Left Ad
ಆ್ಯಕ್ಷನ್ ಪ್ರಿನ್ಸ್ ಮಾರ್ಟಿನ್ ಬಿಗ್ ಅಪ್ಡೇಟ್! ಟೀಸರ್ ರಿಲೀಸ್ ಡೇಟ್ ಫಿಕ್ಸ್ - Chittara news
# Tags

ಆ್ಯಕ್ಷನ್ ಪ್ರಿನ್ಸ್ ಮಾರ್ಟಿನ್ ಬಿಗ್ ಅಪ್ಡೇಟ್! ಟೀಸರ್ ರಿಲೀಸ್ ಡೇಟ್ ಫಿಕ್ಸ್

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿಮಾನಿಗಳಿಗೆ ಗುಡ್ ನ್ಯೂಸ್‌ವೊಂದು ಸಿಕ್ಕಿದೆ. `ಮಾರ್ಟಿನ್’  ಚಿತ್ರದ ಅಪ್‌ಡೇಟ್‌ಗಾಗಿ ಕಾಯ್ತಿದ್ದ ಫ್ಯಾನ್ಸ್‌ಗೆ ಚಿತ್ರದ ಬಗ್ಗೆ ಈಗ ಬಿಗ್ ಅಪ್‌ಡೇಟ್‌ವೊಂದನ್ನ ಚಿತ್ರತಂಡ ನೀಡಿದ್ದಾರೆ.

`ಪೊಗರು’ ಚಿತ್ರದ ನಂತರ ಈಗ ಧ್ರುವಾ ಸರ್ಜಾ ರಗಡ್- ಮಾಸ್ ಲುಕ್‌ನಲ್ಲಿ ಮಾರ್ಟಿನ್ ಆಗಿ ಅಬ್ಬರಿಸಲು ರೆಡಿಯಾಗಿದ್ದಾರೆ. ನಿರ್ದೇಶಕ ಎಪಿ ಅರ್ಜುನ್ ನಿರ್ದೇಶನದ `ಅದ್ದೂರಿ’ ಚಿತ್ರದಲ್ಲಿ ಅದ್ದೂರಿಯಾಗಿ ಎಂಟ್ರಿ ಕೊಟ್ಟಿದ್ದ ಧ್ರುವ ಈಗ ಮತ್ತೆ ಮಾರ್ಟಿನ್‌ಗಾಗಿ ಸಾಥ್ ನೀಡಿದ್ದಾರೆ.

2021ರಲ್ಲಿ ‘ಪೊಗರು’ ಸಿನಿಮಾ ಬಿಡುಗಡೆ ಆಗಿದ್ದನ್ನು ಬಿಟ್ಟರೆ ಆಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅವರ ಬೇರಾವ ಸಿನಿಮಾ ಈವರೆಗೂ ರಿಲೀಸ್‌ ಆಗಿಲ್ಲ. ಇದೀಗ ಬ್ಯಾಕ್‌ ಟು ಬ್ಯಾಕ್‌ ಎರಡು ಪ್ರಾಜೆಕ್ಟ್‌ಗಳಲ್ಲಿ ಧ್ರುವ ತೊಡಗಿಸಿಕೊಂಡಿದ್ದಾರೆ. ಆ ಪೈಕಿ ‘ಮಾರ್ಟಿನ್‌’ ಸಿನಿಮಾ ಇನ್ನೇನು ಇದೇ ವರ್ಷದಲ್ಲಿ ಬಿಡುಗಡೆ ಆಗಲಿದೆ. ಈಗಾಗಲೇ ಬಹುತೇಕ ಶೂಟಿಂಗ್‌ ಮುಗಿಸಿಕೊಂಡಿರುವ ಚಿತ್ರತಂಡ ಇದೀಗ ಬಿಡುಗಡೆಯ ಬಗ್ಗೆ ಮುನ್ಸೂಚನೆ ನೀಡಲು ಪ್ರೇಕ್ಷಕರೆದುರು ಟೀಸರ್‌ ಮೂಲಕ ಆಗಮಿಸಲಿದೆ.

ಉದಯ್ ಮೆಹ್ತಾ ನಿರ್ಮಾಣದ ಪ್ಯಾನ್ ಇಂಡಿಯಾ ಸಿನಿಮಾ ಮಾರ್ಟಿನ್ ಧ್ರುವಾಗೆ ವೈಭವಿ ಶಾಂಡಲ್ಯ ನಾಯಕಿಯಾಗಿ ನಟಿಸಿದ್ದಾರೆ. ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ತೆರೆಗೆ ಬರಲಿದೆ.

Spread the love
Translate »
Right Ad