Sandalwood Leading OnlineMedia

ನಟ ಕಮಲ್ ಹಾಸನ್ ಪ್ರಿಯತಮೆ ಶ್ರೀವಿದ್ಯಾ ಬಗ್ಗೆ ನಿಮಗೆ ಗೊತ್ತಾ..?

ಉಲಗನಾಯಕನ್ ಎಂದು ಮಿಂಚುತ್ತಿರುವ ಕಾಲಿವುಡ್​ನ ಸೂಪರ್​ಸ್ಟಾರ್ ನಟ ಕಮಲ್ ಹಾಸನ್ ಅವರು ಎರಡು ಮದುವೆಯಾಗಿದ್ದಾರೆ. ಎರಡು ಮದುವೆಯೂ ಸಕ್ಸಸ್ ಆಗಿಲ್ಲ. ಎರಡೂ ಕೂಡಾ ವಿಚ್ಛೇದನೆಯಲ್ಲಿಯೇ ಕೊನೆಯಾಯಿತು. ಆದರೆ ಅದಕ್ಕೂ ಮುನ್ನ ಅವರು ಪ್ರೀತಿಸಿದ್ದ ಹುಡುಗಿ ಯಾರು ಗೊತ್ತಾ?

ಕಮಲ್ ಹಾಸನ್ ಅವರು ಸಾರಿಕಾ ಅವರನ್ನು 1988ರಲ್ಲಿ ಮದುವೆಯಾದರು. 2004ರಲ್ಲಿ ಈ ಜೋಡಿ ಬೇರ್ಪಟ್ಟರು. ನಟ ವಾಣಿ ಗಣಪತಿ ಅವರನ್ನು 1978ರಲ್ಲಿ ಮದುವೆಯಾಗಿದ್ದರು 1988ರಲ್ಲಿ ಅವರಿಂದ ವಿಚ್ಛೇದನೆ ಪಡೆದರು. ಈ ಎರಡು ಮದುವೆಗಳೂ ಸಕ್ಸಸ್ ಆಗಿಲ್ಲ. ಸಕ್ಸಸ್ ಆಗಿದ್ದು ಕಮಲ್ ಹಾಸನ್ ಎಂಬ ಖ್ಯಾತ ನಟನ ಸಿನಿಮಾ ಜೀವನ ಮಾತ್ರ.

ಆಗಿನ್ನೂ ಕಮಲ್ ಹಾಸನ್ ಅವರು ಚಿತ್ರರಂಗದಲ್ಲಿ ಹೊಸದು. ಆದರೆ ಅಭಿನಯದಿಂದ ವ್ಯಾಪಕ ಮೆಚ್ಚುಗೆ ಗಳಿಸಿಕೊಂಡಿದ್ದರು. ಆ ಸಂದರ್ಭದಲ್ಲಿ ಅವರಿಗೆ ಪರಿಚಯವಾಗಿದ್ದು ಶ್ರೀವಿದ್ಯಾ ಎನ್ನುವ ಯುವನಟಿ.

ಮಲಯಾಳಂನ ಶ್ರೀವಿದ್ಯಾ ಅವರು ಆಗ ಬೇಡಿಕೆಯ ನಟಿಯರಲ್ಲಿ ಒಬ್ಬರು. ಹಾಗಂತ ಸೂಪರ್​ಸ್ಟಾರ್ ಆಗಿರಲಿಲ್ಲ. ಇಬ್ಬರೂ ಚಿತ್ರರಂಗದಲ್ಲಿ ಬೆಳೆಯುತ್ತಿದ್ದ ಹಂತ. ಇಬ್ಬರೂ ಸ್ಟ್ರಗಲ್ ಮಾಡುತ್ತಿದ್ದ ಸಮಯ. ಆಗಲೇ ಅವರಿಬ್ಬರಿಗೆ ಲವ್ ಆಗಿತ್ತು.

ಇವರಿಬ್ಬರ ಪ್ರೀತಿ ವಿಚಾರ ಇಬ್ಬರ ಮನೆಯಲ್ಲಿಯೂ ಗೊತ್ತಾಗಿತ್ತು. ಶ್ರೀವಿದ್ಯಾ ಮನೆಯಲ್ಲಿ ಕಮಲ್ ಹಾಸನ್ ವಿಚಾರವೂ ಕಮಲ್ ಹಾಸನ್ ಮನೆಯಲ್ಲಿ ಶ್ರೀವಿದ್ಯಾ ಸಂಗತಿ ರಿವೀಲ್ ಆಗಿತ್ತು. ಅವರಿಬ್ಬರು ಮದುವೆಯಾಗಬೇಕೆಂದು ಬಯಸಿದ್ದರು. ಮನೆಯವರ ಒಪ್ಪಿಗೆಯೇ ಇತ್ತು. ಆದರೆ ಎಲ್ಲವೂ ಚೆನ್ನಾಗಿದ್ದರೂ ಈ ಪ್ರೇಮಕಥೆ ಕಂಪ್ಲೀಟ್ ಆಗಲಿಲ್ಲ, ಟ್ರಾಜಿಡಿಯಾಗಿ ಕೊನೆಗೊಂಡಿತು.

