‘ಶುಗರ್ ಫ್ಯಾಕ್ಟರಿ’ ಈ ವಾರ (ನವೆಂಬರ್ 24) ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ. ಈಗಾಗಲೇ ಪೋಸ್ಟರ್, ಟೀಸರ್, ಟ್ರೈಲರ್‌ನಿಂದಲೇ ಪ್ರೇಕ್ಷಕರ ಗಮನ ಸೆಳೆದಿತ್ತು. ಅದರಲ್ಲೂ ಟ್ರೈಲರ್ ರಿಲೀಸ್ ಆದ ಬಳಿಕ ಇದೊಂದು ಪಕ್ಕಾ ಯೂತ್‌ಫುಲ್ ಸಿನಿಮಾ ಅನ್ನೋದು ಗೊತ್ತಿದೆ. ‘ಶುಗರ್ ಫ್ಯಾಕ್ಟರಿ’ಯಲ್ಲಿ 100% ಮನರಂಜನೆ ಸಿಗೋದು ಗ್ಯಾರಂಟಿ ಅಂತ ಚಿತ್ರತಂಡ. ಯೂತ್‌ಫುಲ್ ಸ್ಟೋರಿ ಜೊತೆ ಹಾಸ್ಯ ಭರಿತ ಸಂಭಾಷಣೆ ಯುವ ಮನಸ್ಸುಗಳಿಗೆ ಮತ್ತಷ್ಟು ಕಿಕ್ ಕೊಡುತ್ತೆ. ಸಿನಿಮಾದುದ್ದಕ್ಕೂ ನಾನ್ ಸ್ಟಾಪ್ ಎಂಟರ್‌ಟೈನ್ಮೆಂಟ್ ಫಿಕ್ಸ್ ಅಂದಿದೆ ಟೀಮ್.
ಇದನ್ನೂ ಓದಿ ದರ್ಶನಗಾಗಿ ತಂದೆಯ ಯಾವ ಸಿನಿಮಾ ರಿಮೇಕ್ ಮಾಡ್ತೀನಿ ಎಂದರು ಅಭಿಷೇಕ್ !!
ಅಷ್ಟಕ್ಕೂ ಈ ಸಿನಿಮಾದ ನಿರ್ದೇಶಕ ದೀಪಕ್ ಅರಸ್. ಈ ಹಿಂದೆ ಅಮೂಲ್ಯ ನಟಿಸಿದ ‘ಮನಸಾಲಜಿ’ ಸಿನಿಮಾವನ್ನು ನಿರ್ದೇಶಿಸಿದ್ದರು. ಈಗ 12 ವರ್ಷಗಳ ಬಳಿಕ ಮತ್ತೆ ‘ಶುಗರ್ ಫ್ಯಾಕ್ಟರಿ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಡಾರ್ಲಿಂಗ್ ಕೃಷ್ಣ ಜೊತೆ ಸೋನಾಲ್ ಮಾಂತೆರೊ, ಅದ್ವಿತಿ ಶೆಟ್ಟಿ, ರುಹಾನಿ ಶೆಟ್ಟಿ ಇವರಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾ ರಿಲೀಸ್ ಆಗುತ್ತಿರುವ ಈ ಸಂದರ್ಭದಲ್ಲಿ ಫಿಲ್ಮಿಬೀಟ್ ಜೊತೆ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಅದರ ಝಲಕ್ ಇಲ್ಲಿದೆ.
