ಕೆಲ ಸಿನಿಮಾ ಟೈಟಲ್ ಗಳು ಬಹಳ ಬೇಗ ಕನೆಕ್ಟ್ ಆಗಿ ಬಿಡುತ್ತೆ. ನಮ್ಮ ಬದುಕಿಗೆ ಹತ್ತಿರ ಅನಿಸಿ ಬಿಡುತ್ತೆ. ಹೀಗೆ ಟೈಟಲ್ ಮೂಲಕವೇ ಸಿನಿ ಪ್ರಿಯರಿಗೆ ಹತ್ತಿರವಾಗಿರುವ ಸಿನಿಮಾ ‘ಧರಣಿ ಮಂಡಲ ಮಧ್ಯದೊಳಗೆ’. ಈಗಾಗಲೇ ಈ ಸಿನಿಮಾ ಸ್ಯಾಂಪಲ್ ಗಳು ಎಲ್ಲರನ್ನೂ ಟೈಟಲ್ ಗಿಂತ ಹೆಚ್ಚೇ ಸೆಳೆದಿದೆ, ಕುತೂಹಲಕ್ಕೂ ಎಡೆ ಮಾಡಿಕೊಟ್ಟಿದೆ. ಬಿಡುಗಡೆಯ ಹೊಸ್ತಿಲಲ್ಲಿರುವ ಚಿತ್ರತಂಡ ಪ್ರಚಾರ ಕಾರ್ಯವನ್ನು ಅಷ್ಟೇ ಕ್ರಿಯೇಟಿವ್ ಆಗಿ ನಡೆಸುತ್ತಿದ್ದು, ಇದೀಗ ಚಿತ್ರದ ಮಗದೊಂದು ವೀಡಿಯೋ ಸಾಂಗ್ ಬಿಡುಗಡೆಯಾಗಿ ಮತ್ತಷ್ಟು ಗಮನ ಸೆಳೆಯುತ್ತಿದೆ.
ನಟ ಶರಣ್ ಹಾಗೂ ವಾಸುಕಿ ವೈಭವ್ ಧನಿಯಾಗಿರುವ ವಾಟರ್ ಮೇಲೆ ವಾಕಿಂಗ್ ಹೊಂಟವ್ನೆ ಪೆಪ್ಪಿ ಸಾಂಗ್ ಬಿಡುಗಡೆಯಾಗಿದೆ. ನಟ ನೀನಾಸಂ ಸತೀಶ್ ಈ ಹಾಡನ್ನು ಮೆಚ್ಚಿ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಗೀತೆಯಲ್ಲಿ ಒಂಕಾರ್, ಜಯಶ್ರೀ ಆರಾಧ್ಯ ಮತ್ತು ಸಿದ್ದು ಮೂಲಿಮನಿ ಅಚ್ಚು ಕಟ್ಟಾಗಿ ನಟಿಸಿದ್ದಾರೆ, ಎಸ್ ಕೆ ಎಸ್ ಕ್ಯಾಚಿ ಲಿರಿಕ್ಸ್ ಇರುವ ಈ ಹಾಡು ಪಡ್ಡೆ ಹುಡುಗರಿಗೆ ಸಖತ್ ಲೈಕ್ ಆಗ್ತಿದೆ. ಮ್ಯೂಸಿಕ್ ಕೂಡ ಹೊಸತನದಿಂದ ಕೂಡಿದ್ದು, ರಘು ಆರ್ ಜೆ ಕೋರಿಯೋಗ್ರಫಿ ಈ ಹಾಡಿಗಿದೆ ಮತ್ತು ರೋಣದ ಬಕ್ಕೇಶ್ & ಕಾರ್ತಿಕ್ ಚೆನ್ನೋಹಿರಾವ್ ಅವರ ಸಂಗೀತ ಮೋಡಿ ಮಾಡುತ್ತಿದೆ.
ಈ ಹಿಂದೆ ವಿಜಯ್ ಪ್ರಕಾಶ್ ಹಾಡಿರುವ ‘ಮಾತು ಮಾತಲ್ಲೇ’ ಹಾಡಿನ ಲಿರಿಕಲ್ ವೀಡಿಯೋ ಬಿಡುಗಡೆಯಾಗಿ ಸಿನಿ ಪ್ರೇಮಿಗಳ ಮನಗೆದ್ದಿತ್ತು. ಇದೀಗ ಎರಡನೇ ಹಾಡು ಕೂಡ ಗಮನ ಸೆಳೆಯುತ್ತಿದೆ. ‘ಧರಣಿ ಮಂಡಲ ಮಧ್ಯದೊಳಗೆ’ ವ್ಯಕ್ತಿ,ವ್ಯಕ್ತಿತ್ವ,ಸಂಬಂಧ ಮತ್ತು ಸಂದರ್ಭಗಳ ಮಧ್ಯೆ ನಡೆಯುವ ಸಂಘರ್ಷ ಚಿತ್ರದ ಒನ್ ಲೈನ್ ಕಹಾನಿ. ಕ್ರೈಂ ಥ್ರಿಲ್ಲರ್ ಡ್ರಾಮಾ ಕಥಾಹಂದರ ಒಳಗೊಂಡ ಈ ಚಿತ್ರವನ್ನು ಪೂರಿ ಜಗನ್ನಾಥ್ ಜೊತೆ ಕೆಲಸ ಮಾಡಿ ಅನುಭವ ಇರುವ ಶ್ರೀಧರ್ ಶಿಕಾರಿಪುರ ನಿರ್ದೇಶಿಸಿದ್ದಾರೆ.
ಚಿತ್ರದಲ್ಲಿ ಗುಳ್ಟು ಖ್ಯಾತಿಯ ನವೀನ್ ಶಂಕರ್, ಐಶಾನಿ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಯಶ್ ಶೆಟ್ಟಿ, ಸಿದ್ದು ಮೂಲಿಮನಿ, ಪ್ರಕಾಶ್ ತುಮ್ಮಿನಾಡು, ಓಂಕಾರ್, ನಿತೇಶ್ ಮಹಾನ್, ಜಯಶ್ರೀ ಆರಾಧ್ಯ, ಶಾಂಭವಿ ಒಳಗೊಂಡ ತಾರಾಗಣವಿದೆ. ಕೀರ್ತನ್ ಪೂಜಾರಿ ಕ್ಯಾಮೆರಾ ವರ್ಕ್, ರೋಣದ ಬಕ್ಕೇಶ್, ಕಾರ್ತಿಕ್ ಚೆನ್ನೋಜಿರಾವ್ ಸಂಗೀತ ನಿರ್ದೇಶನ, ಉಜ್ವಲ್ ಚಂದ್ರ ಸಂಕಲನ ಚಿತ್ರಕ್ಕಿದೆ. ಬಾಕ್ಸ್ ಆಫೀಸ್ ಸಿನಿ ಕ್ರಿಯೇಷನ್ಸ್ ಬ್ಯಾನರ್ ನಡಿ ಒಂಕಾರ್ ಸಿನಿಮಾವನ್ನು ನಿರ್ಮಾಣ ಮಾಡಿದ್ದು. ವೀರೇಂದ್ರ ಕಂಚನ್, ಗೌತಮಿ ರೆಡ್ಡಿ ಸಹ ನಿರ್ಮಾಣವಿದೆ. ನವೆಂಬರ್ 25ರಂದು ಸಿನಿಮಾ ರಾಜ್ಯಾದ್ಯಂತ ತೆರೆ ಕಾಣುತ್ತಿದೆ.