Mata Official Trailer | Mata | Guru Prasad | Sadhu Kokila | Mandya Ramesh | Ravindra Vemshi | ARC
ಗುರು ಪ್ರಸಾದ್ ನಿರ್ದೇಶನದ ಸೂಪರ್ ಹಿಟ್ ಸಿನಿಮಾ ‘ಮಠ’ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಆದ್ರೆ ಅದೇ ಹೆಸರಲ್ಲಿ ಬರೋಬ್ಬರಿ 16 ವರ್ಷಗಳ ನಂತರ ಹೊಸದೊಂದು ಸಿನಿಮಾ ನಿರ್ಮಾಣವಾಗಿ ಇದೇ ತಿಂಗಳ 18ರಂದು ತೆರೆಗೆ ಬರ್ತಿದೆ. ನಿರ್ದೇಶಕ ರವೀಂದ್ರ ವೆಂಶಿ ನಿರ್ದೇಶನ ಸಾರಥ್ಯದ ಬಹು ತಾರಾಗಣ ಒಳಗೊಂಡ ‘ಮಠ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.
ಹೆದರಿಸಿ ಬೆದರಿಸಿ `ಎಚ್ಚರಿಸುವ’ ಚಿತ್ರ
ಟ್ರೇಲರ್ ಪ್ರಾಮಿಸಿಂಗ್ ಆಗಿ ಮೂಡಿ ಬಂದಿದ್ದು, ಕುತೂಹಲವನ್ನೂ ಹುಟ್ಟು ಹಾಕಿದೆ. ಫಿಲಾಸಫಿಕಲ್ ಹಾಗೂ ಕಾಮಿಡಿ ಮಿಶ್ರಿತ ಕಥಾಹಂದರ ಸಿನಿಮಾದಲ್ಲಿದೆ. ಕರ್ನಾಟಕದಲ್ಲಿರುವ ಮಠಗಳ ಬಗ್ಗೆ ಹಾಗೂ ಅಲ್ಲಿ ನಡೆದಂತ ನೈಜ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ನಿರ್ದೇಶಕ ರವೀಂದ್ರ ವೆಂಶಿ ಚಿತ್ರಕಥೆ ಹೆಣೆದು ನಿರ್ದೇಶನ ಮಾಡಿದ್ದಾರೆ. ರವೀಂದ್ರ ವೆಂಶಿ ‘ಪುಟಾಣಿ ಸಫಾರಿ’, ‘ವರ್ಣಮಯ’, ‘ವಾಸಂತಿ ನಲಿದಾಗ’ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದು ಈ ಬಾರಿ ‘ಮಠ’ ಮೂಲಕ ಡಿಫ್ರೆಂಟ್ ಕಥಾವಸ್ತುವನ್ನು ಕೈಗೆತ್ತಿಕೊಂಡಿದ್ದಾರೆ.
‘ದೂರದರ್ಶನ’ದಲ್ಲಿ ಕೇಳಿ ಬಂತು ವಾಸುಕಿ ವೈಭವ್ ಚಿತ್ರಗೀತೆ
ವಿ ಆರ್ ಕಂಬೈನ್ಸ್ ಬ್ಯಾನರ್ ನಡಿ ಆರ್.ರಮೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಬಹು ತಾರಾಗಣ ಒಳಗೊಂಡ ಈ ಚಿತ್ರದಲ್ಲಿ ಸಂತೋಷ್ ದಾವಣಗೆರೆ ನಾಯಕ ನಟನಾಗಿ ನಟಿಸಿದ್ದಾರೆ. ಸಾಧುಕೋಕಿಲ, ರಮೇಶ್ ಭಟ್, ತಬಲ ನಾಣಿ, ಶರತ್ ಲೋಹಿತಾಶ್ವ, ಬ್ಯಾಂಕ್ ಜನಾರ್ಧನ್, ರಾಜು ತಾಳಿಕೋಟೆ, ಮಂಡ್ಯ ರಮೇಶ್, ಗುರುಪ್ರಸಾದ್, ಬಿರಾದರ್ ಒಳಗೊಂಡ ತಾರಾಗಣವಿದೆ. ಜೀವನ್ ಗೌಡ ಛಾಯಾಗ್ರಾಹಣ, ಸಿ. ರವಿಚಂದ್ರನ್ ಸಂಕಲನ, ಶ್ರೀ ಗುರು ಸಂಗೀತ ನಿರ್ದೇಶನ ಚಿತ್ರಕ್ಕಿದೆ.ಯೋಗ ರಾಜ್ ಭಟ್, ವಿ.ನಾಗೇಂದ್ರ ಪ್ರಸಾದ್, ಗೌಸ್ ಫಿರ್ ಚಿತ್ರದ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಸಾಕಷ್ಟು ಇಂಟ್ರಸ್ಟಿಂಗ್ ಫ್ಯಾಕ್ಟರ್ ಹೊತ್ತ ‘ಮಠ’ ಸಿನಿಮಾ ನವೆಂಬರ್ 18ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.