ಶ್ರೀವಿದ್ಯಾ ಅವರು ಕಮಲ್ ಹಾಸನ್ ಹಾಗೂ ತಾವು ದೂರವಾದ ಬಗ್ಗೆ, ಅದರ ಹಿಂದಿನ ಕಾರಣವನ್ನು ಈ ಹಿಂದೆ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದರು. ಇಡೀ ಇಂಡಸ್ಟ್ರಿಗೆ ನಮ್ಮ ಲವ್​ ಸ್ಟೋರಿ ಗೊತ್ತು. ಅವರ ಮನೆಯವರಿಗೂ ಗೊತ್ತಿತ್ತು. ನಮ್ಮ ಮನೆಯವರಿಗೂ ಗೊತ್ತಿತ್ತು. ನಾವಿಬ್ಬರು ಮದುವೆಯಾಗಬೇಕೆಂದು ಎಲ್ಲರೂ ಬಯಸಿದ್ದರು. ಆದರೆ ಒಂದು ದಿನ ನನ್ನ ಅಮ್ಮ ಕಮಲ್ ಹಾಸನ್ ಅವರನ್ನು ಕರೆದು ಮಾತನಾಡಿದ್ದರು.

ಕಮಲ್ ನೀನು ಇಂಡಸ್ಟ್ರಿಯಲ್ಲಿ ದೊಡ್ಡ ಕಲಾವಿದನಾಗಿ ಬೆಳೆಯುವವನು. ಹಾಗೆಯೇ ಅವಳೂ ಕೂಡಾ ದೊಡ್ಡ ಕಲಾವಿದೆಯಾಗುತ್ತಾಳೆ. ಅವಳಲ್ಲಿ ಆ ಪ್ರತಿಭೆ ಇದೆ ಎಂದು ಶ್ರೀವಿದ್ಯಾ ತಾಯಿ ಕಮಲ್ ಹಾಸನ್ ಹತ್ತಿರ ಹೇಳಿದ್ದರು. ಅಮ್ಮ ನಮಗಿಬ್ಬರಿಗೂ ತುಂಬಾ ಪ್ರಾಕ್ಟಿಕಲ್ ಆಗಿ ಈ ಮಾತು ಹೇಳಿದ್ದರು.

 

ಆದರೆ ಇದ್ಯಾವುದನ್ನೂ ಕೇಳದೆ ಕಮಲ್ ಹಾಸನ್ ಸಿಟ್ಟಿನಲ್ಲಿ ಹೊರನಡೆದರು. ಆ ಘಟನೆಯ ನಂತರ ಅವರು ತುಂಬಾ ಸಮಯದ ತನಕ ನನ್ನೊಂದಿಗೆ ಮಾತನಾಡಲಿಲ್ಲ. ಆ ನಂತರ ಕಮಲ್ ಸರ್ ದೊಡ್ಡ ಹೀರೋ ಆದರು. ಆ ನಂತರ ಅವರು ಬೇರೆ ಯುವತಿಯನ್ನು ಮದುವೆಯಾದರು ಎನ್ನುವ ಸುದ್ದಿ ನನಗೆ ಗೊತ್ತಾಯಿತು.

ನಾನು ಅವರನ್ನು ಕಳೆದುಕೊಂಡುಬಿಟ್ಟಿದೆ. ನಾನು ಬ್ಲ್ಯಾಂಕ್ ಆಗಿದ್ದೆ. ಎಲ್ಲವೂ ಮುಗಿಯಿತು ಎನ್ನುವ ಭಾವನೆ ಇತ್ತು ಎಂದಿದ್ದಾರೆ ಶ್ರೀವಿದ್ಯಾ. ನಂತರ ಅವರು ಮಲಯಾಳಂ ಸಹ ನಿರ್ದೇಶಕರೊಬ್ಬರನ್ನು ಮದುವೆಯಾದರು. ಆದರೆ ಅವರಿಬ್ಬರ ಲವ್​ ಸ್ಟೋರಿ ಇಂದಿಗೂ ಫೇಮಸ್ ಆಗಿದೆ.

 

ಮಲಯಾಳಂ ಹಾಗೂ ತಮಿಳು ಚಿತ್ರರಂಗದಲ್ಲಿ ಮಿಂಚಿದ್ದ ಶ್ರೀವಿದ್ಯಾ ಅವರು ತೆಲುಗು, ಕನ್ನಡ, ಹಿಂದಿ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. 40 ವರ್ಷಗಳ ಅವರ ಸಿನಿಮಾ ಕೆರಿಯರ್​ನಲ್ಲಿ 800ಕ್ಕೂ ಹೆಚ್ಚು ಸಿನಿಮಾದಲ್ಲಿ ಅಭಿನಯಿಸಿದ್ದರು. ಚೆನ್ನೈನಲ್ಲಿ ಜನಿಸಿದ್ದ ದಕ್ಷಿಣದ ಖ್ಯಾತ ನಟಿ ಶ್ರೀವಿದ್ಯಾ ಅವರು 53ನೇ ವಯಸ್ಸಿನಲ್ಲಿ ಅಕ್ಟೋಬರ್ 19ರಂದು 2006ರಲ್ಲಿ ನಿಧನರಾದರು.

Share this post:

Related Posts

To Subscribe to our News Letter.

Translate »