Sandalwood Leading OnlineMedia

ಒಂದು ಸೋಲಿನ ಪರಮಾವರ್ಶೆ!

ಕನ್ನಡದ ಬುದ್ದಿವಂತ ನಿರ್ದೇಶಕರಲ್ಲಿ ಪವನ್ ಕುಮಾರ್ ಒಬ್ಬರು. ಇವರು ಯೊಗರಾಜ್ ಭಟ್ಟರ ಗರಡಿಯಲ್ಲಿ ಪಳಗಿದವರು, ದುನಿಯ ಸೂರಿಯವರ ಜೊತೆಗೂ ಸವೆದವರು. ಖುದ್ದು ಭಟ್ಟರೆ ಹೇಳುವಂತೆ `ಪವನ್ ಕುಮಾರ್ ಒಬ್ಬ ಮೇಧಾವಿ ಪವನ್‌ಗೆ ಒಳ್ಳೆಯ ಭವಿಷ್ಯವಿದೆ, ಆತ ಬಹಳ ಎತ್ತರಕ್ಕೆ ಬೆಳೆಯುತ್ತಾನೆ’ ಎಂದು ಹೇಳಿದ್ದರು. ಅವರ ಮಾತನ್ನು ಅಕ್ಷರಸಃ ಸತ್ಯ ಮಾಡಿ ತೊರಿಸಿದವರು ಪವನ್ ಕುಮಾರ್. `ಲೈಫು ಇಷ್ಟೇನೆ’ ಮಾಡಿ ಪ್ರೇಕ್ಷಕರನ್ನು ರಂಜಿಸಿದರು, `ಲೂಸಿಯಾ’ ಮಾಡಿ ಇನ್ನೊಂದು ದಾಟಿಯ ಸಿನೆಮಾ ಹೇಗೆ ಮಾಡುವುದು ಎಂದು ತೊರಿಸಿದರು. ಹಾಗೆ `ಯೂ ಟರ್ನ್’ ಸಿನೆಮಾ ಮಾಡಿ ರಂಜಿಸಿದರು.. ಎಚ್ಚರಿಸಿದರು.. ಎಜುಕೇಟ್ ಮಾಡಿದರು, ಕತೆ-ಕಂಟೆ0ಟ್ ಅನ್ನುವವರ ಬಾಯಿ ಮುಚ್ಚಿಸಿದರು ಅವರ ಮುಂದಿನ ಪ್ರಯತ್ನವೇ `ಧೂಮಂ’.

ಇದನ್ನೂ ಓದಿಕೆ. ಡಿ. ಮತ್ತು ಮಾರ್ಟಿನ್ ಶೂಟಿಂಗ್ ನಲ್ಲಿ ಧ್ರುವ ಸರ್ಜಾ, ಯಾವುದು ಮೊದಲು, ಯಾವುದು ನಂತರ ತಿಳಿಯಬೇಕಿದೆ. ಅಭಿಮಾನಿಗಳ ಕಾತರ.

2008ರಲ್ಲಿ ಹೊಳೆದ ಕಥೆ!