ಇದನ್ನೂ ಓದಿ ಸಾರ್ವಜನಿಕವಾಗಿ ಲಾಂಗ್ ಹಿಡಿದು ಪೋಸ್; ಮತ್ತೊಂದು ವಿವಾದದಲ್ಲಿ ದರ್ಶನ್
“ಇದು ಕಣ್ಮುಂದೆ ನಡೆದ ಚಿಕ್ಕ ಘಟನೆ” ಸ್ಯಾಂಡಲ್‌ವುಡ್‌ನಲ್ಲಿ ಪಬ್ ಕಲ್ಚರ್ ಇಟ್ಟುಕೊಂಡು ಬಂದು ಸಿನಿಮಾ ತೀರಾ ವಿರಳ. ಈಗ ದೀಪಕ್ ಅರಸ್ ಪಬ್‌ನಲ್ಲಿ ನೈಜ ಘಟನೆಯನ್ನು ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ. “ಇದು ಪಬ್‌ನಲ್ಲಿ ಕಣ್ಮುಂದೆ ನಡೆದ ಒಂದು ಚಿಕ್ಕ ಘಟನೆ. ಇವತ್ತಿನ ಯುವಕರಿಗೆ ಇದು ಟಚ್ ಆಗುತ್ತೆ. ಆದರೆ, ಬಾಲಿವುಡ್ ಶೈಲಿಯಲ್ಲಿ ಈ ಸಿನಿಮಾ ಇದೆ. ಇದನ್ನು ಕನ್ನಡದವರು ಒಪ್ಪಿಕೊಳ್ಳುತ್ತಾರೋ ಇಲ್ಲವೋ ಅನ್ನೋ ಅನುಮಾನವಿತ್ತು. ಆಮೇಲೆ ಇವತ್ತಿ ಟ್ರೆಂಡ್ ನೋಡಿ, ಪಬ್ ಕಲ್ಚರ್ ಸ್ಟೋರಿ ಇಷ್ಟ ಆಗುತ್ತೆ ಅಂತ ಕಂಡುಕೊಂಡೆವು. ಈ ಕಥೆ ಹುಟ್ಟೋದು ಪಬ್‌ನಲ್ಲೇ.. ಇಂಟರ್‌ವಲ್ ಬರೋದೂ ಕೂಡ ಪಬ್‌ನಲ್ಲೇ.. ಕ್ಲೈಮ್ಯಾಕ್ಸ್ ಆಗೋದು ಕೂಡ ಒಂದು ಪಬ್‌ನಲ್ಲೇ.. ಇದಕ್ಕೆ ಸೂಕ್ತ ಹೆಸರು ಹುಡುಕಾಡುತ್ತಿದ್ದಾಗ ಪವ್ ಹೆಸರಲ್ಲೇ ಟೈಟಲ್ ಇಡಬೇಕು ಅಂದ್ಕೊಂಡ್ವಿ. ಆಗ ಸಿಕ್ಕಿದ್ದೇ ಶುಗರ್ ಫ್ಯಾಕ್ಟರ್ ಸಿಕ್ತು.” ಎನ್ನುತ್ತಾರೆ ದೀಪಕ್ ಅರಸ್. ಡಾರ್ಲಿಂಗ್ ಕೃಷ್ಣನೇ ಯಾಕೆ? “ಯೂತ್‌ಫುಲ್ ಸಿನಿಮಾ ಆಗಿದ್ದರಿಂದ ಆ ಟೈಮ್‌ಗೆ ಯೂತ್ ಫುಲ್ ಸಿನಿಮಾ ಹುಡುಕಾಡುತ್ತಿದ್ದೆವು. ಆ ಸಮಯದಲ್ಲಿ ಲವ್ ಮಾಕ್ಟೇಲ್ ರಿಲೀಸ್ ಆಗಿತ್ತು. ಯೂತ್‌ಗೆ ಕನೆಕ್ಟ್ ಆಯ್ತು. ಕೃಷ್ಣ ಸರ್ ಸೆಟ್ ಆದ್ರು. ಅವರೇ ಸೂಕ್ತ ಅಂತ ಅನಿಸಿತು. ಈ ಕ್ಯಾರೆಕ್ಟರ್ ಅವರ ಎಲ್ಲಾ ಸಿನಿಮಾಗೂ ತದ್ವಿರುದ್ಧವಾದದ್ದು. ನೋ ಲವ್, ನೋ ಕಮಿಟ್‌ಮೆಂಟ್ ಅನ್ನೋ ಹುಡುಗನ ಲೈಫ್‌ನಲ್ಲಿ ಹುಡುಗಿಯರು ಎಂಟ್ರಿ ಕೊಟ್ರೆ ಹೇಗಿರುತ್ತೆ ಅಂತ ಅನಿಸಿ ಅವರನ್ನು ಆಯ್ಕೆ ಮಾಡಿಕೊಂಡೆವು.” ಎಂದು ನಿರ್ದೇಶಕ ದೀಪಕ್ ಅರಸ್ ಹೇಳುತ್ತಾರೆ.
