Sandalwood Leading OnlineMedia

ಕಡುಬು ಪ್ರಿಯೆ.. ಚಿತ್ರಾನ್ನ Expert.. ದಿಶಾ ಮದನ್

ದಿಶಾ ಮದನ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಲಕ್ಷ್ಮೀ  ನಿವಾಸ ಧಾರಾವಾಹಿಯಲ್ಲಿ ಮುಗ್ಧತೆಯ ಪಾತ್ರ ಮಾಡುತ್ತಿದ್ದಾರೆ. ಸದಾ ಚೂಡಿ ಇಲ್ಲಂದ್ರೆ ಸೀರೆ ತೊಟ್ಟು ಪಕ್ಕ ಹೋಮ್ಲಿ ಗರ್ಲ್ ಥರ ಕಾಣಿಸುತ್ತಾರೆ. ಅದರಲ್ಲೂ ಸಿದ್ದೇಗೌಡ್ರು ಹಾಗೂ ಭಾವನಾ ಲವ್ ಸ್ಟೋರಿ ಅಂದ್ರೆ ಅದೆಷ್ಟೋ ಜನಕ್ಕೆ ಪ್ರೀತಿ. ಅಭಿಮಾನಿಗಳು ಅಪಾರ. ಆದ್ರೆ ದಿಶಾ ಮದನ್ ಅವರ ಸೋಷಿಯಲ್ ಮೀಡಿಯಾ ಫಾಲೋ ಮಾಡುವವರಿಗೆ ಗೊತ್ತಿರುತ್ತೆ ಅವರೆಷ್ಟು ಮಾಡ್ರನ್ ಅಂತ. ಆದ್ರೂ ಭಾವನಾ ಪಾತ್ರವನ್ನು ಹೇಗೆ ನಿಭಾಯಿಸುತ್ತಾರೆ ಅನ್ನೋದೆ ಎಲ್ಲರ ಪ್ರಶ್ನೆ, ಅದಕ್ಕೆ ದಿಶಾ ಮದನ್ ಕೊಟ್ಟ ಉತ್ತರ ಹೀಗಿದೆ. `ಖಂಡಿತ ಅದೊಂದು ಚಾಲೆಂಜಿಂಗ್ ಪಾತ್ರವೇ ಸರಿ. ಕೆಲವರು ಲೈಫ್‌ನಲ್ಲಿ ಸೈಲೆಂಟ್ ಆಗಿರುತ್ತಾರೆ. ಅಂಥವರಿಗೆ ವೈಲೆಂಟ್ ಆದಂತ ಪಾತ್ರ ಸಿಗುತ್ತದೆ. ಆಗ ಅದು ಚಾಲೆಂಜ್ ಅನ್ನಿಸುತ್ತೆ. ನನಗೂ ಹಾಗೇ ಭಾವನಾ ಕ್ಯಾರೆಕ್ಟರ್ ರೀತಿ ನಿಜ ಜೀವನದಲ್ಲಿ ಇಲ್ಲದೆ ಹೋದರು ಅದೊಂತರ ಖುಷಿ ಕೊಡುತ್ತದೆ. ಈಗ ಜನ ಕೂಡ ಆ ಪಾತ್ರವನ್ನು ತುಂಬಾ ಇಷ್ಟಪಡುತ್ತಿದ್ದಾರೆ. ಕಮೆಂಟ್ಸ್ಗಳನ್ನು ಮಾಡ್ತಾರೆ. ನಾನು ಶೂಟಿಂಗ್‌ನಿಂದ ಬಿಡುವುದಾಗ ಆ ಕಮೆಂಟ್ಸ್ಗಳನ್ನು ನೋಡಿ, ರಿಪ್ಲೇ ಕೂಡ ಮಾಡ್ತೀನಿ. ಅದೊಂಥರ ಖುಷಿ ಅಲ್ವಾ’ ಎಂದಿದ್ದಾರೆ.

