ಡಿಂಪಲ್ ಕ್ವೀನ್ ಅಂತಾನೇ ಫೇಮಸ್ ಆಗಿರುವ ರಚಿತಾ ರಾಮ್ ಮೊದಲು ಸೀರಿಯಲ್ಲುಗಳಲ್ಲಿ ನಟಿಸುತ್ತಿದ್ದವರು. ದರ್ಶನ್ ಬ್ಯಾನರ್ʻನ ಬೃಂದಾವನ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದ ರಚಿತಾ ರಾಮ್, ಬೆಳ್ಳಿತೆರೆಯಲ್ಲಿ ಸ್ಟಾರ್ ನಟಿಯಾಗಿ ಮಿಂಚಿದವರು. ಇದೀಗ ತಮ್ಮ ಹಿಂದಿನ ಧಾರಾವಾಹಿ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ರಚಿತಾ ಅವರಿಗೆ ಸೀರಿಯಲ್ ದಿನಗಳನ್ನು ನೆನಪಿಸಿದ್ದು ಜೀ ವಾಹಿನಿ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮ.
ಇದನ್ನೂ ಓದಿ ಮುಂದಿನ ವಾರ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಒಳ್ಳೆ ಹುಡುಗ ಪ್ರಥಮ್
ಅರಸಿ ಅನ್ನೋ ಧಾರಾವಾಹಿಯಲ್ಲಿ ವಿಲನ್ ಆಗಿ ಮಾಡುತ್ತಿದ್ದೆ..ಎಲ್ಲೇ ಹೋದರು ಜನರು ನನ್ನನ್ನು ರಶ್ಮಿ ಎಂದು ಕರೆಯುತ್ತಿದ್ದರು. ಪುಟ್ಟ ಪುಟ್ಟ ಮಕ್ಕಳು ನನ್ನ ಜೊತೆ ಮಾತನಾಡಲು ಹೆದರಿಕೊಳ್ಳುತ್ತಿದ್ದರು ಅಷ್ಟು ಕೆಟ್ಟದಾಗಿ ತೋರಿಸಿದ್ದರು. ಅದು ನಟಿಯಾಗಿ ಖುಷಿಯನ್ನೇ ಕೊಟ್ಟಿತ್ತು. ನನ್ನ ಅಕ್ಕ ಕೂಡ ಧಾರಾವಾಹಿಯಲ್ಲಿ ನಟಿಸುತ್ತಿದ್ದರು ..ಬೆಂಕಿಯಲ್ಲಿ ಅರಳಿದ ಹೂ ಅಂತ ಸಂಜೆ 7 ರಿಂದ 7.30 ಅಕ್ಕ ಸೀರಿಯಲ್, 7.30ಯಿಂದ 8ರ ವರೆಗೂ ನನ್ನ ಸೀರಿಯಲ್ ಬರುತ್ತಿತ್ತು. ನಮ್ಮ ತಂದೆ ತಾಯಿ ಖುಷಿಯಿಂದ 1 ಗಂಟೆ ಟಿವಿ ಮುಂದೆ ಕುಳಿತು ನಮ್ಮನ್ನು ನೋಡುತ್ತಿದ್ದರು ಎಂದು ನೆನಪಿಸಿಕೊಂಡಿದ್ದಾರೆ ರಚಿತಾ.
ಇದನ್ನೂ ಓದಿ ಪುಷ್ಪ 2 ಬಗ್ಗೆ ಅಪ್ ಡೇಟ್ ಕೊಟ್ಟ ಅಲ್ಲು ಅರ್ಜುನ್
ಅಂದಹಾಗೆ ರಚಿತಾ ಅವರಿಗೆ ಅದನ್ನೆಲ್ಲ ನೆನಪಿಸಿಕೊಳ್ಳೋಕೆ ಕಾರಣ ಅವರಿಗೆ ಒಂದೂ ಅವಾರ್ಡ್ ಬಂದಿರಲಿಲ್ಲ ಎನ್ನುವುದೇ.ಜೀ ಕುಟುಂಬದವರು ಅಂತ ಹೇಳಿದ ತಕ್ಷಣ ಹಾಗೆ ಹಿಂದೆ ನೋಡಿದರೆ ನನಗೆ ನೆನಪಾಗುವುದು ಈ ತರಹದ ವೇದಿಕೆ. ಅವಾರ್ಡ್ ತಗೊಂಡಿಲ್ಲ ಆದರೆ ಇನ್ನಿತ್ತರ ಕಲಾವಿದರ ಜೊತೆ ಪರ್ಫಾರ್ಮ್ ಮಾಡಿದೆ. ಪ್ರತಿಯೊಬ್ಬರು ಬಂದು ಇಲ್ಲಿ ಅವಾರ್ಡ್ ತೆಗೆದುಕೊಳ್ಳುತ್ತಿರುವಾಗ ಅಯ್ಯೋ ಒಂದಾದರೂ ಅವಾರ್ಡ್ ಬರ್ಬಾರದಾ? ಮೂರು ಕ್ಯಾಟಗರಿಯಲ್ಲಿ ನಾನು ನಾಮಿನೇಟ್ ಆಗಿದ್ದೆ. ಈ ಸಲ ವಿನ್ ಆಗಿರುವ ಪ್ರತಿಯೊಬ್ಬರಿಗೂ ಒಳ್ಳೆಯದಾಗಲಿ. ನಾನು ಹೇಳುತ್ತಿರುವುದು ವಿಚಿತ್ರ ಅನಿಸಬಹುದು ಆದರೆ ಇದೇ ಸತ್ಯ. ಒಂದು ಮಾತು ಹೇಳುತ್ತೀನಿ…
ಅವಾರ್ಡ್ ಒಂದು ತೆಗೆದುಕೊಳ್ಳುವುದು ದೊಡ್ಡ ವಿಚಾರ ಅದಕ್ಕಿಂತ ದೊಡ್ಡದು ಜನರ ಮನಸ್ಸು ಗೆಲ್ಲುವುದು. ಪ್ರತಿ ದಿನ ಟಿವಿ ಮುಂದೆ ಕೂತ್ಕೊಂಡು ಸೀರಿಯಲ್ ನೋಡುವಂತ ವೀಕ್ಷಕರಿಗೆ ನಾವು ದೊಡ್ಡ ಮಟ್ಟದಲ್ಲಿ ಥ್ಯಾಂಕ್ಸ್ ಹೇಳಬೇಕು ಎಂದಿದ್ದಾರೆ ರಚಿತಾ ರಾಮ್.