ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ಕಾಟೇರ’ ಸಿನಿಮಾ ರಿಲೀಸ್‌ಗೂ ಮೊದ್ಲೆ ಮತ್ತೊಂದು ಸಿನಿಮಾ ಸೆಟ್ಟೇರಿದೆ. ಬೆಂಗಳೂರಿನ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಸದ್ದಿಲ್ಲದೇ ಮಿಲನಾ ಪ್ರಕಾಶ್ ನಿರ್ದೇಶನದ ಸಿನಿಮಾ ಮುಹೂರ್ತ ನೆರವೇರಿದೆ. ಬಹಳ ದಿನಗಳಿಂದ ಈ ಸಿನಿಮಾ ಬಗ್ಗೆ ನಿರೀಕ್ಷೆ ಇತ್ತು. ಕೊನೆಗೂ ಸಿನಿಮಾ ಶುರುವಾಗಿದೆ. 6 ವರ್ಷಗಳ ಹಿಂದೆ ದರ್ಶನ್ ಹಾಗೂ ಮಿಲನಾ ಪ್ರಕಾಶ್ ಕಾಂಬಿನೇಷನ್‌ನಲ್ಲಿ ‘ತಾರಕ್’ ಸಿನಿಮಾ ಬಂದು ಹಿಟ್ ಆಗಿತ್ತು. ಒಂದೊಳ್ಳೆ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ ಕೊಟ್ಟು ಚಿತ್ರತಂಡ ಗೆದ್ದಿತ್ತು. ಡೈನಾಮಿಕ್ ಸ್ಟಾರ್ ದೇವರಾಜ್, ಶ್ರುತಿ ಹರಿಹರನ್, ಸಾನ್ವಿ ಶ್ರೀವತ್ಸವ ಸೇರಿದಂತೆ ದೊಡ್ಡ ತಾರಾಗಣ ಈ ಚಿತ್ರದಲ್ಲಿತ್ತು. ನಿನ್ನೆ(ನವೆಂಬರ್ 1) ರಾಣೆಬೆನ್ನೂರಿನಲ್ಲಿ ‘ಗರಡಿ’ ಸಿನಿಮಾ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ದರ್ಶನ್ ಭಾಗಿ ಆಗಿದ್ದರು. ಇಂದು(ನವೆಂಬರ್ 2) ದಿಢೀರನೆ ಹೊಸ ಸಿನಿಮಾ ಮುಹೂರ್ತ ಸಮಾರಂಭದಲ್ಲಿ ಭಾಗಿ ಆಗಿದ್ದಾರೆ.
ಇದನ್ನೂ ಓದಿ ತೇಜಸ್ ಫ್ಲಾಪ್, ದೇವಸ್ಥಾನಕ್ಕೆ ಭೇಟಿ ನೀಡಿದ ಕಂಗನಾ ಟ್ರೋಲ್, ಮತ್ತೊಂದು ಭೇಟಿಗೆ ಸಿದ್ಧರಾಗಿ ಅನ್ನೋದಾ?
ಸಾಮಾನ್ಯವಾಗಿ ದರ್ಶನ್ ಒಂದು ಸಿನಿಮಾ ಚಿತ್ರೀಕರಣ ಮುಗಿಯುವವರೆಗೂ ಮತ್ತೊಂದು ಸಿನಿಮಾ ಕೈಗೆತ್ತಿಕೊಳ್ಳುವುದಿಲ್ಲ. ‘ಕಾಟೇರ’ ಸಿನಿಮಾ ಮಾತಿ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. 2 ಹಾಡುಗಳ ಚಿತ್ರೀಕರಣ ಮಾತ್ರ ಬಾಕಿಯಿದೆ. ತೆರೆಮರೆಯಲ್ಲಿ ಮಿಲನಾ ಪ್ರಕಾಶ್ ನಿರ್ದೇಶನದ ಸಿನಿಮಾ ಕೆಲಸಗಳು ನಡೀತಿತ್ತು. ಈಗಾಗಲೇ ಕಲಾವಿದರು, ತಂತ್ರಜ್ಞರ ಆಯ್ಕೆ ನಡೆದಿದೆ. ‘ಕಾಟೇರ’ ಸಿನಿಮಾ ಹಾಡುಗಳ ಚಿತ್ರೀಕರಣ ಬಳಿಕ ಹೊಸ ಸಿನಿಮಾ ಚಿತ್ರೀಕರಣ ಶುರುವಾಗಲಿದೆ. ಇದು ದರ್ಶನ್ ನಟನೆಯ 57ನೇ ಸಿನಿಮಾ. ಮುಂದಿನ ವರ್ಷವೇ ಸಿನಿಮಾ ತೆರೆಗೆ ಬರಲಿದೆ. ಚಿತ್ರಕ್ಕೆ ‘ಡೆವಿಲ್’-ದಿ ಹೀರೊ ಎನ್ನುವ ಟೈಟಲ್ ಫಿಕ್ಸ್ ಆಗಿದೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಹಾಗೂ ಅಜನೀಶ್ ಲೋಕನಾಥ್ ಸಂಗೀತ ಡೆವಿಲ್ ಚಿತ್ರಕ್ಕಿದೆ. ಚಿನ್ನೇಗೌಡ್ರು ಸೇರಿದಂತೆ ಹಲವರು ಸಿನಿಮಾ ಮುಹೂರ್ತ ಸಮಾರಂಭದಲ್ಲಿ ಭಾಗಿ ಆಗಿದ್ದರು. ವೈಷ್ಣೋ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ದುಷ್ಯಂತ್ ‘ಡೆವಿಲ್’ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ಮೂಡಿ ಬರಲಿದೆ. ‘ತಾರಕ್’ ಚಿತ್ರದಲ್ಲಿ ಕುಟುಂಬದ ಬಾಂಧವ್ಯದ ಕಥೆ ಹೇಳಿದ್ದ ನಿರ್ದೇಶಕ ಪ್ರಕಾಶ್ ಈ ಬಾರಿ ಪೊಲಿಟಿಕಲ್ ಥ್ರಿಲ್ಲರ್ ಕತೆ ಹೇಳುತ್ತಾರೆ ಎನ್ನಲಾಗ್ತಿದೆ. ಇದರ ಜೊತೆಗೆ ಫ್ಯಾಮಿಲಿ ಎಮೋಷನ್ಸ್ ಕೂಡ ಇರಲಿದೆ. 2003ರಲ್ಲಿ ‘ಖುಷಿ’ ಸಿನಿಮಾ ಮೂಲಕ ನಿರ್ದೇಶಕರಾಗಿ ಪ್ರಕಾಶ್ ಚಿತ್ರರಂಗಕ್ಕೆ ಬಂದರು. 2007ರಲ್ಲಿ ಬಂದ ‘ಮಿಲನಾ’ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಅಲ್ಲಿಂದ ಮುಂದೆ ಮಿಲನಾ ಪ್ರಕಾಶ್ ಅಂತ್ಲೇ ಚಿತ್ರರಂಗದಲ್ಲಿ ಗುರ್ತಿಸಿಕೊಂಡರು. ಬಳಿಕ ‘ವಂಶಿ’, ‘ಗೋಕುಲ’, ‘ಸಿದ್ದಾರ್ಥ’ ಹಾಗೂ ‘ತಾರಕ್’ ಸಿನಿಮಾಗಳನ್ನು ಕಟ್ಟಿಕೊಟ್ಟಿದ್ದರು.
ಇದನ್ನೂ ಓದಿ ರಶ್ಮಿಕಾ ಮಂದಣ್ಣ ಅವರ ಇತ್ತೀಚಿನ ಫೋಟೋಶೂಟ್ ನೆಟ್ಟಿಗರ ಮನಸೆಳೆದಿದೆ.
‘ತಾರಕ್’ ಸಕ್ಸಸ್ ಬೆನ್ನಲ್ಲೇ ಅದೇ ಕಾಂಬಿನೇಷನ್‌ನಲ್ಲಿ ಮತ್ತೊಂದು ಸಿನಿಮಾ ಬರುವ ಮಾತು ಕೇಳಿ ಬಂದಿತ್ತು. 6 ವರ್ಷಗಳ ಬಳಿಕ ಅದು ಈಡೇರುತ್ತಿದೆ. ಕಳೆದ 5 ವರ್ಷಗಳಿಂದ ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಈ ಸಿನಿಮಾ ಬಗ್ಗೆ ಸ್ಪೆಷಲ್ ಪೋಸ್ಟರ್‌ಗಳು ರಿಲೀಸ್ ಆಗುತ್ತಲೇ ಇತ್ತು. ಆದರೆ ಕೊರೊನಾ ಹಾವಳಿ ಜೊತೆಗೆ ದರ್ಶನ್ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರಿಂದ ತಡವಾಯಿತು.
ಇದನ್ನೂ ಓದಿ ಕಿಂಗ್ ಖಾನ್ ‘ಡಂಕಿ’ ಟೀಸರ್ ಗೆ ಮಿಲಿಯನ್ಸ್ ವೀವ್ಸ್…ಈ ವರ್ಷ ಅತಿ ಹೆಚ್ಚು ವೀವ್ಸ್ ಕಂಡ ಟೀಸರ್
ಈ ಹಿಂದೆ ದರ್ಶನ್ ಹಾಗೂ ಮಿಲನಾ ಪ್ರಕಾಶ್ ಸಿನಿಮಾ ಫ್ಯಾನ್ ಮೇಡ್ ಪೋಸ್ಟರ್‌ಗಳು ರಿಲೀಸ್ ಆಗಿ ವೈರಲ್ ಆಗಿತ್ತು. ಈ ಬಗ್ಗೆ ಫಿಲ್ಮಿಬೀಟ್‌ಗೆ ಮಾಹಿತಿ ನೀಡಿದ್ದ ನಿರ್ದೇಶಕ ಪ್ರಕಾಶ್, “ನಾವು ಯಾವುದೇ ಪೋಸ್ಟರ್ ಬಿಟ್ಟಿಲ್ಲ. ಅಭಿಮಾನಿಗಳು ಆ ರೀತಿ ಮಾಡುತ್ತಿರಬಹುದು. ನಮ್ಮ ಸಿನಿಮಾ ಕೆಲಸಗಳು ನಡೀತಿದೆ. ಸ್ಟಾರ್‌ಕಾಸ್ಟ್ ಫೈನಲ್ ಮಾಡ್ತಿದ್ದೀವಿ, ಶೂಟಿಂಗ್ ಶೆಡ್ಯೂಲ್ ಪ್ಲ್ಯಾನ್ ಆಗುತ್ತಿದೆ. ‘ಕಾಟೇರ’ ಸಿನಿಮಾ ಚಿತ್ರೀಕರಣ ಮುಗಿದ ಬಳಿಕ ನಮ್ಮ ಸಿನಿಮಾ ಶುರುವಾಗುತ್ತದೆ” ಎಂದಿದ್ದರು. ಇನ್ನು ಚಿತ್ರದಲ್ಲಿ ಯಾರೆಲ್ಲಾ ನಟಿಸ್ತಾರೆ ಅನ್ನೋದ್ರ ಬಗ್ಗೆ ಶೀಘ್ರದಲ್ಲೇ ಮಾಹಿತಿ ಸಿಗಲಿದೆ.