Sandalwood Leading OnlineMedia

ದೃವತಾರೆ ಚಿತ್ರದ ಟ್ರೈಲರ್ ಬಿಡುಗಡೆ: ಮೆಚ್ಚುಗೆ ವ್ಯಕ್ತಪಡಿಸಿದ ಸ್ಯಾಂಡಲ್‌ವುಡ್ ನಟರು

ಎಲ್ಲೆಲ್ಲೂ ಧ್ರುವತಾರೆ ಸಿನಿಮಾದ ಸದ್ದು ಸೋಶಿಯಲ್ ಮೀಡಿಯಾದಲಂತು ವಿಭಿನ್ನ ಕಂಟೆಂಟ್ ಮೂಲಕ ಚಿತ್ರತಂಡದವರು ಅಬ್ಬರ ಮಾಡುತ್ತಿದ್ದಾರೆ, ಇದೇ ತಿಂಗಳು 20ನೇ ತಾರೀಕು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿರುವ ದ್ರುವ ತಾರೆ ಚಿತ್ರಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್, ನವರಸ ನಾಯಕ ಜಗ್ಗೇಶ್, ರಮೇಶ್ ಅರವಿಂದ್ ಮುಂತಾದ ನಟರು ಮೆಚ್ಚಿ ಬೆನ್ನು ತಟ್ಟಿದ್ದಾರೆ, ಹೊಸಬರ ಚಿತ್ರಕ್ಕೆ ಈ ರೀತಿ ಪ್ರೋತ್ಸಾಹ ಸಿಕ್ಕಿರುವುದು ನಮಗೆ ಇನ್ನೂ ಭರವಸೆ ಮೂಡಿಸಿದೆ ಹಾಗೂ ಮತ್ತುಳಿದ ಮೇರು ನಟರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇನೆ ಎಂದು ನಟ ನಿರ್ದೇಶಕರಾದ ಪ್ರತೀಕ್ ತಿಳಿಸಿದ್ದಾರೆ.

ಈಗಾಗಲೇ ಚಿತ್ರದ ಟ್ರೈಲರ್ A2 ಫಿಲಂಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದ್ದು ಅತ್ಯುತ್ತಮ ಪ್ರತಿಕ್ರಿಯೆ ದೊರಕುತ್ತಿದೆ . ಚಿತ್ರದ ಟ್ರೈಲರ್ ಹೇಳುವ ಹಾಗೆ ಇದು ಒಂದು ವಾಸ್ತವದ ಪ್ರೇಮಕಥೆಯಾಗಿದೆ. ಜಿಪಿ ಫಿಲಂ ಸ್ಟುಡಿಯೋಸ್ ಬ್ಯಾನರ್ ನಡಿ ಗಣೇಶ್ ಕುಮಾರ್ ಸಿನಿಮಾದ ನಿರ್ಮಾಣ ಮಾಡಿದ್ದು ಪ್ರತೀಕ್ ನಿರ್ದೇಶನದ ಜವಾಬ್ದಾರಿಯೊಂದಿಗೆ ನಟನೆಯನ್ನು ಕೂಡ ಮಾಡಿದ್ದಾರೆ.

ಪ್ರತಿಕ್ ಮತ್ತು ಮೌಲ್ಯ ಮುಖ್ಯ ತಾರಾಗಣದಲ್ಲಿ ಕಾಣಿಸಿಕೊಂಡಿದ್ದು, ಉಳಿದಂತೆ ರಮೇಶ್ ಭಟ್, ಮೂಗೂರು ಸುರೇಶ್, ಸುಮನ್ ನಗರ್ಕರ್, ಅಶ್ವಿನ್ ರಾವ್ ಪಲ್ಲಕ್ಕಿ, ಪಿಡಿ ಸತೀಶ್ ಸೇರಿದಂತೆ ಹಲವರು ಇದ್ದಾರೆ . ಬಹು ಮುಖ್ಯವಾಗಿ ನೆಗೆಟಿವ್ ಷೆಡ್ ನಲ್ಲಿ ಬಿಗ್ ಬಾಸ್ ಕ್ಯಾತಿಯ ಕಾರ್ತಿಕ್ ಮಹೇಶ್ ಕಾಣಿಸಿಕೊಂಡಿದ್ದು ಒಂದು ಅದ್ಭುತ ಫ್ಯಾಮಿಲಿ ಡ್ರಾಮಾ ಹೇಳಲು ಚಿತ್ರತಂಡ ಹೊರಟಿದೆ.

Share this post:

Related Posts

To Subscribe to our News Letter.

Translate »