ತನಗೆ ಸಿಹಿ ಎನ್ನುವ ಮಗಳು ಇದ್ದಾಳೆ ಎನ್ನುವ ಸತ್ಯವನ್ನು ತಾತನ ಎದುರು ಹೇಳಲು ಹೋದಾಗ ಅದಕ್ಕೆ ಭಾರ್ಗವಿ ಅಡ್ಡಗಾಲು ಹಾಕಿದ್ದಳು. ಅದರೆ ತಾತ ಮತ್ತು ಸಿಹಿ ನಡುವೆ ಇದಾಗಲೇ ಫೋನ್ನಲ್ಲಿ ಮಾತುಕತೆ ನಡೆದಿತ್ತು. ಸಿಹಿ ತಾತನನ್ನು ಮನೆಗೆ ಕರೆದಿದ್ದಳು. ಅಲ್ಲಿ ಬಂದ ತಾತನನ್ನು ಸಿಹಿ ಮನೆಗೆ ಕರೆದುಕೊಂಡು ಹೋಗಿ ಸೀತಮ್ಮನ ಮನೆ ಎಂದಿದ್ದಾಳೆ. ನನಗೆ ಸೀತಮ್ಮನ ಮನೆ ಬೇಡ, ನಿನ್ನ ಮನೆ ಬೇಕು ಎಂದಿದ್ದಾನೆ ತಾತ. ಆಗ ಸಿಹಿ ಇದು ಸೀತಮ್ಮನ ಮನೆಯೇ. ನಾನು ಸೀತಮ್ಮನ ಮಗಳು ಎಂದಿದ್ದಾಳೆ.
ಈ ವಿಷಯ ತಾತನಿಗೆ ಮುಂಚೆನೇ ಗೊತ್ತಿತ್ತಾ ಅಥವಾ ಮುಚ್ಚಿಟ್ಟ ಗುಟ್ಟು ರಟ್ಟಾಗಿ ಹೋಯ್ತಾ ಎನ್ನುವುದು ಈಗಿರುವ ಕುತೂಹಲ. ಸೀತಾ ತಾತಂಗೆ ನಿಜಕ್ಕೂ ವಿಷಯ ತಿಳಿಸಿರಲೇ ಇಲ್ವಾ? ಏನಾದರೂ ಆಗಲಿ, ಸಿಹಿಯ ವಿಷಯ ಮುಚ್ಚಿಡಲು ಸಾಧ್ಯವೇ ಇಲ್ಲ ಎಂದು ತಾತನ ಕೋಣೆಗೆ ಹೋಗಿದ್ದ ಸೀತಾ ಅಲ್ಲಿ ಸಿಹಿಯ ವಿಷಯ ಹೇಳಿದ್ದಳಾ ಎನ್ನುವ ಕುತೂಹಲವಿದೆ.
ಅಷ್ಟಕ್ಕೂ, ತನಗೆ ಮಗಳು ಸಿಹಿ ಇರುವ ಸತ್ಯವನ್ನು ತಾತನ ಎದುರು ಹೇಳಬೇಡ ಎಂದು ಭಾರ್ಗವಿ ಸೀತಾಳಿಗೆ ಹೇಳಿದ್ದಳು. ಅವಳೇನೂ ಅದನ್ನು ಕಾಳಜಿಯಿಂದ ಹೇಳಿದ್ದಲ್ಲ. ಬದಲಿಗೆ ಸೀತಾ ಈ ಸತ್ಯವನ್ನು ಅಡಗಿಸಿಟ್ಟರೆ, ಕೊನೆಗೆ ಸತ್ಯ ಮುಚ್ಚಿಟ್ಟಿದ್ದಾಳೆ ಎಂದು ರಾಮ್ ಮತ್ತು ಸೀತಾಳನ್ನು ದೂರ ಮಾಡುವ ದುರುದ್ದೇಶ ಇವಳದ್ದು. ಆದರೆ ಚಿಕ್ಕಮ್ಮನ ಕುತಂತ್ರ ಇತ್ತ ರಾಮ್ಗೂ ಗೊತ್ತಿಲ್ಲ, ಸೀತಾಳಿಗೂ ಗೊತ್ತಿಲ್ಲ.
ಇಬ್ಬರೂ ಭಾರ್ಗವಿ ಒಳ್ಳೆಯವಳು ಎಂದೇ ಅಂದುಕೊಂಡಿದ್ದಾರೆ. ಆದರೆ ಸತ್ಯ ಹೇಳಿದರೆ ತಾತನ ಪ್ರಾಣಕ್ಕೆ ಕುತ್ತು ಬರಬಹುದು ಎಂದು ಚಿಕ್ಕಮ್ಮ ಹೇಳಿದ್ದರಿಂದ ಏನು ಮಾಡುವುದು ಎಂದು ಸೀತಾಳಿಗೆ ತಿಳಿಯುತ್ತಿಲ್ಲ. ಆದರೆ ತಾನು ಸತ್ಯವನ್ನು ಮುಚ್ಚಿಡುವುದು ಸಾಧ್ಯವೇ ಇಲ್ಲ ಎಂದಿದ್ದಾಳೆ. ನಿಮಗೆ ಹೇಗೆ ಅನ್ನಿಸುತ್ತದೆಯೋ, ಅದೇ ರೀತಿ ಮಾಡಿ ಎಂದೂ ರಾಮ್ ಸಪೋರ್ಟ್ ಮಾಡಿದ್ದ. ಸೀತಾ ತಾತನ ಬಳಿ ಹೋಗಿದ್ದಾಳೆ.
ಅವನು ವಿಷಯ ಕೇಳಿದಾಗ ನನಗೆ ಅಪ್ಪ-ಅಮ್ಮ ಇಲ್ಲ… ಅವರ ಜಾಗದಲ್ಲಿ… ಎಂದಷ್ಟೇ ಸೀತಾ ಹೇಳಿದ್ದಳು. ಆದರೆ ಅವರ ನಡುವೆ ಸಿಹಿಯ ಮಾತುಕತೆ ನಡೆದಿದ್ಯೋ ಇಲ್ವೋ ಎನ್ನುವುದು ಸಸ್ಪೆನ್ಸ್ ಇಡಲಾಗಿದೆ.