Sandalwood Leading OnlineMedia

Dheera Bhagath Roy review ; ಶ್ರಮಿಕ ಸಮುದಾಯದ ಶೋಷಣೆಯ ಮೇಲೆ ಭಗತ್ ಕಣ್ಣು

ಮಾನವ ಚಂದ್ರಲೋಕಕ್ಕೆ ಕಾಲಿಟ್ರೂ ವರ್ಗ ಸಂಘರ್ಷ ಇನ್ನೂ ಜೀವಂತವಾಗಿದೆ. ಶ್ರಮಿಕ ವರ್ಗವನ್ನು ಸದಾ ಶೋಷಣೆಗೆ ಒಳಗಾಗುತ್ತಿದ್ದರೆ, ಶ್ರೀಮಂತ ವರ್ಗ ಐಶಾರಾಮಿ ಜೀವನದಲ್ಲಿ ಮನುಷ್ವತ್ವವನ್ನೇ ಕಳಕೊಂಡ ಮೃಗಗಳಂತೆ ನಡೆದುಕೊಳ್ಳುತ್ತಿದೆ. ಹಲವು ಬಾರಿ ಶ್ರೀಮಂತ ವರ್ಗದ ವಿರುದ್ಧ ಬಡ ಕಾರ್ಮಿಕ ವರ್ಗ ಬಂಡಾಯ ಏಳುವುದುಂಟು. ಅಂತಹ ಬಂಡಾಯದ ಕಥೆಯೇ ಧೀರ ಭಗತ್ ರಾಯ್. ಇಂಥದ್ದೇ ವಿಚಾರಗಳ ಚಿತ್ರಗಳು ಬಹಳಷ್ಟು ಬಂದಿದ್ದು, ಹಿಂದೆ ನರಗುಂದ ಬಂಡಾಯ ಎಂಬ ಚಿತ್ರ ಕೂಡ ಇದೇ ಹಾದಿಯಲ್ಲಿ ಸಾಗಿದ್ದು, ಒಂದಷ್ಟು ಸೂಕ್ಷ್ಮ ವಿಚಾರಗಳೊಂದಿಗೆ ಕಥಾನಕ ಮೂಲಕ 70ರ ದಶಕದಲ್ಲಿ ಬಂದA ಭೂ ಸುಧಾರಣಾ ಕಾಯ್ದೆಯ ಮಾರ್ಪಟ್ಟಿನಲ್ಲಿ ಉಳುವನೇ ಒಡೆಯ ಎಂಬ ಸರ್ಕಾರದ ಸುತ್ತೋಲೆಯಿಂದ ಶ್ರೀಮಂತರು ಹಾಗೂ ಬಡವರ ನಡುವೆ ನಡೆದಂತ ಹಲವು ಸಾವು ನೋವು ಹೊಡೆದಾಟದ ಘಟನೆಗಳು ಪ್ರತ್ಯಕ್ಷ ಸಾಕ್ಷಿಯಾಗಿ ತಮ್ಮ ಹಕ್ಕು, ನ್ಯಾಯಕ್ಕಾಗಿ, ಕಾನೂನಾತ್ಮಕವಾಗಿ ಹೋರಾಟ ನಡೆಸಿದ ನಿದರ್ಶನಗಳ ಪ್ರತಿರೂಪಕವಾಗಿ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿಧೀರ ಭಗತ್ ರಾಯ್ಸಿನಿಮಾ ಗಮನ ಸೆಳೆಯುತ್ತದೆ.

 

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ ಗೀತಾ ಶಿವರಾಜ್‌ಕುಮಾರ್ ಅವರಿಂದ ಶಾಖಾಹಾರಿ ನಿರ್ದೇಶಕನಿಗೆ ಒಲಿದು ಬಂತು ಅದ್ಭುತ ಅವಕಾಶ!

 

ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಹಾಕಿಕೊಟ್ಟಿರುವ ಸರ್ವರಿಗೂ ಸೂಕ್ತ ಎನ್ನುವಂತಹ ಸಂವಿಧಾನದ ಅಡಿಯಲ್ಲಿ ಸಾಗುವುದು ಸೂಕ್ತ ಎಂಬ ವಿಚಾರ. ಆದರೆ ದಾರಿಯಲ್ಲಿ ನಾವೆಷ್ಟು ಮುಂದುವರೆದಿದ್ದೇವೆ ಎಂಬ ಪ್ರಶ್ನೆಗೆ ನಿರ್ದೇಶಕರು ಉತ್ತರ ಕೊಡುವ ಪ್ರಯತ್ನ ಮಾಡಿದ್ದಾರೆ. ಶ್ರೀಮಂತರ ದಬ್ಬಾಳಿಕೆ, ಬಡವರ ಬದುಕು, ನೋವು, ಕಷ್ಟಗಳನ್ನು ಸೂಕ್ಷ್ಮವಾಗಿ ತೆರೆದಿಟ್ಟು, ಕಾನೂನಾತ್ಮಕವಾಗಿ ಒಂದು ಅಂತ್ಯ ಸಾರಿದ್ದಾರೆ. ಆಗಿನ ಕಾಲದ ವಾತಾವರಣ, ವೇಷಭೂಷಣದ ಜೊತೆಗೆ ಪಾತ್ರಧಾರಿಗಳ ಆಯ್ಕೆಯು ಅಚ್ಚುಕಟ್ಟಾಗಿದೆ. ಒಂದಷ್ಟು ಅನಗತ್ಯ ಸನ್ನಿವೇಶಗಳಿಗೆ ಕತ್ತರಿ ಹಾಕಬಹುದಿತ್ತುಜನ ಜಾಗೃತಿ ಮೂಡಿಸುವ ಉದ್ದೇಶದಿಂದ ಸಿನಿಮಾ ನಿರ್ಮಿಸಿರುವ ನಿರ್ಮಾಪಕರ ಆಶಯಕ್ಕೆ ಮೆಚ್ಚಬೇಕಿದೆ. ಛಾಯಾಗ್ರಾಹಕರ ಕೈಚಳಕ ಕೆಲಸಮಾಡಿದೆ. ಸಂಗೀತ ಹಾಗೂ ಹಿನ್ನೆಲೆ ಸಂಗೀತ ಮನ ಮುಟ್ಟುತ್ತದೆ. ಸಂಕಲನ, ಸಾಹಸ ಸೇರಿದಂತೆ ತಾಂತ್ರಿಕ ವರ್ಗದ ಕೆಲಸ ಅಡ್ಕಟ್ಟಾಗಿದೆ.

 

ಇನ್ನು ಪ್ರಧಾನ ನಾಯಕನ ಪಾತ್ರದಲ್ಲಿ ಮಾಡಿರುವ ರಾಕೇಶ್ ದಳವಾಯಿ ಇಡೀ ಚಿತ್ರವನ್ನು ಆವರಿಸಿಕೊಂಡು ಪಾತ್ರಕ್ಕೆ ಜೀವ ತುಂಬಿದ್ದಾರೆ. ಅವರ ರಂಗಭೂಮಿ ಹಿನ್ನಲೆ ಸಾಥ್ ನೀಡಿದೆ. ಹೋರಾಟದ ಮನೋಭಾವದ ನಾಯಕನಾಗಿ ಬೆಸ್ಟ್ ಅಭಿನಯ ನೀಎಇರುವ ಇವರು, ಕಾನೂನಾತ್ಮಕವಾಗಿ ಲಾಯರ್ ಆಗಿ ವಾದಿಸುವಾಗ ಇನ್ನಷ್ಟು ಮಾಗಬೇಕಿತ್ತು. ಇನ್ನು ನಾಯಕಿಯಾಗಿ ಸುಚರಿತಾ ಅಬಿನಯ ಸೂಪರ್. ಖಳನಾಯಕನಾಗಿ ಶರತ್ ಲೋಹಿತಾಶ್ವ ತಮ್ಮ ಗತ್ತು, ವರ್ಚಸ್ ನಲ್ಲಿ ಅಬ್ಬರಿಸಿದ್ದಾರೆ. ಹಿರಿಯ ನಟ ಮಠ ಕೊಪ್ಪಳ, ನೊಂದವರ ಪರ ದನಿ ಎತ್ತುವ ಹಿರಿಯ ಜೀವಿಯಾಗಿ ಮನಮುಟ್ಟುವ ಅಭಿನಯ ನೀಡಿದ್ದಾರೆ. ಇವರಿಗೆ ಪಾತ್ರದಿಂದ ಸಾಕಷ್ಟು ಅವಕಾಶ ಒದಗಿ ಬರುವುದರಲ್ಲಿ ಸಂಶಯವಿಲ್ಲ. ಉಳಿದಂತೆ ನೀನಾಸಂ ಅಶ್ವಥ್, ಪ್ರವೀಣ್ ಗೌಡ, ಹರಿ ರಾಮ್, ಪಿ. ಮೂರ್ತಿ, ಕೆ.ಎಂ. ಸಂದೇಶ್ ಸೇರಿದಂತೆ ಎಲ್ಲಾ ಪಾತ್ರದಾರಿಗಳು ಚಿತ್ರದ ಓಟಕ್ಕೆ ಸಾತ್ ನೀಡಿದ್ದಾರೆ. ಒಟ್ಟಾರೆ ಜಾಗೃತಿ ಮೂಡಿಸುವ ಚಿತ್ರವನ್ನು ಎಲ್ಲರೂ ಒಮ್ಮೆ ನೋಡಬಹುದು. ಚಿತ್ರ ತಂಡ ಪ್ರಚಾರದಲ್ಲಿ ಚಿತ್ರ ಸೈಧ್ಧಾಂತಿಕವಾಗಿ ಒಂದು ಪಂಗಡಕ್ಕೇಷ್ಟೇ ಎಂದು ಬಿಂಬಿಸಿದ್ದು ಚಿತ್ರಕ್ಕೆ ಮುಳುವಾಘುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

 

 

 

Share this post:

Translate »