Sandalwood Leading OnlineMedia

ಮಂಗಳೂರು ಪಾಕಿಸ್ತಾನದಲ್ಲಿದೆಯಾ? ರಿಷಬ್, ರಕ್ಷಿತ್ ಕುರಿತ ಪ್ರಶ್ನೆಗೆ ಓಂ ಪ್ರಕಾಶ್ ರಾವ್ ಖಡಕ್ ಉತ್ತರ

ಇತ್ತೀಚೆಗೆ ನಿರ್ದೇಶಕ ದಯಾಳ್ ಪದ್ಮನಾಭನ್ ರಿಷಬ್, ರಕ್ಷಿತ್ ಸೇರಿದಂತೆ ಶೆಟ್ಟಿ ಗ್ಯಾಂಗ್ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಗುಂಪು ಕಟ್ಟಿಕೊಂಡಿದ್ದಾರೆ. ಬೇರೆಯವರ ಸಿನಿಮಾಗಳಿಗೆ ಪ್ರೋತ್ಸಾಹ ಕೊಡಲ್ಲ ಎಂದು ಕಿಡಿ ಕಾರಿದ್ದರು.


ಅದರ ಬಗ್ಗೆ ಈಗ ಹಿರಿಯ ನಿರ್ದೇಶಕ, ನಟ ಓಂ ಪ್ರಕಾಶ್ ರಾವ್ ಕಿಡಿ ಕಾರಿದ್ದಾರೆ. ಮಂಗಳೂರು ಏನು ಪಾಕಿಸ್ತಾನದಲ್ಲಿದೆಯಾ ಎಂದು ರಿಷಬ್, ರಕ್ಷಿತ್ ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸುವವರಿಗೆ ಖಡಕ್ ಉತ್ತರ ಕೊಟ್ಟಿದ್ದಾರೆ.

ಪತ್ರಕರ್ತ ಬಿ. ಗಣಪತಿ ಅವರ ಯೂ ಟ್ಯೂಬ್ ಸಂದರ್ಶನದಲ್ಲಿ ಓಂ ಪ್ರಕಾಶ್ ರಾವ್ ‘ಮಂಗಳೂರು ಪಾಕಿಸ್ತಾನದಲ್ಲಿದೆಯಾ? ಮಂಗಳೂರು ಕಡೆಯ ನಿರ್ದೇಶಕರು, ನಟರು ಎಂದರೆ ನಮ್ಮವರೇ ತಾನೇ?’ ಎಂದು ಪ್ರಶ್ನಿಸಿದ್ದಾರೆ.

ಜೊತೆಗೆ ಮಂಗಳೂರು ಭಾಗದವರು ಎಂದು ನಮ್ಮನ್ನು ಒಡೆಯುವ ಪ್ರಯತ್ನ ಮಾಡಬೇಡಿ. ಕನ್ನಡಿಗರ ಮಧ್ಯೆ ತಂದಿಡುವ ಪ್ರಯತ್ನ ಬೇಡ ಎಂದು ಓಂ ಪ್ರಕಾಶ್ ರಾವ್ ಖಡಕ್ ಆಗಿ ಉತ್ತರಿಸಿದ್ದಾರೆ.

Share this post:

Related Posts

To Subscribe to our News Letter.

Translate »