ಹುಬ್ಬಳ್ಳಿಯಲ್ಲಿ ನಡೆದ ನೇಹಾ ಕೊಲೆ ಖಂಡಿಸಿ ಪ್ರತಿಭಟನೆಗಳು ನಡೆಯುತ್ತಿವೆ. ಆರೋಪಿಗೆ ಶಿಕ್ಷೆಯಾಗಬೇಕು, ಆತನನ್ನು ಗಲ್ಲಿಗೇರಿಸಬೇಕು. ನೇಹಾಗೆ ನ್ಯಾಯ ಸಿಗಬೇಕು ಎಂದೇ ಎಲ್ಲರೂ ಕೇಳುತ್ತಿದ್ದಾರೆ. ಸ್ಯಾಂಡಲ್ವುಡ್ ತಾರೆಯರೂ ಸಹ ಈ ಘಟನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ನಟಿ ರಚಿತಾ ರಾಮ್ ಕೂಡ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನೇಹಾ ಫೋಟೋ ಹಂಚುವ ಮೂಲಕ ನ್ಯಾಯಕ್ಕಾಗಿ ಕೂಗೆತ್ತಿದ್ದಾರೆ.
ಇದನ್ನೂ ಓದಿ :ಮೂರನೇ ಬಾರಿಗೆ ತೆರೆಮೇಲೆ ಒಂದಾಗುತ್ತಿದ್ದಾರೆ ಶಿವಣ್ಣ- ಜಾಕಿ ಭಾವನಾ
ಜಾತಿ, ಧರ್ಮ ಯಾವುದೇ ಆಗಿರಲಿ ಮೊದಲು ನಾವು ಮಾನವರು. ನಾನು ಈ ಪೋಸ್ಟ್ ಹಾಕಲು ಕಾರಣ ಆಕೆಗೆ ಆಗಿರುವ ಅನ್ಯಾಯ. ತಪ್ಪು ಯಾರೇ ಮಾಡಿದರು ತಪ್ಪೆ. ಸರ್ಕಾರಕ್ಕೆ ನನ್ನ ಮನವಿ! ರಾಜಕೀಯ ಆಯಾಮದಲ್ಲಿ ಈ ವಿಷಯವನ್ನು ತರಬೇಡಿ. ಆಗಿರೋದು ಅನ್ಯಾಯ. ಈಗ ನ್ಯಾಯ ಬೇಕಾಗಿದೆ ಅಷ್ಟೆ.
ಈ ರೀತಿಯ ಕೃತ್ಯ ಮಾಡುವವರನ್ನು ಗಲ್ಲಿಗೇರಿಸುವ ಬದಲು ಅವರನ್ನು ಜನಸಾಮಾನ್ಯರ ಕೈಗೆ ಒಪ್ಪಿಸಿ #Wewantjustice ಎಂದು ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ :ಮೂರನೇ ಬಾರಿಗೆ ತೆರೆಮೇಲೆ ಒಂದಾಗುತ್ತಿದ್ದಾರೆ ಶಿವಣ್ಣ- ಜಾಕಿ ಭಾವನಾ
ʻನನ್ನನ್ನು ಪ್ರೀತಿಸು ಅಂತ ನೀವು ಒಬ್ಬರನ್ನು ಹೇಗೆ ಒತ್ತಾಯ ಮಾಡಬಹುದು? ಅವಳು ಅದನ್ನು ವಿರೋಧಿಸಿದಾದ ಕೊಲೆ ಮಾಡಲಾಗುತ್ತದೆ. ಹುಬ್ಬಳ್ಳಿಯ ಕಾಲೇಜಿನಲ್ಲಿ ನಡೆದ ಈ ಘಟನೆ ನೋಡಿ ನಾನು ನಡುಗಿದ್ದೇನೆ. ಆ ವಯಸ್ಸಿನ ಹುಡುಗರಿಗೆ ಯಾವ ರೀತಿಯ ಮನಸ್ಥಿತಿ ಇರುತ್ತದೆ? ಶಾಲೆ-ಕಾಲೇಜಿನಲ್ಲಿ ಕಲಿಸಿದ ಬೇಸಿಕ್ ವಿಷಯಗಳನ್ನು ನಾವು ಮಕ್ಕಳಿಗೆ ಮನೆಯಲ್ಲಿ ಪಾಲಕರು ಕಲಿಸಬೇಕು.
ಈ ಥರದ್ದನ್ನು ನಾವು ಒಪ್ಪಲಾಗದು, ನೇಹಾ ಪಾಲಕರ ಸ್ಥಿತಿ ನೋಡಿ ಬೇಸರ ಆಗುತ್ತಿದೆ, ನೇಹಾ ಏನನ್ನು ಅನುಭವಿಸಿರಬೇಕು! “ ಎಂದು ನಟಿ ರಕ್ಷಿತಾ ಪ್ರೇಮ್ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.