ಇನ್ನು ದಿಶಾ ಮದನ್ ಹೇರ್ ಸ್ಟೈಲ್, ಔಟ್‌ಲುಕ್‌ಗೆ ಹೆಣ್ಣು ಮಕ್ಕಳು ಫಿದಾ ಆಗಿದ್ದಾರೆ. ಜೊತೆಗೆ ಅವರ ಫಿಟ್ನೆಸ್ ಬಗ್ಗೆ ಖಂಡಿತ ಕುತೂಹಲ ಇದ್ದೆ ಇರುತ್ತದೆ. ಎರಡು ಮಕ್ಕಳ ತಾಯಿಯಾದ್ರೂ ಕೂಡ ಆ ಬ್ಯೂಟಿ, ಆ ಫಿಟ್ನೆಸ್ ಎಲ್ಲಿಯೂ ಕಡಿಮೆಯಾಗಿಲ್ಲ. ಶೂಟಿಂಗ್ ಬ್ಯುಸಿ, ಮಕ್ಕಳ ಹಾರೈಕೆ, ಸಂಸಾರ ಈ ಎಲ್ಲದರ ನಡುವೆಯೂ ದಿಶಾ ಮದನ್ ಇಷ್ಟೊಂದು ಬ್ಯೂಟಿಫುಲ್ ಹೇಗೆ ಎಂದು ಕೇಳಿದಾಗ ಅವರ ಡಯೆಟ್ ಬಗ್ಗೆ ಹೇಳಿದ್ದು ಹೀಗೆ, `ಒಂದೇ ಥರದ ಡಯೆಟ್ ಎಲ್ಲರಿಗೂ ಹೊಂದಾಣಿಕೆ ಆಗುತ್ತೆ ಅಂತ ಹೇಳುವುದಕ್ಕೆ ಆಗಲ್ಲ. ನಮ್ಮ ನಮ್ಮ ದೇಹಕ್ಕೆ ಸೂಟ್ ಆಗುವಂತ ಡಯೆಟ್ ಪ್ಲ್ಯಾನ್ ಮಾಡಿಕೊಳ್ಳಬೇಕಾಗುತ್ತೆ. ಯಾಕಂದ್ರೆ ಸುಮಾರು ಜನಕ್ಕೆ ಶುಗರ್, ಥೈರಾಯಿಡ್ ಸಮಸ್ಯೆ ಇರುತ್ತೆ. ಆಗ ಯಾರೋ ಮಾಡುವ ಡಯೆಟ್ ಅನ್ನು ಮಾಡುವುದಕ್ಕೆ ಆಗಲ್ಲ. ‌

ಹೀಗಾಗಿ ಬ್ಲೆಡ್ ಟೆಸ್ಟ್ ಮಾಡಿಸಿ, ಯಾವ್ಯಾವ ವಿಟಮಿನ್ ಕೊರತತೆ ಇದೆ ನೋಡಿಕೊಂಡು ಡಯೆಟ್ ಮಾಡಬೇಕು. ನಾನು ಕೂಡ ಹೆಲ್ತ್ ವಿಚಾರದಲ್ಲಿ ತುಂಬಾ ಕಾಳಜಿ ಮಾಡ್ತೀನಿ. ಆಗ ಮಾತ್ರ ಹೆಲ್ದಿ ಫಿಟ್ನೆಸ್ ಮೆಂಟೈನ್ ಮಾಡುವುದಕ್ಕೆ ಸಾಧ್ಯ. ನಾನು ಪ್ರತಿ ದಿನ ಮೊಟ್ಟೆ, ಒಂದು ಇಡ್ಲಿ, ವಡೆ. ಮಧ್ಯಾಹ್ನ ರೈಸ್, ಚಪಾತಿ, ಪಲ್ಯ, ರಾತ್ರಿ ಸಮಯಕ್ಕೆ ಪ್ರೋಟಿನ್ ಇದ್ದೆ ಇರುತ್ತದೆ ಚಿಕನ್ ಅಥವಾ ಪನ್ನೀರ್ ತಿಂತೀನಿ’ ಎಂದಿದ್ದಾರೆ.‌

ಇಷ್ಟೆಲ್ಲ ಕಾಳಜಿ ಮಾಡುವ ದಿಶಾ ಮದನ್ ಅವರಿಗೆ ಇಷ್ಟದ ಫುಡ್ ಯಾವುದು ಅಂತ ನಮಗೂ ಕ್ಯೂರಿಯಾಸಿಟಿ. ಆ ಬಗ್ಗೆ ಕೇಳಿದಾಗ, `ನಾನು ತುಂಬಾ ಇಷ್ಟ ಪಟ್ಟು ತಿನ್ನುವುದು ಕಡುಬು. ಖಾರದ್ದಾಗಲೀ, ಸ್ವೀಟ್‌ದ್ದಾಗಲೀ ಎರಡನ್ನು ತುಂಬಾ ಇಷ್ಟ ಪಟ್ಟು ತಿಂತೀನಿ. ಗಣೇಶ ಹಬ್ಬ ಬೇರೆ ಬಂತಲ್ಲ. ಮಾಡಿ ಜಮಾಯಿಸೋದೆ. ಹಾಗೇ ನನ್ನ ಪತಿಗೆ ನಾನು ಮಾಡುವ ಚಿತ್ರಾನ್ನ ತುಂಬಾ ಇಷ್ಟ. ಆಗಾಗ ನಾನು ಚಿತ್ರಾನ್ನ ಮಾಡ್ತೀನಿ. ಇನ್ನು ತುಂಬಾ ಇಷ್ಟ ಪಟ್ಟು ತಿನ್ನುವುದು ಅಂದ್ರೆ ಅದು ಐಸ್‌ಕ್ರೀಂ. ಡಯೆಟ್ ಇದ್ರು ಬ್ರೇಕ್ ಮಾಡಿ ಆದ್ರೂ ತಿಂದಿರ್ತಿನಿ’ ಎಂದು ದಿಶಾ ಮದನ್ ತಮ್ಮ ಫುಡ್ ರೋಟಿನ್ ಬಗ್ಗೆ ಚಿತ್ತಾರದೊಂದಿಗೆ ಹಂಚಿಕೊಂಡಿದ್ದಾರೆ.

Share this post:

Translate »