ಆರ್ಆರ್ಆರ್ ಸಿನಿಮಾದ ಬಳಿಕ ಒಂದು ದೀರ್ಘ ಗ್ಯಾಪ್ ತೆಗೆದುಕೊಂಡಿರುವ ರಾಜಮೌಳಿ ಈಗ ಮತ್ತೆ ಆ್ಯಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ. RRR ಸಿನಿಮಾದ ಬಳಿಕ ರಾಜಮೌಳಿ ಅಭಿಮಾನಿಗಳು ಅವರ ಹೊಸ ಸಿನಿಮಾಗಾಗಿ ಬಹಳ ಉತ್ಸುಕತೆಯಿಂದ ಕಾಯುತ್ತಿದ್ದರು. ಮತ್ಯಾವ ಮಹಾಕಥೆಯೊಂದನ್ನು ಹೆಣೆದು ನಮ್ಮ ಮುಂದೆ ಇಡಲಿದ್ದಾರೆ ಎಂಬ ಕಾತುರತೆಯಲ್ಲಿ ಇದ್ದರು ಸದ್ಯ ಆ ಎಲ್ಲಾ ಕುತೂಹಲಗಳಿಗೆ ತೆರೆಬಿದ್ದಿದೆ. ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹೊಸ ಸಿನಿಮಾದ ಬಗ್ಗೆ ತುಂಬಾ ವಿಶೇಷವಾದ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ ರಾಜಮೌಳಿ
ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ತಮ್ಮ ಮುಂದಿನ ಸಿನಿಮಾದ ಹೆಸರು ಎಸ್ಎಸ್ಎಂಬಿ29 ಎಂದು ಹೇಳಿದ್ದಾರೆ. ರಾಜಮೌಳಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಬಲೆಯಲ್ಲಿ ಸಿಂಹವಿದ್ದು ರಾಜಮೌಳಿ ಪಾಸ್ಪೋರ್ಟ್ವೊಂದನ್ನು ಹಿಡಿದು ಪೋಸ್ ಕೊಟ್ಟಿದ್ದಾರೆ. ಈ ಮೂಲಕ ರಾಜಮೌಳಿ ಸಿಂಹವನ್ನು ಹಿಡಿದ ಸುಳಿವು ಕೊಡುವುದರ ಮೂಲಕ. ಆ ಸಿಂಹ ಬೇರೆ ಯಾರು ಅಲ್ಲ ಮಹೇಶ್ ಬಾಬು ಎಂಬ ಸಂದೇಶವನ್ನು ನೀಡಿದ್ದಾರೆ. ಸಹಜವಾಗಿ ತೆಲುಗು ಸಿನಿಪ್ರಿಯರೆಲ್ಲಾ ಮಹೇಶ್ ಬಾಬುವನ್ನು ಸಿಂಹವೆಂದೇ ಕರೆಯುವುದು.
ಜನವರಿ 2 2025 ರಂದು ಎಸ್ಎಸ್ಎಂಬಿ29 ಸಿನಿಮಾಗೆ ಅಧಿಕೃತವಾಗಿ ಘೋಷಣೆಯಾಗಿ ವಿಶೇಷ ಪೂಜೆಯೂ ಕೂಡ ಹೈದ್ರಾಬಾದ್ನಲ್ಲಿ ನಡೆದಿದೆ. ಈ ಪೂಜೆಯಲ್ಲಿ ರಾಜಮೌಳಿ ಹಾಗು ಮಹೇಶ್ ಬಾಬು ಇಬ್ಬರು ಕೂಡ ಕಾಣಿಸಿಕೊಂಡಿದ್ದರು. ಈ ವರ್ಷದಿಂದ ಶೂಟಿಂಗ್ ಶುರುವಾಗಲಿರುವ ಸಿನಿಮಾ 2028ಕ್ಕೆ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.