Sandalwood Leading OnlineMedia

Dhairyam Sarvatra Sadhanam Movie Review ; ಸ್ವಾಭಿಮಾನದ ನೆರಳಲ್ಲಿ ಧೈರ್ಯದ ಅನಾವರಣ

Rating:

ಚಿತ್ರದಲ್ಲಿ ಅಪ್ಪನಿಗೆ ತನ್ನ ಮಗ ಬಂದೂಕು ಹಿಡಿದು ತನ್ನ ಪರಂಪರೆಯನ್ನು ಮುಂದುವರೆಸಬೇಕು ಎಂಬ ಆಸೆ. ಆದರೆ ಅಮ್ಮನಿಗೆ ತನ್ನ ಮಗ ಸರ್ಕಾರಿ ಕೆಲಸದಲ್ಲಿ ರಾರಾಜಿಸಬೇಕು ಎಂಬ ಆಸೆ. ಒಂದು ಹಂತದಲ್ಲಿ ಅಪ್ಪ-ಅಮ್ಮ ಇಬ್ಬರ ಕನಸುಗಳು ನನಸಾಗದೆ ಸಿನಿಮಾದ ನಾಯಕನ ಜೀವನದ ಕಥೆ ಬೇರೆಯದೇ ದಾರಿ ಹಿಡಿಯುತ್ತದೆ.  ಇಂತಹ ಸಂದರ್ಭದಲ್ಲಿ ಅವನ ನೆರವಿಗೆ ಬರುವುದು ಧೈರ್ಯ. ಧೈರ್ಯವೊಂದಿದ್ದರೆ ಎಂತಹ ಸಂಕಟದಿ0ದಲೂ ಆಚೆ ಬರಬಹುದು ಎಂದು ತೋರಿಸುವ ಚಿತ್ರ ‘ಧೈರ್ಯಂ ಸರ್ವತ್ರ ಸಾಧನಂ’. ಮೇಲ್ನೋಟಕ್ಕೆ ಇದು ಸ್ವಾಭಿಮಾನದ ಕಥೆ ಎಂದನಿಸಬಹುದು. ಹಿನ್ನೆಲೆಯಲ್ಲಿ ಬಂದೂಕು ಕಾಣಬಹುದು. ಆದರೆ, ಇದು ಸಂಘರ್ಷದ ಕಥೆ. ಮೇಲ್ಜಾತಿ, ಕೆಳಜಾತಿಯ ನಡುವಿನ ಸಂಘರ್ಷ, ಅರಿವು ಮತ್ತು ಮೌಢ್ಯ, ಹೇರುವ ಮತ್ತು ಪ್ರಶ್ನಿಸುವ ತಾಖತ್ತು, ಒಗ್ಗಟ್ಟಿನ ಜಪ, ಗುಲಾಮಗಿರಿಯನ್ನು ಮೆಟ್ಟುವ ಸ್ವಾತಂತ್ರ‍್ಯ, ಶ್ರೀಮಂತರ ಮತ್ತು ಬಡವರ ಸಂಘರ್ಷ ಎಲ್ಲವೂ ಇದೆ. ಸರಳವಾಗಿ ಹೇಳಬೇಕೆಂದರೆ, ಇಲ್ಲಿ ಶ್ರೀಮಂತರ ದರ್ಪದ ವಿರುದ್ಧ ಒಬ್ಬ ಸಾಮಾನ್ಯ ಯುವಕ ಸಿಡಿದೇಳುತ್ತಾನೆ, ಕೊನೆಗೆ ಸ್ವಾಭಿಮಾನ ಗೆಲ್ಲುತ್ತದಾ, ಇಲ್ಲವಾ ಎಂಬುದೇ ಚಿತ್ರದ ಕಥೆ.

READ MORE Ondu Sarala Prema Kathe Movie Review: ಬಾಳು `ಸರಳ’, ಪ್ರೇಮ `ವಿರಳ’.. ವಿಧಿ ಕರಾಳ!

