ಪ್ರಶಾಂತ್ ನೀಲ್ ಅವರ ಕೆಜಿಎಫ್ ಚಿತ್ರದ ನಂತರ ರಾಕಿಂಗ್ ಸ್ಟಾರ್ ಯಶ್ ಅವರು ಈಗ ಭಾರತ ಚಿತ್ರರಂಗದಾದ್ಯಂತ ಮೋಸ್ಟ್ ವಾಂಟೆಡ್ ನಟರಾಗಿದ್ದಾರೆ. ರಾಜ್ಯದ ಗಡಿಯನ್ನು ಮೀರಿದ ಅಭಿಮಾನಿಗಳೊಂದಿಗೆ, ಯಶ್ ಈಗ ಪ್ಯಾನ್-ಇಂಡಿಯಾ ಸ್ಟಾರ್‌ಗಳಲ್ಲಿ ಒಬ್ಬರು.
ಇತ್ತೀಚಿನ ಬಝ್ ಪ್ರಕಾರ ದಕ್ಷಿಣದ ಖ್ಯಾತ ನಿರ್ಮಾಪಕ, ಬಹುಕೋಟಿ ಬಜೆಟ್ ಸಿನಿಮಾ ಮಾಡುವ ದಿಲ್ ರಾಜು ಅವರು ಯಶ್ ಗಾಗಿ ಒಂದು ಸಿನಿಮಾ ಮಾಡಲು ತಯಾರಿ ಮಾಡಿಕೊಳ್ಳುತ್ತಿದ್ದಾರಂತೆ. ಈ ಸಿನಿಮಾವನ್ನು ತೆಲುಗು ನಿರ್ದೇಶಕರೇ ನಿರ್ದೇಶನ ಮಾಡಿದರೂ, ಅದೊಂದು ಪ್ಯಾನ್ ಇಂಡಿಯಾ ಸಿನಿಮಾವಂತೆ.
ಹಾಗಾಗಿ ಈ ಚಿತ್ರದಲ್ಲಿ ನಟಿಸಲು ಯಶ್ ಅವರಿಗೆ ದಿಲ್ ರಾಜು 100 ಕೋಟಿ ರೂಪಾಯಿ ಸಂಭಾವನೆಯ ಆಫರ್ ನೀಡಿದ್ದಾರಂತೆ.ಅಂದುಕಂಡಂತೆ ಆದರೆ, ದಕ್ಷಿಣದಲ್ಲೇ ಈ ಪ್ರಮಾಣದಲ್ಲಿ ಸಂಭಾವನೆ ಪಡೆಯುವ ಬೆರಳಣಿಕೆಯ ನಟರಲ್ಲಿ ಯಶ್ ಕೂಡ ಒಬ್ಬರಾಗಲಿದ್ದಾರೆ.
ದಿಲ್ ರಾಜು ಅವರು ಶಾಹಿದ್ ಕಪೂರ್ ಅಭಿನಯದ ಜೆರ್ಸಿ ಚಿತ್ರದ ಮೂಲಕ ನಿರ್ಮಾಪಕರಾಗಿ ಬಾಲಿವುಡ್ ಪ್ರವೇಶಿಸಿದ್ದಾರೆ, ಅದೇ ಹೆಸರಿನ ನಾನಿ ಅವರ ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರದ ರಿಮೇಕ್. ಅವರು ವಿಶ್ವಕ್ ಸೇನ್ ನಟಿಸಿದ ತೆಲುಗು ಚಿತ್ರ HIT ನ ರಿಮೇಕ್ ಹಿಂದಿಯಲ್ಲಿ ಪ್ರಾಜೆಕ್ಟ್ ಅನ್ನು ಸಹ ನಿರ್ಮಿಸುತ್ತಿದ್ದಾರೆ.