Sandalwood Leading OnlineMedia

ಡೇರ್ ‘ಡೆವಿಲ್’  ಮೇಕಿಂಗ್‌ಗೆ ಅಭಿಮಾನಿಗಳು ಫಿದಾ 

 

ಇದು ದೇಶಾದ್ಯಂತ ಅಕ್ಷಯ ತೃತೀಯ ಆಚರಣೆಯ ಸಂಭ್ರಮದಲ್ಲಿದ್ದಾರೆ. ಈ ದಿನ ಏನನ್ನೇ ಆರಂಭ ಮಾಡಿದ್ದರೂ ಅದಕ್ಕೆ ಯಶಸ್ಸು ಸಿಗುತ್ತದೆ ಎಂಬ ನಂಬಿಕೆಯಿದೆ. ಹೀಗಾಗಿ ಜನರು ಒಳ್ಳೆಯ ಕೆಲಸಕ್ಕೆ ಕೈ ಹಾಕುತ್ತಾರೆ. ಐಶ್ವರ್ಯಾ, ಸಂಪತ್ತು ವೃದ್ಧಿಯಾಗುತ್ತೆ ಅನ್ನುವ ನಂಬಿಕೆ. ಈ ಕಾರಣಕ್ಕೆ ಅಕ್ಷಯ ತೃತೀಯವನ್ನು ಭಾರತದಲ್ಲಿ ಜೋರಾಗಿ ಆಚರಣೆ ಮಾಡುತ್ತಾರೆ. ಈ ಶುಭ ಘಳಿಗೆಯಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಡೆವಿಲ್’ ಸಿನಿಮಾದ ಮೇಕಿಂಗ್ ವಿಡಿಯೋವನ್ನು ರಿಲೀಸ್ ಮಾಡಲಾಗಿದೆ. ಮೇ 10ರಂದು ಡಿ ಬಾಸ್ ಅಭಿಮಾನಿಗಳಿಗೆ ನಿರ್ದೇಶಕ ಮಿಲನ ಪ್ರಕಾಶ್ ಹಾಗೂ ತಂಡ ಒಂದೊಳ್ಳೆ ಸರ್ಪ್ರೈಸ್ ಕೊಟ್ಟಿದೆ. ಈಗಾಗಲೇ ಟೈಟಲ್‌ ಟೀಸರ್‌ನಲ್ಲಿ ದರ್ಶನ್ ಲುಕ್ ನೋಡಿ ಮೆಚ್ಚಿಕೊಂಡಿದ್ದ ಫ್ಯಾನ್ಸ್ ಮೇಕಿಂಗ್ ವಿಡಿಯೋ ನೋಡಿ ಥ್ರಿಲ್ ಆಗಿದ್ದಾರೆ.

READ MORE;`ಗಾಡ್ ಪ್ರಾಮಿಸ್’; ಸೂಚನ್ ಶೆಟ್ಟಿ ಹೊಸ ಪ್ರಯತ್ನಕ್ಕೆ ಪ್ರಮೋದ್ ಶೆಟ್ಟಿ ಹಾಗೂ ರವಿ ಬಸ್ರೂರು ಸಾಥ್

