ಸದ್ಯ ಗೋವಾದಲ್ಲೆ ದಿಗಂತ್ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವೇ ಗಂಟೆಗಳಲ್ಲಿ ಏರ್ ಲಿಪ್ಟ್ ಮೂಲಕ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಿಗಂತ್ ಅವರನ್ನು ಕುಟುಂಬಸ್ಥರು ಕರೆತರಲಿದ್ದಾರೆ ಎಂದು ಹೇಳಲಾಗಿದೆ.
ಹೆಚ್ಚಿನ ಓದಿಗಾಗಿ;- ‘ಮಾದೇವ’ : ವಿನೋದ್ ಪ್ರಭಾಕರ್ ಹೊಸ ಸಿನಿಮಾ ಅನೌನ್ಸ್
ನಟ ದಿಗಂತ್ ಕುತ್ತಿಗೆಗೆ ಬಲವಾದ ಪೆಟ್ಟು ಬಿದ್ದಿದೆ. ಗೋವಾದ ಸಮುದ್ರ ತಟದಲ್ಲಿ ಸಮ್ಮರ್ ಶಾಟ್ ಹೊಡೆಯುವ ವೇಳೆ ದಿಗಂತ್ ಕುತ್ತಿಗೆಗೆ ಪೆಟ್ಟು ಬಿದ್ದಿದೆ. ಕುಟುಂಬದ ಜೊತೆ ನಟ ದಿಗಂತ್ ಗೋವಾ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ದಿಗಂತ್ ಕುತ್ತಿಗೆಗೆ ಬಲವಾದ ಪೆಟ್ಟು ಬಿದ್ದಿದೆ. ದಿಗಂತ್ ಕುತ್ತಿಗೆಗೆ ಬಲವಾದ ಪೆಟ್ಟು ಬಿದ್ದಿರುವ ಬಗ್ಗೆ ದಿಗಂತ್ ಆಪ್ತರಿಂದ ನ್ಯೂಸ್ ೧೮ಗೆ ಮಾಹಿತಿ ದೊರೆತಿದೆ. ಸದ್ಯ ಗೋವಾದಲ್ಲೆ ದಿಗಂತ್ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವೇ ಗಂಟೆಗಳಲ್ಲಿ ಏರ್ ಲಿಪ್ಟ್ ಮೂಲಕ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಿಗಂತ್ ಅವರನ್ನು ಕುಟುಂಬಸ್ಥರು ಕರೆತರಲಿದ್ದಾರೆ ಎಂದು ಹೇಳಲಾಗಿದೆ.
ಹೆಚ್ಚಿನ ಓದಿಗಾಗಿ;-`ಕರ್ತ ಕರ್ಮ ಕ್ರಿಯ’: ಸ್ವಮೇಕಾ.. ಇಲ್ಲಾ.. ರಿಮೇಕಾ?
ದಿಗಂತ್ ಕುಟುಂಬದ ಮೂಲಗಳು ಅಧಿಕೃತ ಮಾಹಿತಿ ನೀಡಿವೆ. ನಟ ದಿಗಂತ್ ಕುಟುಂಬ ಸಮೇತ ಗೋವಾ ಪ್ರವಾಸಕ್ಕೆ ತೆರಳಿದ್ದರು. ಆದರೆ ಗೋವಾದಲ್ಲಿ ಈ ಅವಘಡ ಸಂಭವಿಸಿದೆ. ಸಮ್ಮರ್ ಶಾಟ್ ಮಾಡುವ ವೇಳೆ ದಿಗಂತ್ ಅವರ ಕತ್ತಿಗೆ ಬಲವಾದ ಪೆಟ್ಟು ಬಿದ್ದಿದೆ ಎಂದು ತಿಳಿದುಬಂದಿದೆ. ಈಕುರಿತು ಇನ್ನಷ್ಟು ಮಾಹಿತಿ ಅಪ್ಡೇಟ್ ಆಗಬೇಕಿದೆ.
ಕೆಲವು ವರ್ಷಗಳ ಹಿಂದೆ ವಿದೇಶದಲ್ಲಿ ದಿಗಂತ್ ಚಿತ್ರವೊಂದರ ಚಿತ್ರೀಕರಣ ನಡೆಸುವಾಗ ದುರ್ಘಟನೆಯೊಂದು ನಡೆದಿತ್ತು. ಈ ಚಿತ್ರೀಕರಣದ ವೇಳೆ ದಿಗಂತ್ ಕಣ್ಣೊಂದಕ್ಕೆ ಹಾನಿಯಾಗಿತ್ತು. ಸ್ವತಃ ದಿಗಂತ್ ಅವರೇ ಈ ಘಟನೆಯನ್ನು ತಿಳಿಸಿದ್ದರು.