ಈ ಕಥೆಯನ್ನಾ 2008 ರಲ್ಲಿ ಒಂದು ಹಾಳೆಯ ಮೇಲೆ ಬರೆದಿಟ್ಟುಕೊಂಡಿದ್ದರು ಪವನ್. ಏನೊ ಒಂದು ವಿಷಯ ವಿಚಾರ ಹೊಳೆದಾಗ ಬರೆದಿಟ್ಟುಕೊಳ್ಳುವುದು ಅವರ ರೂಢಿ. ಅದೇ ರೀತಿ ಧೂಮಂ ಆ ವಿಷಯ ಮತ್ತು ವಿಚಾರವನ್ನು ಪ್ರೇಕ್ಷಕರೆದುರು ತರಲು ಸಾಕಷ್ಟು ರೀಸರ್ಚ ಮಾಡಿಬೇಕಾಯ್ತು, ಏನು ಹೇಳಬೇಕು ಏನು ಹೇಳಬಾರದು ಯಾವುದನ್ನು ಎಷ್ಟು ಹೇಳಬೇಕು ಎಂದು ಸಾಕಷ್ಟು ಯೋಚಿಸಿ ಚಿತ್ರಕಥೆ ಮಾಡಲಾಯಿತು. ಆ ಕಾರಣಕ್ಕಾಗಿಯೇ ಇಲ್ಲಿ ಪಾತ್ರಗಳ ಹೆಸರನ್ನು ಕಥೆಗೆ ತಕ್ಕಂತೆ ಕೊಡಲಾಗಿದ್ದು.. ಅವಿನಾಶ್, ದಿಯಾ.. ಹೀಗೆ ಇಲ್ಲಿ ಪಾತ್ರಗಳ ಹೆಸರುಗಳು ಕೂಡ ಕಥೆ ಹೇಳುತ್ತವೆ. ಧೂಮಂ ಸಿನಿಮಾದಲ್ಲಿ ಎಲ್ಲವೂ ಚೆನ್ನಾಗಿದೆ ಪ್ರತಿಭಾವಂತ ನಿರ್ದೇಶಕ, ಒಳ್ಳೆಯ ಪ್ರೊಡಕ್ಷನ್ ಹೌಸ್ ಉತ್ತಮ ಕಥೆ, ಉತ್ತಮ ಪಾತ್ರವರ್ಗ, ಉತ್ತಮ ತಂತ್ರಜ್ಞರು ಎಲ್ಲರೂ ಇದ್ದರೂ ಚಿತ್ರಕ್ಕೇನೂ ಕೊರತೆ ಇರಲಿಲ್ಲ, ಆದರೆ ಜನರು ಚಿತ್ರ ಮಂದಿರಕ್ಕೆ ಬರಲಿಲ್ಲಾ ! ಹಾಗದರೆ ಎಡವಿದ್ದೆಲ್ಲಿ?.

ಇದನ್ನೂ ಓದಿ*ಬಿಡುಗಡೆಯಾಯಿತು ‘ಜವಾನ್’ ಚಿತ್ರದ ಪ್ರಿವ್ಯೂ* .

 

ಇದನ್ನೂ ಓದಿ*ನೀವೆಂದೂ ಕೇಳಿರದ ಬೆಚ್ಚಬೀಳಿಸೋ ಕಥೆ ಹೊತ್ತು ತಂದಿದೆ ಅಂಬುಜ ಚಿತ್ರ….ಜುಲೈ 21ಕ್ಕೆ ಶುಭಾ-ರಜನಿ ಸಿನಿಮಾ ತೆರೆಗೆ*

ಯೋಚಿಸಲೇ ಬೇಕಾದ ಸಂಗತಿ

ಕೆಲವೊOದು ಬಾರಿ ಒಳ್ಳೆಯ ಸಿನಿಮಾಗಳು ಓಡುವುದಿಲ್ಲ ಅದಕ್ಕೆ ಕಾರಣ ಅದರ ರೀಲೀಸಿಂಗ್ ಟೈಮ್, ಅದರ ಜೊತೆ ರೀಲೀಸ್ ಆಗುವ ಅಬ್ಬರದ ಸಿನಿಮಾಗಳು, ಸ್ಟಾರ್‌ಗಳ ಸಿನಿಮಾಗಳು, public strikeಗಳು, ಬಂದ್ ಮತ್ತು ಇನ್ನಿತರೆ ಚಳವಳಿಗಳು  ಮತ್ತು ಸರಿಯಾಗಿ ಪ್ರಚಾರ ಮಾಡದೆ ಹೋದ ಸಿನಿಮಾಗಳು  ಇಂತಹುವುಗಳಿಗೆ ತುತ್ತಾಗಿ ಒಳ್ಳೆಯ ಚಿತ್ರಗಳು ಬಲಿಯಾಗಿರುವ ನಿದರ್ಶನವುಂಟು. ಆದರೇ ಧೂಮಂಗೆ ಅಡ್ಡಿಯಾದ್ದದರೂ ಯಾವುದು? ಯೋಚಿಸಲೇ ಬೇಕಾದ ಸಂಗತಿ.