ಮೂರು ನಾಯಕಿಯರು ಯಾಕೆ? ಈ ಸಿನಿಮಾದಲ್ಲಿ ಸೋನಾಲ್ ಮಾಂಟೇರೋ, ಅದ್ವಿತಿ ಶೆಟ್ಟಿ, ರುಹಾನಿ ಶೆಟ್ಟಿ ಮೂವರು ನಾಯಕಿ. ಇವರ ಪಾತ್ರವೇನು? ಅನ್ನೋದನ್ನು ದೀಪಕ್ ಹೇಳೋದಿಷ್ಟು. “ಇಲ್ಲಿ ಸೋನಾಲ್ ಮಾಂಟೇರೊ ಪಾರ್ಟಿ ಫ್ರೀಕ್ ಹುಡುಗಿ. ಯಾರೂ ಸಿಗಲಿಲ್ಲ ಅಂದರೆ, ಹುಡುಕಿಕೊಂಡು ಹೋಗಿ ಪಾರ್ಟಿ ಮಾಡೋ ಹುಡುಗಿ. ಅದ್ವಿತಿಯವರದ್ದು ಸಾಫ್ಟ್, ಕ್ಲೋಸ್ ಮೈಂಡೆಡ್, ಮದುವೆ, ಲವ್ ಬಗ್ಗೆ ನಂಬಿಕೆ ಇಟ್ಟಿರೋ ಹುಡುಗಿ, ಇನ್ನೊಬ್ಬರದ್ದು ಯೂಟ್ಯೂಬರ್. ಇವರದ್ದು ಊರು ಸುತ್ತುವ ಪಾತ್ರ. ಇನ್ನು ರಂಗಾಯಣ ರಘು ಅವರದ್ದು ಪಬ್ ಓನರ್ ರೋಲ್. ಡಿಫ್ರೆಂಟ್ ರೋಲ್.” ಎಂದು ಪಾತ್ರದ ಬಗ್ಗೆ ಹೇಳಿದ್ದಾರೆ. ತಪ್ಪುಗಳನ್ನು ತಿದ್ದಿಕೊಂಡು ಸಿನಿಮಾ ಮಾಡಿದ್ದೇನೆ “ಈ ಸಿನಿಮಾವನ್ನು ‘ಡಿಟಿಎಸ್’ನಿಂದ ಹಿಡಿದು ‘ಡಿಐ’ವರೆಗೂ 60-70 ಸಾರಿ ನೋಡಿದ್ದೀನಿ. ನನಗೆ ಬೋರ್ ಅಂತಿಲ್ಲ. ಫ್ರೆಶ್‌ನೆಸ್ ಕೊಡುತ್ತೆ. ಒಬ್ಬ ಡೈರೆಕ್ಟರ್ ಆಗಿ ಎರಡನೇ ಸಿನಿಮಾ. ಗಾಂಧಿನಗರದಿಂದ ದೂರ ಇಡಬೇಕು ಅಂತ ಹೋದವನು. ಏನೇ ಮಾಡಿದರೂ ಸಿನಿಮಾ ತರನೇ ನೋಡುತ್ತಿದ್ದೆ. ದುಡಿಮೆ ಬ್ಯುಸಿನೆಸ್ ಇತ್ತು. ಆದರೂ ಸಿನಿಮಾ ಕಾಣೋದು. ಮೊದಲನೇ ಸಿನಿಮಾ ಮಾಡಿದ ಮಿಸ್ಟೇಕ್‌ಗಳನ್ನು ತದ್ದಿಕೊಂಡು ಆ ತಪ್ಪು ಮಾಡದಂತೆ ಹೊಸ ಸಿನಿಮಾ ಮಾಡಿದ್ದೇನೆ” ಎಂದು ‘ಶುಗರ್ ಫ್ಯಾಕ್ಟರಿ’ ನಿರ್ದೇಶಕ ದೀಪಕ್ ಅರಸ್ ಫಿಲ್ಮಿಬೀಟ್‌ಗೆ ತಿಳಿಸಿದ್ದಾರೆ.