗರ್ಲ್, ಮುಲ್ಲಿಗನ್ ಪಾರ್ಟ್-2 ಸೇರಿದಂತೆ ಹಲವು ಸಿನಿಮಾಗಳು ಒಟಿಟಿಗೆ ಬರುತ್ತಿವೆ.