Sandalwood Leading OnlineMedia

‘ಧೈರ್ಯಂ ಸರ್ವತ್ರ ಸಾಧನಂ’ ಚಿತ್ರದ ಪ್ರಚಾರ ಕಾರ್ಯ ಶುರು – ‘ಹೆಂಡವೇ ನಮ್ಮ ಮನೆ ದ್ಯಾವರು’ ಲಿರಿಕಲ್ ವೀಡಿಯೋ ಸಾಂಗ್ ಬಿಡುಗಡೆ

Yandave Namma Mane Dyavru Lyrical Video | Dhairyam Sarvatra Sadhanam Movie |AR Sai Ramm| AnandBabu G

 

 

ಧೈರ್ಯಂ ಸರ್ವತ್ರ ಸಾಧನಂ..ಸ್ಯಾಂಡಲ್ ವುಡ್ ಸಿನಿ ಪ್ರೇಕ್ಷರನ್ನು ರಂಜಿಸಲು ಸಿದ್ದವಾಗಿರುವ ನೂತನ ಚಿತ್ರ. ಪವರ್ ಫುಲ್ ಟೈಟಲ್ ಮೂಲಕ ಸುದ್ದಿಯಲ್ಲಿರುವ ಸಿನಿಮಾ ತಂಡವೀಗ ಚಿತ್ರದ ಮೊಟ್ಟ ಮೊದಲ ಹಾಡು ಬಿಡುಗಡೆ ಮಾಡಿದೆ. ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ನಿರ್ದೇಶನ ವಿಭಾಗದಲ್ಲಿ, ಡೈಲಾಗ್ ರೈಟರ್ ಆಗಿ, ತಾಂತ್ರಿಕ ವಿಭಾಗದಲ್ಲಿ ದುಡಿದು ಅನುಭವ ಇರುವ ಎ. ಆರ್. ಸಾಯಿರಾಮ್ ಚೊಚ್ಚಲ ನಿರ್ದೇಶನದಲ್ಲಿ ಅರಳಿದ ಸಿನಿಮಾ ಧೈರ್ಯಂ ಸರ್ವತ್ರ ಸಾಧನಂ.  ಹೆಂಡವೇ ನಮ್ಮ ಮನೆ ದ್ಯಾವರು ಎಂಬ ಹಾಡಿನ ಲಿರಿಕಲ್ ವೀಡಿಯೋ ಬಿಡುಗಡೆ ಮಾಡಿ ಚಿತ್ರತಂಡ ಸಿನಿಮಾದ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದೆ. ಹಳ್ಳಿ ಸೊಗಡಿರೋ ಈ ಹಾಡಿಗೆ ನಿರ್ದೇಶಕ ಎ.ಆರ್. ಸಾಯಿರಾಮ್ ಮತ್ತು ಹೃದಯ ಶಿವ ಸಾಹಿತ್ಯ ಬರೆದಿದ್ದು, ದೇವಾನಂದ್ ವರ ಪ್ರಸಾದ್ ಹಾಡಿಗೆ ದನಿಯಾಗಿದ್ದಾರೆ. ಜ್ಯೂಡಾ ಸ್ಯಾಂಡಿ ಸಂಗೀತ ಸಂಯೋಜನೆ ಈ ಹಾಡಿಗಿದೆ.

 

 `Vijayanand’ Movie Review : A story worth telling, a movie worth watching

 

ಚಿತ್ರದಲ್ಲಿ ಹೊಸ ಪ್ರತಿಭೆ ವಿವನ್ ಕೆ.ಕೆ ನಾಯಕ ನಟನಾಗಿ ಅಭಿನಯಿಸಿದ್ದು, ಅನುಷಾ ರೈ ನಾಯಕಿಯಾಗಿ ನಟಿಸಿದ್ದಾರೆ. ಯಶ್ ಶೆಟ್ಟಿ, ಬಾಲ ರಾಜವಾಡಿ, ಪ್ರದೀಪ್ ಪೂಜಾರಿ, ರಾಮ್ ಪವನ್, ವರ್ಧನ್ ತೀರ್ಥಹಳ್ಳಿ, ಚಕ್ರವರ್ತಿ ಚಂದ್ರಚೂಡ್, ಹೊಂಗಿರಣ ಚಂದ್ರು ಸೇರಿದಂತೆ ಹಲವು ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ.   ಚಿತ್ರೀಕರಣ ಕಂಪ್ಲೀಟ್ ಆಗಿ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿ ಸೆನ್ಸಾರ್ ಗೆ ರೆಡಿಯಾಗಿರುವ ಚಿತ್ರತಂಡ ಹಾಡು ಬಿಡುಗಡೆ ಮಾಡುವ ಮೂಲಕ ಪ್ರಚಾರ ಕಾರ್ಯ ಆರಂಭಿಸಿದೆ. ಫೆಬ್ರವರಿ ಅಥವಾ ಮಾರ್ಚ್ ನಲ್ಲಿ ಸಿನಿಮಾ ಬಿಡುಗಡೆ ಮಾಡಲು  ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ.

 

 

 

 ಯಶಸ್ಸಿನ ಖುಷಿಯಲ್ಲಿ ಡಿ.ಆರ್. 56 : ಇದು ನಿಜವಾದ ಪ್ಯಾನ್ ಇಂಡಿಯಾ ಸಿನಿಮಾ!

ಎ. ಪಿ. ಪ್ರೊಡಕ್ಷನ್ಸ್ ಬ್ಯಾನರ್ ನಡಿ ಆನಂದ್ ಬಾಬು.ಜಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಐದು ಹಾಡು, ಐದು ಆಕ್ಷನ್ ಸೀನ್ ಗಳಿದ್ದು, ಜ್ಯೂಡ ಸ್ಯಾಂಡಿ ಸಂಗೀತ ನಿರ್ದೇಶನ, ಶ್ರೀಕಾಂತ್ ಸಂಕಲನ, ರವಿಕುಮಾರ್ ಸನ ಛಾಯಾಗ್ರಹಣ ಈ ಚಿತ್ರಕ್ಕಿದೆ. ಕಿನ್ನಲ್ ರಾಜ್, ಅರಸು ಅಂತಾರೆ, ಹೃದಯ ಶಿವ, ಎ. ಆರ್.ಸಾಯಿರಾಮ್ ಚಿತ್ರದ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ.

Share this post:

Related Posts

To Subscribe to our News Letter.

Translate »