Left Ad
ಪವಿತ್ರಾ ಗೌಡಗೆ ಜಾಮೀನು ಸಿಗಲು ಕಾರಣವಾದ ಅಂಶಗಳು ಯಾವುವು ಗೊತ್ತಾ? - Chittara news
# Tags

ಪವಿತ್ರಾ ಗೌಡಗೆ ಜಾಮೀನು ಸಿಗಲು ಕಾರಣವಾದ ಅಂಶಗಳು ಯಾವುವು ಗೊತ್ತಾ?

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಅವರಿಗೆ ಜಾಮೀನು ದೊರೆತಿದೆ. ಹಿರಿಯ ವಕೀಲ ಸೆಬಾಸ್ಟಿಯನ್ ಅವರು ಪವಿತ್ರಾ ಪರವಾಗಿ ವಾದ ಮಾಡಿದ್ದರು. ಯಾವ ಅಂಶಗಳನ್ನು ಪರಿಗಣಿಸಿ ನ್ಯಾಯಾಲಯವು ಪವಿತ್ರಾ ಅವರಿಗೆ ಜಾಮೀನು ನೀಡಿದೆ ಎಂದು ವಕೀಲರು ವಿವರಿಸಿದ್ದಾರೆ.

                   ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ `ಕೋಲ್ಕತ್ತಾ ಇಂಟರ್‌ನ್ಯಾಷನಲ್‌ ಫಿಲಂ ಫೆಸ್ಟಿವಲ್‌’ನಲ್ಲಿ ’ಲಚ್ಚಿ’ಗೆ ಪ್ರತಿಷ್ಠಿತ ಪ್ರಶಸ್ತಿ

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಏಳು ಆರೋಪಿಗಳಿಗೆ ಇಂದು (ಡಿಸೆಂಬರ್ 13) ಕರ್ನಾಟಕ ರಾಜ್ಯ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ, ಎ2 ದರ್ಶನ್​ಗೂ ಸಹ ಜಾಮೀನು ದೊರೆತಿದೆ. ದರ್ಶನ್​ ಈಗಾಗಲೇ ಮಧ್ಯಂತರ ಜಾಮೀನು ಪಡೆದು ಹೊರಗಿದ್ದಾರೆ. ಆದರೆ ಪವಿತ್ರಾ ಗೌಡ ಕಳೆದ ಆರು ತಿಂಗಳಿಂದಲೂ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಮಯ ಕಳೆಯುತ್ತಿದ್ದಾರೆ. ಪವಿತ್ರಾ ಗೌಡ ಪರವಾಗಿ ನ್ಯಾಯಾಲಯದಲ್ಲಿ ವಾದ ಮಾಡಿದ ವಕೀಲರ ತಂಡದ ಸದಸ್ಯೆ ಶಿಲ್ಪಾ ಅವರು ತಮ್ಮ ಕಕ್ಷಿಧಾರೆಗೆ ಜಾಮೀನು ಸಿಗಲು ಕಾರಣವಾದ ಅಂಶಗಳ ಬಗ್ಗೆ ಮಾತನಾಡಿದ್ದಾರೆ.

ಪವಿತ್ರಾ ಗೌಡ ಪರವಾಗಿ ಹಿರಿಯ ವಕೀಲರಾದ ಸೆಬಾಸ್ಟಿಯನ್ ಅವರು ವಾದ ಮಂಡಿಸಿದ್ದರು. ವಾದದ ವೇಳೆ ಪವಿತ್ರಾ ಗೌಡ ಸಿಂಗಲ್ ಪೇರೆಂಟ್, ಆಕೆ ಒಬ್ಬ ಮಹಿಳೆ ಎಂಬುದರ ಜೊತೆಗೆ ಪ್ರಕರಣದಲ್ಲಿ ಅವರ ಪಾತ್ರ ಇರಲಿಲ್ಲವೆಂದು. ಅಪಹರಣಕ್ಕಾಗಲಿ ಕೊಲೆಗಾಗಲಿ ಅವರು ಕುಮ್ಮಕ್ಕು ನೀಡಿರಲಿಲ್ಲ ಎಂದು ವಾದಿಸಿದ್ದರು. ಇಂದು ಮಾತನಾಡಿದ ವಕೀಲೆ ಶಿಲ್ಪಾ, ‘ಪವಿತ್ರಾ ಅವರು ಸಿಂಗಲ್ ಪೇರೆಂಟ್ ಅಥವಾ ಮಹಿಳೆ ಎಂಬ ಅಂಶವನ್ನು ನ್ಯಾಯಾಲಯ ಪರಿಗಣಿಸಿಲ್ಲ, ಬದಲಿಗೆ ಈ ಪ್ರಕರಣದಲ್ಲಿ ಅವರ ಪಾತ್ರ ಇಲ್ಲ ಎಂಬ ಕಾರಣಕ್ಕೆ ಅವರಿಗೆ ಜಾಮೀನು ನೀಡಿದೆ’ ಎಂದಿದ್ದಾರೆ.

ನ್ಯಾಯಾಲಯವು ಏನೇನು ಷರತ್ತುಗಳನ್ನು ವಿಧಿಸಿದೆ ಎಂಬುದು ನಮಗೆ ಈಗ ತಿಳಿಯುವುದಿಲ್ಲ. ನ್ಯಾಯಾಲಯದ ಆದೇಶ ಬಂದ ನಂತರವೇ ಅದರ ಮಾಹಿತಿ ಲಭ್ಯ ಆಗಲಿದೆ ಎಂದ ವಕೀಲೆ ಶಿಲ್ಪಾ, ‘ಪವಿತ್ರಾ ಗೌಡ ಅವರು ಸೋಮವಾರದಂದು ಬಿಡುಗಡೆ ಆಗುವ ಸಾಧ್ಯತೆ ಇದೆ’ ಎಂದಿದ್ದಾರೆ. ಇದೇ ಸಂದರ್ಭದಲ್ಲಿ ಮಾತನಾಡಿದ ಪವಿತ್ರಾ ಗೌಡ ಅವರ ತಾಯಿ, ‘ಮಗಳಿಗೆ ಜಾಮೀನು ಸಿಕ್ಕಿರುವುದು ಬಹಳ ಖುಷಿಯಾಗಿದೆ’ ಎಂದಿದ್ದಾರೆ.

 

Spread the love
Translate »
Right Ad