Sandalwood Leading OnlineMedia

ಎಂಟು ತಿಂಗಳು ನಾನ್ ವೆಜ್ ತಿನ್ನುವುದು ಬಿಟ್ಟಿದ್ದ ನಟ ಧನ್ವೀರ್: ಕಾರಣವೇನು ಗೊತ್ತಾ?

ಸ್ಯಾಂಡಲ್ ವುಡ್ ನ ಉದಯೋನ್ಮುಖ ಸ್ಟಾರ್ ಧನ್ವೀರ್ ಗೌಡ ತಮ್ಮ ಪಾತ್ರಕ್ಕಾಗಿ ಎಷ್ಟು ಡೆಡಿಕೇಷನ್ ಮಾಡುತ್ತಾರೆ ಎಂಬುದಕ್ಕೆ ಇದು ಉತ್ತಮ ಉದಾಹರಣೆ.ಕೈವ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಆಂಕರ್ ಅನುಶ್ರೀ ಯೂ ಟ್ಯೂಬ್ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ನಟ ಧನ್ವೀರ್ ತಮ್ಮ ಪಾತ್ರಕ್ಕಾಗಿ ನಡೆಸಿದ ತಯಾರಿ ಬಗ್ಗೆ ಹೇಳಿದ್ದಾರೆ.

ಈ ವೇಳೆ ಕೈವ ಸಿನಿಮಾದ ಪಾತ್ರಕ್ಕಾಗಿ 8 ತಿಂಗಳು ನಾನ್ ವೆಜ್ ತಿನ್ನುವುದನ್ನೇ ಬಿಟ್ಟಿರುವುದಾಗಿ ಹೇಳಿದ್ದಾರೆ. ಈ ಸಿನಿಮಾದಲ್ಲಿ ಕರಗ ದೃಶ್ಯ ಬರುತ್ತದೆ. ಧನ್ವೀರ್ ಈ ಪಾತ್ರಕ್ಕಾಗಿ ಪರಿಶುದ್ಧವಾಗಿರಬೇಕೆಂದು ನಾನ್ ವೆಜ್ ತಿನ್ನುವುದನ್ನೂ ಬಿಟ್ಟಿದ್ದರಂತೆ.ಕರಗ ಹೊರುವ ಪಾತ್ರ ಮಾಡುವಾಗ ಅಪವಿತ್ರವಾಗಬಾರದು ಎಂದು ಕಟ್ಟುನಿಟ್ಟು ಮಾಡಿದ್ದೆ. ಈ ಸಿನಿಮಾಗಾಗಿ 80 ರ ದಶಕದಂತೆ ಹೇರ್ ಸ್ಟೈಲ್ ಮಾಡಿಸಿಕೊಂಡಿದ್ದೆ ಎಂದಿದ್ದಾರೆ.

Share this post:

Translate »