ಇದನ್ನೂ ಓದಿ*ಅಶ್ವಿನಿ ಪುನೀತ್ ರಾಜಕುಮಾರ್ ಅವರಿಂದ ಅನಾವರಣವಾಯಿತು “ದೇವರ ಕನಸು” ಚಿತ್ರದ ಟ್ರೇಲರ್*

`ಧೂಮಂ’’ಗೆ ಬಿದ್ದ ಹೊಡೆತಗಳು

ಧೂಮಂ ಗೆ ಮೊದಲೇ ಸೆಟ್ ಆಗಿ ಹೊಗಿದ್ದ ಆಡಿಯನ್ಸ್ಗಳು, ಧೂಮಂ `ಹೊಂಬಾಳೆ ಪ್ರೊಡಕ್ಸನ್’ನ ಸಿನಿಮಾ ಅದ್ದೂರಿಯಾಗಿರುತ್ತದೆ ಎಂದುಕೊAಡಿದ್ದರು ಪ್ರೇಕ್ಷಕರು. ಕೆ.ಜಿ.ಎಫ್, ಕಾಂತಾರ ತರಹದ ನಿರೀಕ್ಷೆಯಲ್ಲಿದ್ದ  ಪ್ರೇಕ್ಷಕರಿಗೆ ಬಹುಶಃ ನಿರಾಸೆಯಾಗಿರಬೇಕು. ಕರ್ನಾಟಕದಲ್ಲಿ ಧೂಮಂ ಪ್ರಚಾರ ಹೊಂಬಾಳೆ ಪ್ರೊಡಕ್ಷನ್ ತನ್ನ  ಹಿಂದಿನ ಸಿನಿಮಾಗಳ ಮಟ್ಟಕ್ಕೆ ನಡೆಸಲಿಲ್ಲ. ಮೂಲ ಮಲಯಾಳಂನಲ್ಲಿ ಚಿತ್ರೀಕರಣವಾಗಿದ್ದ ಸಿನಿಮಾ ಕನ್ನಡಕ್ಕೆ ಡಬ್ ಆದಾಗ ಕನ್ನಡಿಗರಿಗೆ ರುಚಿಸಲಿಲ್ಲ. ಇವೆಲ್ಲಕಿಂತ ಹೆಚ್ಚಾಗಿ ತಪ್ಪು ಪ್ರಚಾರ. ಇದು ಸಿನಿಮಾ ಬಿಡುಗಡೆಯಾದ  ಮೊದಲ ಶೋನ intervalನಲ್ಲೇ ಶುರುವಾಯಿತು. intervalವರೆಗೂ ಸಿನಿಮಾ ಹೇಗಿದೆ ಅಂತಾ ಹೇಳಿದ್ದನ್ನು ಕೇಳಿದ ಪ್ರೇಕ್ಷಕರು ಇನ್ನರ್ಧ ಹೇಗಿದೆ ಅಂತಾ ತಿಳಿದುಕೊಳ್ಳೊಕೆ ಶುರುಮಾಡಿ.. ಯಾರೊ ಒಬ್ಬರ ಅಭಿಪ್ರಾಯಕ್ಕೆ  ಭಿನ್ನಭಿಪ್ರಾಯಗಳು ಶುರುವಾಗಿ, ಸಿನಿಮಾದಲ್ಲಿ ತಮಗೆ ಅರ್ಥವಾಗದ ವಿಚಾರವನ್ನು  ನೆಗೆಟಿವ್ ಅಂತಲೂ, ಸಿನಿಮಾ ಸುಲಭವಾಗಿ ಅರ್ಥವಾಗುವುದಿಲ್ಲ ಎಂಬ ತಿರ್ಮಾನಕ್ಕೆ ಬಂದು ಪ್ರೇಕ್ಷಕ ಮಹಾಪ್ರಭುಗಳು ಕೈ ತೊಳೆದು ಕೊಂಡರು.

ಇದನ್ನೂ ಓದಿKarnataka Budget 2023: ಸಿನಿಮಾ ರಂಗಕ್ಕೆ ಸಿಕ್ಕಿದ್ದೇನು? ಸಿಗದೇ ಹೋಗಿದ್ದೇನು?  complete details  ಇಲ್ಲಿದೆ

ರಿವ್ಯೂದ್ದೇ ರಿವ್ಯೂ!

