Sandalwood Leading OnlineMedia

ʻಕೋಟಿʼ ಕನಸುಗಳ ಕಥೆಗಾರ ಪರಮ್ ಅವರು ಬೆಳೆಸಿದ ಕಲಾವಿದರೆಷ್ಟು ಗೊತ್ತಾ..? ಕಲರ್ಸ್ ಕನ್ನಡ ವೇದಿಕೆಯಲ್ಲಿ ಭಾವುಕತೆಯ ಸನ್ನಿವೇಶ

ಕಲರ್ಸ್ ಕನ್ನಡದ ಬಿಸಿನೆಸ್ ಹೆಡ್ ಆಗಿದ್ದಂತ ಪರಮ್ ಅವರು ಮೊದಲ ಬಾರಿಗೆ ಸಿನಿಮಾ ನಿರ್ದೇಶನಕ್ಕೂ ಕೈ ಹಾಕಿದ್ದಾರೆ. ಡಾಲಿ ಧನಂಜಯ್ ನಟಿಸಿರುವ ʻಕೋಟಿʼ ಸಿನಿಮಾಗೆ ಪರಮ್ ಅವರೇ ನಿರ್ದೇಶಕರು. ಚೊಚ್ಚಲ ಸಿನಿಮಾವಾದರೂ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಇದೆ.

ಪರಮೇಶ್ವರ್ ಗುಂಡ್ಕಲ್ ಅವರ ಸಾರಥ್ಯದಲ್ಲಿ ಕಲರ್ಸ್ ಕನ್ನಡದಲ್ಲಿ ಎಲ್ಲಾ ಧಾರಾವಾಹಿಗಳು ಹಿಟ್ ಆಗಿವೆ. ಅದರ ಜೊತೆಗೆ ಸಾಕಷ್ಟು ಕಲಾವಿದರನ್ನು ತೆರೆಮೇಲೆ ತಂದು, ಒಳ್ಳೊಳ್ಳೆ ಸ್ಥಾನದಲ್ಲಿ ನಿಲ್ಲುವಂತೆ ಮಾಡಿದ್ದಾರೆ. ಪರಮ್ ಅವರ ಸೇವೆಗೆ ಇದೀಗ ಕಲರ್ಸ್ ಕನ್ನಡ ವಾಹಿನಿ ಕೂಡ ಒಂದು ಅಭಿನಂದನೆಯನ್ನು ಸಲ್ಲಿಸಿದ್ದು, ವಿಶೇಷವಾಗಿದೆ.

ಇದನ್ನೂ ಓದಿ:ರಶ್ಮಿಕಾ ಮಂದಣ್ಣ – ವಿಜಯ್ ದೇವರಕೊಂಡ ಸುದ್ದಿ ನಿಜವಾ..? ರಶ್ಮಿಕಾ ಕೊಟ್ಟ ಸೂಚನೆ ಏನು..?

ಕೋಟಿ ಸಿನಿಮಾದ ಪ್ರಮೋಷನ್ ಗಾಗಿಯೇ ಪರಮ್ ಅವರನ್ನು ಚಾನೆಲ್ ಕರೆಸಿದ್ದರು ಕೂಡ, ಅಲ್ಲೊಂದು ಭಾವುಕತೆಯ ಸನ್ನಿವೇಶವೇ ನಿರ್ಮಾಣವಾಗಿತ್ತು. ಪರಮ್ ಅವರು ಬೆಳೆಸಿದ ಎಲ್ಲಾ ನಟ-ನಟಿಯರು ವೇದಿಕೆ ಮೇಲೆ ನೆರೆದಿದ್ದರು. ಅವರೊಂದಿಗೆ ಕೆಲಸ ಮಾಡಿದ ದಿನಗಳು, ತಂದುಕೊಟ್ಟ ಖ್ಯಾತಿಗೆ ಮನಸ್ಸಾರೆ ಧನ್ಯವಾದಗಳನ್ನು ಹೇಳಿದ್ದಾರೆ.

ನೇಹಾ ಗೌಡ, ಚಂದನ್ ಶೆಟ್ಟಿ, ನಿವೇದಿತಾ ಗೌಡ, ರಕ್ಷ್, ಶೈನ್ ಶೆಟ್ಟಿ, ಮಯೂರಿ, ವಿಜಯ್ ಸೂರ್ಯ ಎಲ್ಲರೂ ಪರಮ್ ಅವರಿಗೆ ಸರ್ಪೈಸ್ ಕೊಟ್ಟಿದ್ದಾರೆ. ʻಇಷ್ಟು ಜನರನ್ನು ಕ್ರಿಯೇಟ್ ಮಾಡಿದ್ದೀರಿ. ಈದೆಲ್ಲ ಆಗಿದ್ದು ಪರಮ್ ಸರ್ ಅವರಿಂದಾನೇ ಎಂದು ನೇಹಾ ಹೇಳಿದರೆ ಯಾವುದೇ ಸ್ಥಾನಮಾನಕ್ಕೆ ಇವತ್ತು ನಾನು ರೀಚ್ ಆಗಿದ್ದರು ಅದಕ್ಕೆ ಮುಖ್ಯ ಕಾಋಣ ನೀವಾಗ್ತೀರಾ ಎಂದು ಚಂದನ್ ಶೆಟ್ಟಿ ಹೇಳಿದ್ದಾರೆ.ಇದನ್ನೂ ಓದಿ:ದೀಕ್ಷಿತ್ ಶೆಟ್ಟಿ ಅಭಿನಯದ “ಬ್ಯಾಂಕ್ of ಭಾಗ್ಯಲಕ್ಷ್ಮಿ” ಚಿತ್ರದ ಅನಿಮೇಷನ್‌ ಟೀಸರ್ ಗೆ ಮೆಚ್ಚುಗೆಯ ಮಹಾಪೂರ .

ಇಂತ ಕಲಾವಿದರಿಗೆ ವೇದಿಕೆ ಸೃಷ್ಟಿ ಮಾಡಿಕೊಟ್ಟಿದ್ದಕ್ಕೆ ನೀವೂ ನಮಗೆಲ್ಲಾ ದೇವರಿದ್ದಂತೆ ಎಂದು ಶೈನ್ ಶೆಟ್ಟಿ ಹೇಳಿದರೆ ಥ್ಯಾಂಕ್ಯೂ ಸೋ ಮಚ್ ಇಷ್ಟು ಒಳ್ಳೆ ಜೀವನವನ್ನು ನನಗೆ ಕೊಟ್ಟಿದ್ದಕ್ಕೆ ಎಂದು ವಿಜಯ್ ಸೂರ್ಯ ಭಾವುಕರಾಗಿದ್ದಾರೆ.

Share this post:

Related Posts

To Subscribe to our News Letter.

Translate »