ಧೀರ ಭಗತ್ ರಾಯ್ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು ತುಂಬಾ ಪ್ರಾಮಿಸಿಂಗ್ ಆಗಿದೆ… ಕರ್ಣನ್ ಅನ್ನೋ ನವ ನಿರ್ದೇಶಕ ಈ ಚಿತ್ರಕ್ಕೆ ಕಥೆ ಚಿತ್ರಕತೆ ಜೊತೆಗೆ ನಿರ್ದೇಶನ ಮಾಡಿದ್ದಾರೆ.. ರಾಕೇಶ್ ದಳವಾಯಿ ಅನ್ನೋ ನವ ನಾಯಕ ನಟ ಈ ಚಿತ್ರದ ಮೂಲಕ ಸ್ಯಾಂಡಲ್ವುಡ್ ಅಂಗಳದಲ್ಲಿ ಸಂಚಲನ ಸೃಷ್ಟಿಸೋದಕ್ಕೆ ಸಜ್ಜಾಗಿದ್ದು, ನಾಯಕಿಯಾಗಿ ಸುಚರಿತಾ ಅನ್ನೋ ಹೊಸ ಮುಖ ಪರಿಚಯವಾಗ್ತಿದೆ. ಇವ್ರ ಜೊತೆಗೆ ಶರತ್ ಲೋಹಿತಶ್ವ, ನೀನಾಸಂ ಅಶ್ವಥ್, ಪ್ರವೀಣ್ ಗೌಡ ಹೆಚ್ ಸಿ, ಹರಿರಾಮ್ , ಕೆ.ಎ ಮ್ ಸಂದೇಶ್, ಸುಧೀರ್ ಕುಮಾರ್ ಮುರೋಳಿ, ಎಮ್.ಕೆ.ಮಠ ಸೇರಿ ಪ್ರತಿಭಾನ್ವಿತಾ ತಾರಾ ಬಳಗವಿದೆ. ವೈಟ್ ಲೋಟಸ್ ಎಂಟರ್ಟೈನ್ಮೆಂಟ್ ಮತ್ತು ಶ್ರೀ ಓಂ ಸಿನಿ ಎಂಟ್ರಟೈನರ್ಸ್ ಬ್ಯಾನರ್ ನಡಿಯಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ತಾಂತ್ರಕವಾಗಿ ಸಖತ್ ಸ್ಟ್ರಾಂಗ್ ಆಗಿ ಕಾಣ್ತಿರೋ ಈ ಸಿನಿಮಾಗೆ ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜಿಸಿದ್ದು, ಸೆಲ್ಪಂ ಜಾನ್ ಛಾಯಾಗ್ರಹಣ ಮಾಡಿದ್ದಾರೆ. ಎನ್.ಎಂ ವಿಶ್ವ ಈ ಚಿತ್ರಕ್ಕೆ ಸಂಕಲನ ಮಾಡಿದ್ದಾರೆ. ಭೂ ಸುಧಾರಣೆ ಕಾಯ್ದೆ ಹಿನ್ನೆಲೆಯಲ್ಲಿ ನಡೆಯೋ ಧೀರ ಭಗತ್ ರಾಯ್ ಚಿತ್ರದ ಟ್ರೈಲರ್ ನಾಲ್ಕಾರೂ ಆಯಾಮಾಗಳಲ್ಲಿ ಕಾಣ್ತಿದೆ. ಅಷ್ಟೇ ಭರವಸೆಯಾಗಿ ಕಾಣ್ತಿರೋ ಈ ಚಿತ್ರದ ಇದೇ ಡಿಸೆಂಬರ್ಗೆ ಪ್ರೇಕ್ಷಕರೆದುರಿಗೆ ಬರ್ತಿದೆ.
READ MORE: ಅದ್ಭುತ ಪ್ರತಿಕ್ರಿಯೆ ಪಡೆಯುತ್ತಿದೆ `ಭೀಮ’ ರಿಲೀಸ್ ಮಾಡಿದ ಧೀರ ಭಗತ್ ರಾಯ್ ಚಿತ್ರದ ಟ್ರೈಲರ್
ಇನ್ನು, ಟ್ರೈಲರ್ ನಲ್ಲಿ ನಟ ಎಮ್.ಕೆ.ಮಠ ಅವರ ಪಾತ್ರ ಸಾಕಷ್ಟು ಪ್ರಶಂಸೆಯನ್ನು ಪಡೆಯುತ್ತಿದೆ. ರಾಜ್ಯ ಪ್ರಶಸ್ತಿ ಪುರಸ್ಕೃತ ನಟರಾದ ಎಮ್.ಕೆ.ಮಠ ಅವರು ಕೃಷ್ಣಪ್ಪನಾಗಿ ನಾಯಕಿ ಅಪ್ಪನ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೃಷಿಕನಾಗಿರುವ ಕೃಷ್ಣಪ್ಪ, ತಾನೂ ದೌರ್ಜನ್ಯಕ್ಕೆ ಒಳಗಾಗಿ ಅದರ ವಿರುದ್ಧ ಹೋರಾಡುತ್ತಾನೆ. ಹೋರಾಟ ತೀವ್ರವಾದಾಗ ಮೂವರು ಆಪ್ತ ಜೀವಗಳನ್ನು ಕೃಷ್ಣಪ್ಪ ಕಳಕೊಳ್ಳಬೇಕಾಗುತ್ತೆ. ಪಾತ್ರವೇ ತಾವಾಗಿ ಅನುಭವಿಸಿ ಅಭಿನಯಿಸುವ ಮಠ ಅವರ ಕೃಷ್ಣಪ್ಪನ ಪಾತ್ರ ಇಡೀ ಸಿನಿಮಾದ ಜೀವಾಳವಾಗಿದ್ದು ಸಿನಿಮಾ ರಿಲೀಸ್ ನಂತರ ಅವರಿಗೆ ಇನ್ನಷ್ಟು ಅದ್ಭುತ ಪಾತ್ರಗಳು ಅರಸಿ ಬರುವುದು ಖಂಡಿತಾ.