ರಿವ್ಯೂಗಳನ್ನೇ ರಿವ್ಯೂ ಮಾಡಿಬಿಟ್ಟರು! `ಧೂಮಂ’ ಸಿನಿಮಾ ಪ್ರಚಾರಕ್ಕಿಂತ ತಪ್ಪು ಪ್ರಚಾರ-ಅಪ ಪ್ರಚಾರವಾಗಿ ಸಿನಿಮಾ ಒಂದಷ್ಟು ಹಾಳಾಗಿ ಹೊಯ್ತು. ಕೆಲವೇ ಕೆಲವು ಮಂದಿ ಮಾತ್ರ ಅದರಲ್ಲಿರುವ ಒಳ್ಳೆಯ ಅಂದ್ರೇ, ಸಿನಿಮಾದಲ್ಲಿ  ಪಾಸಿಟಿವ್ ಕಂಟೆ0ಟ್ ಏನಿದೆ ಎಂದು ಹೇಳಿದ್ದು. ಈ ನೆಗೆಟಿವ್‌ಗಳ ಮದ್ಯೆ  `ಧೂಮಂ’ ಹೊಗೆಯಾಡದೇ ಹೋಯ್ತು, ಇದರಿಂದ ಚಿತ್ರ ನಿರ್ದೇಶಕನಾಗಿ ಪವನ್ ಕುಮಾರ್ ಅವರಿಗೆ ಕಂಟೆ0ಟ್ ಎಲ್ಲರಿಗೂ ತಲುಪಲಿಲ್ಲ ಅನ್ನುವ ಸಣ್ಣ ಅಸಹನೆ ಇದ್ದರೂ, ಚಿತ್ರ ನಿರ್ಮಾಪಕರಿಗೆ ಒಂದು ಒಳ್ಳೆಯ ಚಿತ್ರ ಮಾಡಿದ ತೃಪ್ತಿಯಿದೆ. 

ಇದನ್ನೂ ಓದಿ*ಹಾಡಿನೊಂದಿಗೆ “ಸತ್ಯಂ ಶಿವಂ” ಚಿತ್ರದ ಚಿತ್ರೀಕರಣ ಮುಕ್ತಾಯ* .

ಬಹುನಿರೀಕ್ಷಿತ ಚಿತ್ರದ ಅನಿರೀಕ್ಷಿತ ತಿರುವು!

2023 ನೇ ಸಾಲಿನ ಮೊಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ `ಧೂಮಂ’ ಆಗಿತ್ತು  ಯಾಕಂದ್ರೆ ಈ ಸಿನೆಮಾವನ್ನು ನಿರ್ಮಿಸಿದ್ದು  `ಕೆ.ಜಿ.ಎಫ್’ ಮತ್ತು `ಕಾಂತಾರ’ ದಂತಹ ಬೃಹತ್ ಸಿನೆಮಾಗಳನ್ನು ನಿರ್ಮಿಸಿದಂತಹ `ಹೊಂಬಾಳೆ ಪ್ರೊಡಕ್ಷನ್ ಸಂಸ್ಥೆ’ ಮತ್ತು ಲೂಸಿಯಾ, ಯೂಟರ್ನ್ ನಂತಹ ಒಳ್ಳೊಳ್ಳೆ ಸೆನ್ಸೇಷನಲ್ ಸಿನೆಮಾಗಳನ್ನು ನಿರ್ದೇಶಿಸಿದ್ದ ಪವನ್ ಕುಮಾರ್ ಮತ್ತು ಈ ಚಿತ್ರದಲ್ಲಿ ನಟಿಸಿರುವ ಪಾತ್ರವರ್ಗ ಫಹಾದ್ ಫಾಸಿಲ್, ಅಪರ್ಣಾ ಬಾಲಮುರಳಿ, ರೊಷನ್ ಮುರಳಿ ಮತ್ತು ಅಚ್ಯುತ್ ಕುಮಾರ್ ಈ ಎಲ್ಲಾ ನಟನಾ ಮೇಧಾವಿಗಳೇ ತುಂಬಿಕೊ0ಡಿದ್ದರು. ಇನ್ನೇನು ಬೇಕು  ಈ ಸಿನಿಮಾ ಈ ವರ್ಷದ  most expected ಸಿನಿಮಾವಾಗಲಿಕ್ಕೆ. ಆದೆರೆ most expected ಸಿನಿಮಾವಾಗಿದ್ದ `ಧೂಮಂ’ ನಿರೀಕ್ಷಿತ ಗೆಲುವು ಸಾಧಿಸದೇ ಇರುವುದಕ್ಕೆ ಕಾರಣ ಹುಡುಕುತ್ತಾ ಹೋದರೆ ಒಂದಷ್ಟು ಇಂಟ್ರಸ್ಟಿ0ಗ್ ಸಂಗತಿಗಳು ಸಿಗುತ್ತಾ ಹೋಗುತ್ತವೆ.

