Sandalwood Leading OnlineMedia

ಕೈವ ಸಿನಿಮಾ ಬಗ್ಗೆ ಅಪಪ್ರಚಾರ: ಖಡಕ್ ಮೆಸೇಜ್ ಕೊಟ್ಟ ನಟ ಧನ್ವೀರ್

 

ಧನ್ವೀರ್ ಗೌಡ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಕೈವ ಸಿನಿಮಾ ಮೊನ್ನೆಯಷ್ಟೇ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.

ಡಿಸೆಂಬರ್ 8 ರಂದು ಬಿಡುಗಡೆಯಾದ ಕೈವ ಸಿನಿಮಾ ನೈಜ ಘಟನೆಯಾಧಾರಿತ ಕತೆ ಹೊಂದಿದೆ. ಈ ಸಿನಿಮಾದಲ್ಲಿ ನಾಯಕಿಯ ಮೇಲೆ ನಡೆದ ಅತ್ಯಾಚಾರಕ್ಕೆ ನಾಯಕ ಸೇಡು ತೀರಿಸಿಕೊಳ್ಳುವ ಕತೆಯಿದೆ. ಜೊತೆಗೆ ನಾಯಕಿ ಮೇಘಾ ಶೆಟ್ಟಿ ಮುಸ್ಲಿಂ ಯುವತಿಯಾಗಿ ಅಭಿನಯಿಸಿದ್ದಾರೆ.ಈ ಸಿನಿಮಾದಲ್ಲಿ ಭರ್ಜರಿ ಆಕ್ಷನ್ ಸೀಕ್ವೆನ್ಸ್ ಇದೆ. ನಾಯಕಿಯ ಮೇಲೆ ನಡೆಯುವ ಕ್ರೌರ್ಯವನ್ನೂ ತೋರಿಸಲಾಗಿದೆ. ಇದನ್ನು ನೋಡಿ ಕೆಲವರು ಸೋಷಿಯಲ್ ಮೀಡಿಯಾಗಳಲ್ಲಿ ನೆಗೆಟಿವ್ ರಿವ್ಯೂ ಬರುತ್ತಿದೆ.

ಇದರ ಬಗ್ಗೆ ಚಿತ್ರತಂಡ ತಿರುಗಿಬಿದ್ದಿದೆ. ಸಿನಿಮಾ ನೋಡದೇ ಅಭಿಪ್ರಾಯಕ್ಕೆ ಬರಬೇಡಿ ಎಂದು ಮನವಿ ಮಾಡಿದೆ. ಜೊತೆಗೆ ನಾಯಕ ಧನ್ವೀರ್, ಸ್ಟಾರ್ ನಟರ ಡಿಪಿ ಹಾಕಿಕೊಂಡು ಸೋಷಿಯಲ್ ಮೀಡಿಯಾಗಳಲ್ಲಿ ಕಾಮೆಂಟ್ ಮಾಡುವವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಈ ರೀತಿ ಮಾಡಿ ಸ್ಟಾರ್ ಗಳ ಮುಖಕ್ಕೆ ಮಸಿ ಬಳಿಯುವ ಕೆಲಸ ಮಾಡಬೇಡಿ ಎಂದಿದ್ದಾರೆ.

Share this post:

Related Posts

To Subscribe to our News Letter.

Translate »