ಹೊಂಬಾಳೆ ಸಂಸ್ಥೆ ನಿರ್ಮಾಣದ ‘ಧೂಮಮ್’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಧೂಮಮ್ ಸಿನಿಮಾ ಟ್ರೈಲರ್ ರಿಲೀಸ್ ಆಗಿ ಭಾರಿ ಸದ್ದು ಮಾಡ್ತಿದೆ. ತಂಬಾಕು ಪದಾರ್ಥಗಳಾದ ಧೂಮಪಾನ, ಪಾನ್, ಗುಟ್ಕಾ ಆರೋಗ್ಯಕ್ಕೆ ಹಾನಿಕರ ಎನ್ನುವ ಸಂದೇಶವನ್ನು ಹೊತ್ತುಪವನ್ ಕುಮಾರ್ ರವರ ಸ್ಪೆಷಲ್ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದೆ.
ಲೂಸಿಯಾ’, ‘ಯೂಟರ್ನ್’ ನಂತರ ಪವನ್ ಕುಮಾರ್ ನಿರ್ದೇಶಿಸಿದ ‘ಧೂಮಮ್’ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಿಸಿದೆ.ಹೊಂಬಾಳೆ ಸಂಸ್ಥೆ ಈ ಚಿತ್ರಕ್ಕೆ ಬಂಡವಾಳ ಹೂಡಿರುವುದು ಇನ್ನೂ ಹೆಚ್ಚು ನಿರೀಕ್ಷೆ ಹೆಚ್ಚುವಂತೆ ಮಾಡಿದೆ. ಇದೆಲ್ಲದರ ಜೊತೆ ಮಾಲಿವುಡ್ನ ಪ್ರತಿಭಾನ್ವಿತ ಕಲಾವಿದರಾದ ಫಹಾದ್ ಫಾಸಿಲ್ ಹಾಗೂ ಅಪರ್ಣಾ ಬಾಲಮುರಳಿ ಮುಖ್ಯಭೂಮಿಕೆಯಲ್ಲಿ ನಟಿಸಿರೋದು ಸಹಜವಾಗಿಯೇ ಕುತೂಹಲ ಹೆಚ್ಚಿಸಿದೆ. ರೋಷನ್ ಮ್ಯಾಥ್ಯೂವ್, ವಿನೀತ್ ರಾಧಾಕೃಷ್ಣನ್, ಅನು ಮೋಹನ್ ಹಾಗೂ ಅಚ್ಯುತ್ ಕುಮಾರ್ ‘ಧೂಮಮ್’ ತಾರಾಗಣದಲ್ಲಿದ್ದಾರೆ.
ಇದನ್ನೂ ಓದಿ: ರಾಜ್ಯಾದ್ಯಂತ ಯಶಸ್ವಿ `ದರ್ಬಾರ್’; ಗೆಲುವಿನ ಹಿಂದೆ ಪ್ರೇಕ್ಷಕರದ್ದೇ ದರ್ಬಾರ್!
ಟ್ರೈಲರ್‌ನಲ್ಲಿ ಸಿನಿಮಾ ಕಥೆ ಬಗ್ಗೆ ಯಾವುದೇ ಸುಳಿವುನೀಡದೆ ತಮ್ಮ ಸಿನಿಮಾ ಶೈಲಿಯನ್ನು ಮಾತ್ರ ಬಿಟ್ಟುಕೊಟ್ಟಿದ್ದಾರೆ. ಕುತೂಹಲಭರಿತವಾದ ಟ್ರೈಲರ್ ನಲ್ಲಿ ಸಿನಿಮಾ ನೋಡಲೇಬೇಕು ಎನ್ನುವ ಹಾಗೆ ಪ್ರೇಕ್ಷಕನನ್ನು ಹುಚ್ಚು ನಿಜ. ಧೂಮಮ್ ಧೂಳ್ ಎಬ್ಬಿಸುತ್ತಾ ನೋಡಬೇಕಿದೆ.