ಇದನ್ನೂ ಓದಿಕೆ. ಡಿ. ಮತ್ತು ಮಾರ್ಟಿನ್ ಶೂಟಿಂಗ್ ನಲ್ಲಿ ಧ್ರುವ ಸರ್ಜಾ, ಯಾವುದು ಮೊದಲು, ಯಾವುದು ನಂತರ ತಿಳಿಯಬೇಕಿದೆ. ಅಭಿಮಾನಿಗಳ ಕಾತರ.

`ಧೂಮಂ’ ಒಳಗೇನಿದೆ?

ಇದೊಂದು ಧೂಮಪಾನ ಅನ್ನುವ  ವಿಷಯ ಮತ್ತು  ವಿಚಾರಕ್ಕೆ ಸಂಬ0ಧಪಟ್ಟಿದು. ಇಲ್ಲಿ ನಿರ್ದೇಶಕನ ಯೊಚನಾ ಲಹರಿ ಪ್ರೇಕ್ಷಕನನ್ನು ತನ್ನೊಳಗೆ ಚಿಂತನೆ ಮಾಡಿಸಿ ತನ್ನ ಆತ್ಮ ವಿಮರ್ಶೆ ಮಾಡಿಕೊಳ್ಳುವಂತೆ ಮಾಡಿಬಿಡುತ್ತದೆ. `ನೀವು ಸುಡುವ ಸಿಗರೇಟು ನಿಮ್ಮನ್ನು ಸುಡದೇ..  ಯಾವ್ಯಾವ ರೀತಿ ಸಿಗರೇಟು ಸುಡಬಹುದು.. ಎಷ್ಟು ತಲೆಮಾರು ಸಿಗರೇಟು ಅದರ ಘಾಟು ಬಿಟ್ಟು ಹೊಗಬಹುದು.. ನೀವು ಸಿಗರೇಟಿಗೆ ಹೂಡುವ ಒಂದೊ0ದು ರೂಪಾಯಿ ಬಂಡವಾಳ ಏನೇನಾಗುತ್ತದೆ ಎನ್ನುವುದನ್ನು ವಿವರಿಸುವ ಪ್ರಯತ್ನ ಚಿತ್ರತಂಡ ಪ್ರಾಮಾಣಿಕವಾಗಿ ಮಾಡಿತ್ತು. ಚಿತ್ರ ನೋಡಿದಾಗ ನಾವು ಹೇಗೆಲ್ಲಾ ಸುಟ್ಟುಕೊಂಡಿದ್ದೇವೆ, ಹೇಗೆಲ್ಲಾ ಸುಡುತ್ತಿದೆ ಎಂಬ ಅರಿವು ನಮಗೆ ಆಗುವುದಂತು ನಿಜ ಅದನ್ನು ನಾವು ಒಪ್ಪಿಕೊಳ್ಳಬೇಕಷ್ಟೆ. ಚಿತ್ರ ಹೀಗಿದ್ದರೂ ಪ್ರೇಕ್ಷಕರಿಗೆ ರುಚಿಸದೇ ಹೋದಾಗ  `ಇನ್ನೊಬ್ಬರ ದೃಷ್ಠಿಕೋನಕ್ಕೆ ನಮ್ಮ ನಿಲುವುಗಳನ್ನು ಹೊಂದಿಸಿಕೊಳ್ಳುವುದು ಕಷ್ಟ ಅಲ್ಲವೇ?’ ಅನ್ನುವ ಪವನ್ ಅವರ ಪ್ರಶ್ನೆಗೆ ಕಾಲವೇ ಉತ್ತರಿಸಬೇಕು. 

 

Share this post:

Related Posts

To Subscribe to our News Letter.

Translate »