ದರ್ಶನ್ ನಟನೆಯ ‘ಡೆವಿಲ್’ ಸಿನಿಮಾಗೆ ಮಿಲನ ಪ್ರಕಾಶ್ (ಪ್ರಕಾಶ್ ವೀರ್) ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ದರ್ಶನ್‌ಗೆ ‘ತಾರಕ್’ ಸಿನಿಮಾ ಮಾಡಿದ್ದರು. ಆ ಬಳಿಕ ಲಾಂಗ್ ಗ್ಯಾಪ್ ಕೊಟ್ಟು ಮತ್ತೊಂದು ಸಿನಿಮಾ ಆರಂಭಿಸಿದ್ದಾರೆ. ಅದುವೇ ‘ಡೆವಿಲ್ ದಿ- ಹೀರೊ’. ಈ ಮೇಕಿಂಗ್ ವಿಡಿಯೋದಲ್ಲಿ ದರ್ಶನ್ ಫಿಟ್ ಅಂಡ್ ಫೈನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾ ಮಂದಿನೂ ಅಕ್ಷಯ ತೃತೀಯದಂದು ತಮ್ಮ ಸಿನಿಮಾದ ಕೆಲಸವನ್ನು ಶುಭಾರಂಭ ಮಾಡುತ್ತಾರೆ. ಈ ದಿನ ಸಿನಿಮಾ ಕೆಲಸ ಮಾಡಿದರೆ, ಯಶಸ್ಸು ಸಿಗುತ್ತೆ ಅನ್ನೋ ನಂಬಿಕೆ. ಈ ದೃಷ್ಟಿಯಿಂದಲೇ ದರ್ಶನ್ ಮತ್ತು ತಂಡ ಡೆವಿಲ್ ಸಿನಿಮಾದ ಮೇಕಿಂಗ್ ವಿಡಿಯೋವನ್ನು ರಿಲೀಸ್ ಮಾಡಲಾಗಿದೆ. ಡೆವಿಲ್ ಮೇಕಿಂಗ್ ವಿಡಿಯೋ ನೋಡಿ ದರ್ಶನ್ ಅಭಿಮಾನಿಗಳು ಕಾಮೆಂಟ್‌ಗಳ ಮೇಲೆ ಕಾಮೆಂಟ್ ಮಾಡುತ್ತಿದ್ದಾರೆ. ” ದಾಖಲೆಗಳ ಮೇಲೆ ದಾಖಲೆ ಮಾಡುವುದಕ್ಕೆ ಬಾಸ್ ರೆಡಿ” ಅಂತ ಇಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು “ಡಿ ಬಾಸ್ ಅವರ ಗಜಗಾಂಭೀರ್ಯ ನೋಡಿ” ಅಂತೆಲ್ಲಾ ದರ್ಶನ್ ಫ್ಯಾನ್ಸ್ ಕಾಮೆಂಟ್ ಮಾಡುತ್ತಿದ್ದಾರೆ.

READ MORE;ಚಂದನವನದ ಸ್ಟಾರ‍್ಸ್ ಗಳಿಂದ ರಿವೀಲ್ ಆಯ್ತು ಬಹುನಿರೀಕ್ಷಿತ `ಚಿತ್ತಾರ ಸ್ಟಾರ್ ಅವಾರ್ಡ್ಸ್-2024’ರ ನಾಮಿನೇಶನ್ಸ್  

ಇತ್ತೀಚೆಗೆಷ್ಟೇ ದರ್ಶನ್ ನಟಿಸಿದ ‘ಕಾಟೇರ’ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ವಿತರಕರ ವಲಯದಲ್ಲಿ ಈ ಸಿನಿಮಾ 100 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂದು ಚರ್ಚೆಯಾಗಿತ್ತು. ಬಿಡುಗಡೆ ವೇಳೆ ಚಿತ್ರತಂಡದೊಂದಿಗೆ ಕೆಲಸ ಮಾಡಿದವರು 200 ಕೋಟಿ ರೂಪಾಯಿ ಎಂದು ಮಾಹಿತಿ ಹಂಚಿಕೊಂಡಿದ್ದರು. ಆದರೆ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಕಲೆಕ್ಷನ್ ಗುಟ್ಟನ್ನು ಮಾತ್ರ ಬಿಟ್ಟುಕೊಟ್ಟಿಲ್ಲ. ಸ್ಯಾಂಡಲ್‌ವುಡ್‌ನ ಸೂಪರ್‌ಸ್ಟಾರ್‌ಗಳು ಪ್ಯಾನ್ ಇಂಡಿಯಾ ಮೊರೆ ಹೋಗಿದ್ದಾರೆ. ಆದರೆ, ದರ್ಶನ್ ಮಾತ್ರ ಪ್ಯಾನ್ ಇಂಡಿಯಾ ಮೊರೆ ಹೋಗದೆ, ವರ್ಷಕ್ಕೆ ಎರಡು ಸಿನಿಮಾ ರಿಲೀಸ್ ಮಾಡುವ ಕಡೆಗೆ ಗಮನ ಹರಿಸಿದ್ದಾರೆ. ಡೆವಿಲ್ ಸಿನಿಮಾದ ಶೂಟಿಂಗ್ ಕೂಡ ವೇಗವಾಗಿ ನಡೆಯುತ್ತಿದೆ. ಎಲ್ಲಾ ಅಂದುಕೊಂಡಂತೆ ಆದರೆ, ಡೆವಿಲ್ ಸಿನಿಮಾ ಇದೇ ವರ್ಷ ಕೊನೆಯಲ್ಲಿ ರಿಲೀಸ್ ಆಗುವ ಸಾಧ್ಯತೆಯಿದೆ.

https://www.instagram.com/p/C6xtxEooK_a/

Share this post:

Related Posts

To Subscribe to our News Letter.

Translate »