ಈ ಸಂಘರ್ಷ ಮತ್ತು ಸಿದ್ಧಾಂತವನ್ನು ಹಲವು ಪಾತ್ರಗಳ ಮೂಲಕ ಹಿಡಿದಿಡಲಾಗಿದೆ. ಚಿತ್ರವು ಪ್ರಮುಖವಾಗಿ ಆರ್ಯ ಮತ್ತು ದ್ರಾವಿಡ ಎಂಬ ಎರಡು ಪಾತ್ರಗಳ ಮೂಲಕ ಸುತ್ತುತ್ತದೆ. ಇಲ್ಲಿ ಆರ್ಯ ಖಳನಾಯಕನಾದರೆ, ದ್ರಾವಿಡ ನಾಯಕ. ಇದಲ್ಲದೆ ಮೋಹನ್‍ ಭೀಮ್‍ಜಿ, ಗೌತಮ, ಬಸವಣ್ಣ … ಹೀಗೆ ಹಲವು ಪಾತ್ರಗಳಿವೆ ಮತ್ತು ಪುಣ್ಯಪುರಷರ ತತ್ವ-ಸಿದ್ಧಾಂತಗಳನ್ನು ಆಯಾ ಹೆಸರಿನ ಪಾತ್ರದ ಮೂಲಕ ತೋರಿಸುವ ಪ್ರಯತ್ನವನ್ನು ಮಾಡಲಾಗಿದೆ. ಈ ಚಿತ್ರದಲ್ಲಿ ಹಲವು ಗಹನ ಮತ್ತು ಸೂಕ್ಷ್ಮ ವಿಷಯಗಳನ್ನು ಹೇಳುವ ಪ್ರಯತ್ನವನ್ನು ನಿರ್ದೇಶಕ ಸಾಯಿರಾಂ ಮಾಡಿದ್ದಾರೆ. ಚಿತ್ರದಲ್ಲಿ ಉತ್ತಮ ಮೆಸೇಜ್‌ಗಳು ಇವೆ. ಇಲ್ಲಿ ಹೊಸ ಅಥವಾ ಗೊತ್ತಿಲ್ಲದ ವಿಷಯಗಳೇನಿಲ್ಲ ಅಥವಾ ಸರ್‍ಪ್ರೈಸ್‍ಗಳಿಲ್ಲ. ಆದರೆ, ಒಂದು ಪ್ರಯತ್ನವಾಗಿ ಚಿತ್ರ ಗಮನಸೆಳೆಯುತ್ತದೆ.

READ MORE Garadi Movie Review : ಮೋಡಿ ಮಾಡದ ಗರಡಿ : ಭಟ್ರು ಎಡವಿದ್ದೆಲ್ಲಿ?

ಚಿತ್ರದಲ್ಲಿ ವಿವಾನ್‍, ಅನೂಷಾ ರೈ, ಯಶ್‍ ಶೆಟ್ಟಿ, ಬಲ ರಾಜವಾಡಿ ಮುಂತಾದವರು ಉತ್ತಮ ಅಭಿನಯ ನೀಡಿದ್ದಾರೆ. ಸಿನಿಮಾದ ಲೊಕೆಶನ್ ಫ್ರೆಶ್ ಅನ್ನಿಸುತ್ತದೆ. ಜೂಡಾ ಸ್ಯಾಂಡಿ ಹಿನ್ನೆಲೆ ಸಂಗೀತ ಚಿತ್ರದ ಆಶಯವನ್ನು ಎತ್ತಿ ಹಿಡಿದಿದೆ. ನಿರ್ಮಾಪಕರಾದ ಆನಂದ್ ಬಾಬು ಅವರು ಹೊಸ ತಂಡಕ್ಕೆ ಬೆನ್ನೆಲುಬಾಗಿದ್ದು ನಿಜಕ್ಕೂ ಮೆಚ್ಚತಕ್ಕಂತದು. ರವಿಕುಮಾರ್ ಸನ ಛಯಾಗ್ರಹಣ ಚೆನ್ನಾಗಿದ್ದು, ಎಡಿಟರ್ ಶ್ರೀಕಾಂತ್ ಮುಲಾಜಿಗೆ ಬೀಳದೆ ಕತ್ತರಿ ಪ್ರಯೋಗ ಮಾಡಿದ್ದರೆ, ಸಿನಿಮಾವನ್ನು ಇನ್ನಷ್ಟು ಆಪ್ತವಾಗುತ್ತಿತ್ತು.

 

Share this post:

Related Posts

To Subscribe to our News Letter.

Translate »