ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಹಯಗ್ರೀವ ಹಾಗೂ ರುದ್ರಾಕ್ಷಿ. ಮೊದಲು ಹೆಣ್ಣು ಮಗು ಹುಟ್ಟಿದರೆ ನಂತರ ಹುಟ್ಟುವ ಮಕ್ಕಳಿಗೆ ಅವಳೆ ಎರಡನೇ ತಾಯಿ ಆಗ್ತಾಳೆ ಎಂಬ ಮಾತು ಲೋಕಾರೂಢಿ. ಇದೀಗ ಧ್ರುವ ಸರ್ಜಾ ವಿಚಾರದಲ್ಲಿ ಅದು ಸತ್ಯವಾಗಿದೆ. ಹಯಗ್ರೀವನಿಗೆ ರುದ್ರಾಕ್ಷಿಯೇ ಕಾವಲಾಗಿದ್ದಾಳೆ. ಅವನು ಮಲಗುವಾಗ ರುದ್ರಾಕ್ಷಿಯದ್ದೇ ಲಾಲಿ ಹಾಡು.
ಇದನ್ನೂ ಓದಿ Kreem Movie Review: ಜನ ಸಾಮಾನ್ಯನಿಗೆ ನಿಲುಕದ ಅಸಮಾನ್ಯ ಚಿತ್ರ!
ಆಕ್ಚನ್ ಪ್ರಿನ್ಸ್ ಧ್ರುವ ಸರ್ಜಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಒಂದು ಬ್ಯೂಟಿಫುಲ್ ವಿಡಿಯೋ ಹಂಚಿಕೊಂಡಿದ್ದಾರೆ. ಮಗಳು, ಮಗನಿಗಾಗಿ ಲಾಲಿ ಹಾಡುತ್ತಿರುವ ವಿಡಿಯೋ ಅದು. ಈ ವಿಡಿಯೋ ನೋಡಿದ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ. ಮಗಳಮ್ಮ, ಅಕ್ಕ-ತಮ್ಮ ಬಾಂಡಿಂಗ್ ಅದ್ಭುತವಾಗಿದೆ ಎಂದೆಲ್ಲಾ ಕಮೆಂಟ್ ಗಳನ್ನು ಹಾಕುತ್ತಿದ್ದಾರೆ. ಧ್ರುವ ಸರ್ಜಾ ಅವರ ಈ ವಿಡಿಯೋಗೆ ಮೆಚ್ಚುಗೆಯು ವ್ಯಕ್ತವಾಗುತ್ತಿದೆ.
ಇದನ್ನೂ ಓದಿ ಶರಣ್ ಅಭಿನಯದ ಬಹು ನಿರೀಕ್ಷಿತ “ಛೂ ಮಂತರ್” ಚಿತ್ರ ಏಪ್ರಿಲ್ 5 ರಂದು ತೆರೆಗೆ. .
ಧ್ರುವ ಸರ್ಜಾ ಸಿನಿಮಾದ ಜೊತೆಗೆ ಫ್ಯಾಮಿಲಿಗೂ ಹೆಚ್ಚು ಒತ್ತು ನೀಡುತ್ತಾರೆ. ಹೆಚ್ಚಿನ ಸಮಯ ಹೆಂಡತಿ, ಮಕ್ಕಳ ಜೊತೆಗೆ ಕಳೆಯುತ್ತಾರೆ. ವಿಶೆಷ ದಿನಗಳಗಳನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಾರೆ. ಸದ್ಯಕ್ಕೆ ಕೆಡಿ ಹಾಗೂ ಮಾರ್ಟಿನ್ ಸಿನಿಮಾದಲ್ಲಿ ಧ್ರುವ ಅವರು ತೊಡಗಿಕೊಂಡಿದ್ದಾರೆ. ಮಾರ್ಟಿನ್ ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದು, ಧ್ರುವ ಸರ್ಜಾ ಅವರು ಹಾಕುವ ಒಂದೊಂದು ಫೋಟೋ, ವಿಡಿಯೋಗೂ ಮಾರ್ಟಿನ್ ಅಪ್ಡೇಟ್ ಕೊಡಿ ಬಾಸ್ ಅಂತ ಅಭಿಮಾನಿಗಳು ಕಮೆಂಟ್ ಹಾಕುತ್ತಿದ್ದಾರೆ.
https://www.instagram.com/reel/C3_wY3IIIdl/?igsh=MWxybjVxZHU5OTB4cw%3D%3D