Sandalwood Leading OnlineMedia

‘ಡೆವಿಲ್’…ಡಿ.29ಕ್ಕೆ ತೆರೆಗೆ ಕಲ್ಯಾಣ್ ರಾಮ್ ಸಿನಿಮಾ…

ಜೂನಿಯರ್ ಎನ್ ಟಿಆರ್ ಸಹೋದರ ನಂದಮೂರಿ ಕಲ್ಯಾಣ್‌ ರಾಮ್‌ ಸದಾ ಹೊಸ ಬಗೆಯ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಹೊಸತನಕ್ಕೆ ಹೆಚ್ಚಿನ ಆದ್ಯತೆ ಕೊಡುತ್ತಾರೆ. ಈ ಖ್ಯಾತ ನಟನ ಮುಂದಿನ ಬಹುನಿರೀಕ್ಷಿತ ಸಿನಿಮಾ ‘ಡೆವಿಲ್’. ಶೀರ್ಷಿಕೆಯೇ ಸಿನಿಪ್ರಿಯರ ಕುತೂಹಲ ಹೆಚ್ಚಿಸಿದೆ. ಇದೀಗ ಈ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಜೊತೆಗೆ ಬಿಡುಗಡೆವೂ ದಿನಾಂಕ ಘೋಷಣೆಯಾಗಿದೆ…

ಇದನ್ನೂ ಓದಿ ‘ಸಲಾರ್ ಪಾರ್ಟ್‍ 1: ಸೀಸ್‍ಫೈರ್’ ಚಿತ್ರದ ‘ಆಕಾಶ ಗಾಡಿಯ’ ಹಾಡು ಬಿಡುಗಡೆ

ಫಸ್ಟ್ ಗ್ಲಿಂಪ್ಸ್ ಹಾಗೂ ಹಾಡುಗಳ ಮೂಲಕ ಸಖತ್ ಸದ್ದು ಮಾಡಿರುವ ಡೆವಿಲ್ ಸಿನಿಮಾದ ಮೊದಲ ನೋಟ ರಿಲೀಸ್ ಆಗಿದೆ. ಬ್ರಿಟಿಷರ ಅವಧಿಯಲ್ಲಿ ನಡೆದ ಸತ್ಯ ಘಟನೆಯಾಧಾರಿತ ಈ ಚಿತ್ರ ಇದಾಗಿದ್ದು, ಒಂದು ಕೊಲೆಯ ಸುತ್ತ ಸಿನಿಮಾ ಸಾಗುತ್ತದೆ. ಡೆವಿಲ್ ಚಿತ್ರದಲ್ಲಿ ನಂದಮೂರಿ ಕಲ್ಯಾಣ್ ರಾಮ್ ಗೂಢಾಚಾರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಭರ್ಜರಿ ಆಕ್ಷನ್ ಸೀಕ್ವೆನ್ಸ್ ಗಳೊಂದಿಗೆ ಕಲ್ಯಾಣ್ ರಾಮ್ ಅಬ್ಬರಿಸಿದ್ದಾರೆ. ಸಂಯುಕ್ತ ಮೆನನ್ ನಾಯಕಿಯಾಗಿ ಅಭಿನಯಿಸಿದ್ದು, ಮಾಳವಿಕ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ “ರಿಚ್ಚಿ” ಹಾಡಿಗೆ ಹೆಜ್ಜೆ ಹಾಕಲಿದ್ದಾರೆ ಮಾನ್ವಿತ ಕಾಮತ್” .

ಡೆವಿಲ್ ಸಿನಿಮಾವನ್ನು ದೇವಾಂಶ್ ನಾಮಾ ಅರ್ಪಿಸುತ್ತಿದ್ದು, ಅಭಿಷೇಕ್ ಪಿಕ್ಚರ್ಸ್ ಬ್ಯಾನರ್ ಅಡಿ ಅಭಿಷೇಕ್ ನಾಮಾ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ನವೀನ್ ಮೇಡಾರಂ ನಿರ್ದೇಶನದ ‘ಡೆವಿಲ್’ ಚಿತ್ರಕ್ಕೆ ಶ್ರೀಕಾಂತ್ ವಿಸ್ಸಾ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಹರ್ಷವರ್ಧನ್ ರಾಮೇಶ್ವರ್ ಈ ಚಿತ್ರಕ್ಕೆ ಸಂಗೀತ ನೀಡಿದರೆ, ಸೌಂದರ್ಯ ರಾಜನ್ ಛಾಯಾಗ್ರಹಣ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಕನ್ನಡ‌, ತೆಲುಗು, ಹಿಂದಿ, ತಮಿಳು ಭಾಷೆಗಳಲ್ಲಿ ಡೆವಿಲ್ ಸಿನಿಮಾ ತಯಾರಾಗಿದ್ದು, ಇದೇ 29ಕ್ಕೆ ವಿಶ್ವಾದ್ಯಂತ ರಿಲೀಸ್ ಆಗಲಿದೆ.

Share this post:

Related Posts

To Subscribe to our News Letter.

Translate »