ಬೆಂಗಳೂರು: ಲೋಕಸಭಾ ಚುನಾವಣೆಯ ಕಣದಲ್ಲಿ ಗೀತಾ ಶಿವರಾಜ್ಕುಮಾರ್ ಕೂಡ ಇದ್ದಾರೆ. ಇಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ವೇಳೆ ತನ್ನ ಹೆಸರಿನ ಆಸ್ತಿ ಹಾಗೂ ಪತಿಯ ಹೆಸರಿನ ಆಸ್ತಿಯ ಅಫಿಡೆವಿಟ್ ಸಲ್ಲಿಕೆ ಮಾಡಲಾಗಿದೆ.
ಗೀತಾ ಶಿವರಾಜ್ಕುಮಾರ್ ಸಲ್ಲಿಕೆ ಮಾಡಿರುವ ಆಸ್ತಿಯ ಲೆಕ್ಕದಲ್ಲಿ ಶಿವಣ್ಣ 2,97,27,100 ರೂಪಾಯಿ ಆದಾಯ ಹೊಂದಿದ್ದಾರೆ. ಶಿವರಾಜ್ಕುಮಾರ್ ಅವರ ನಿಜವಾದ ಹೆಸರು ಎಂಎಸ್ ಪುಟ್ಟಸ್ವಾಮಿ. ಇದೇ ಹೆಸರಲ್ಲಿ ವಿವರ ಇದೆ. 2022-2023 ಆರ್ಥಿಕ ವರ್ಷದಲ್ಲಿ 2,97,27,100 ರೂಪಾಯಿ ಆದಾಯ ಹೊಂದಿದ್ದಾರೆ. ಅದೇ ವರ್ಷ ಗೀತಾ ಅವರು 1,48,63,750 ಕೋಟಿ ರೂಪಾಯಿ ಆದಾಯ ಹೊಂದಿದ್ದಾರೆ. ಕೈಯಲ್ಲಿ ಎಷ್ಟು ಕ್ಯಾಶ್ ಇದೆ ಎಂಬ ವಿವರವನ್ನೂ ನೀಡಲಾಗಿದೆ. ಶಿವಣ್ಣ ಬಳಿ 22,58,338 ರೂಪಾಯಿ ಕ್ಯಾಶ್ ಇದೆ. ಗೀತಾ ಅವರ ಬಳಿ 3 ಲಕ್ಷ ರೂಪಾಯಿ ಕ್ಯಾಶ್ ಇದೆ.
ಇದನ್ನೂ ಓದಿ : ತೆಲುಗು ಇಂಡಸ್ಟ್ರಿಯಲ್ಲೂ ಜರ್ನಿ ಶುರು ಮಾಡಿದ ಸಪ್ತಮಿ ಗೌಡ
ಶಿವರಾಜ್ಕುಮಾರ್ ಬಳಿ ಬ್ಯಾಂಕ್ ಬ್ಯಾಲೆನ್ಸ್ 4.82 ಕೋಟಿ ರೂಪಾಯಿ ಇದೆ. ಗೀತಾ ಅವರ ಬ್ಯಾಂಕ್ ಬ್ಯಾಲೆನ್ಸ್ 64 ಲಕ್ಷ ರೂಪಾಯಿ ಇದೆ. ಶಿವಣ್ಣ ಬಳಿ 18 ಕೋಟಿ ರೂಪಾಯಿ ಹಾಗೂ ಗೀತಾ ಬಳಿ 5 ಕೋಟಿ ರೂಪಾಯಿ ಚರಾಸ್ತಿ ಇದೆ. ಸ್ಥಿರಾಸ್ತಿ ವಿಚಾರಕ್ಕೆ ಬಂದರೆ ಶಿವಣ್ಣ ಬಳಿ 31 ಕೋಟಿ ಬೆಲೆ ಬಾಳುವ ಸ್ಥಿರಾಸ್ತಿ ಇದೆ. ಗೀತಾ ಬಳಿ 34 ಕೋಟಿ ರೂಪಾಯಿ ಸ್ಥಿರಾಸ್ತಿ ಇದೆ.
ಇದನ್ನೂ ಓದಿ :ಮಹಾನಟಿ’ ವೇದಿಕೆಯಲ್ಲಿ ಅಮ್ಮನ ನೆನೆದು ಕಣ್ಣೀರು ಹಾಕಿದ ವಿನೋದ್ ರಾಜ್
ಇದನ್ನೂ ಓದಿ :ನಮ್ರತಾ ಗೌಡ !!
ಶಿವಣ್ಣನಿಗೆ 17 ಕೋಟಿ ರೂಪಾಯಿ ಸಾಲ/ಅಡ್ವಾನ್ಸ್ ಇದೆ. ಇದರಲ್ಲಿ ಸಾಲ 3 ಕೋಟಿ ರೂಪಾಯಿ, ಅಡ್ವಾನ್ಸ್ 13.6 ಕೋಟಿ ರೂಪಾಯಿ. ಗೀತಾ ಅವರದ್ದು 7 ಕೋಟಿ ರೂಪಾಯಿ ಸಾಲ ಇದೆ. ಸಿನಿ ಮುತ್ತು ಸರ್ವಿಸ್ಗೆ 1.64 ಕೋಟಿ ರೂಪಾಯಿ, ಗೀತಾ ಪಿಕ್ಚರ್ಸ್ಗೆ 6 ಕೋಟಿ ರೂಪಾಯಿ, ಧ್ರುವಕುಮಾರ್ಗೆ 2.30 ಕೋಟಿ ರೂಪಾಯಿ ಹಾಗೂ ಇತರರಿಗೆ 2.13 ಕೋಟಿ ರೂಪಾಯಿ ಸಾಲ ನೀಡಿದ್ದಾರೆ ಶಿವಣ್ಣ