ಹೈದರಾಬಾದ್: ಹೊಸ ವರ್ಷಕ್ಕೆ ತೆಲುಗು ಸ್ಟಾರ್ ಜ್ಯೂ.ಎನ್ ಟಿಆರ್ ಅಭಿಮಾನಿಗಳಿಗೆ ದೇವರ ಚಿತ್ರತಂಡದಿಂದ ಭರ್ಜರಿ ಗಿಫ್ಟ್ ಸಿಕ್ಕಿದೆ.
ಹೊಸ ವರ್ಷದಂದು ದೇವರ ಚಿತ್ರತಂಡ ಸಿನಿಮಾದ ಹೊಸ ಪೋಸ್ಟರ್ ಬಿಡುಗಡೆ ಮಾಡಿದೆ. ಈ ಪೋಸ್ಟರ್ ನಲ್ಲಿ ಜ್ಯೂ.ಎನ್ ಟಿಆರ್ ಮಾಸ್ ಆಗಿ ಇನ್ನಷ್ಟು ಯಂಗ್ ಆಗಿ ಕಾಣುತ್ತಿದ್ದಾರೆ.

ಈ ಪೋಸ್ಟರ್ ನೋಡಿ ಖುಷಿಪಟ್ಟ ಅಭಿಮಾನಿಗಳಿಗೆ ಅದರ ಜೊತೆಗೆ ಟೀಸರ್ ಬಿಡುಗಡೆ ದಿನಾಂಕವನ್ನೂ ನೋಡಿ ಸಂಭ್ರಮ ಡಬಲ್ ಆಗಿದೆ. ಜನವರಿ 8 ರಂದು ಚಿತ್ರತಂಡ ಟೀಸರ್ ಬಿಡುಗಡೆ ಮಾಡಲು ನಿರ್ಧರಿಸಿದೆ. ಫಸ್ಟ್ ಲುಕ್ ಸೋಷಿಯಲ್ ಮೀಡಿಯಾ ಪ್ರಕಟಿಸಿದ ಜ್ಯೂ.ಎನ್ ಟಿಆರ್ ಅಭಿಮಾನಿಗಳಿಗೆ ಹೊಸ ವರ್ಷಕ್ಕೆ ಶುಭಾಶಯ ತಿಳಿಸಿದ್ದಾರೆ.
ಸುಮಾರು 140 ಕೋಟಿ ರೂ. ಬಜೆಟ್ ನಲ್ಲಿ ನಿರ್ಮಾಣವಾಗುತ್ತಿರುವ ಆಕ್ಷನ್ ಥ್ರಿಲ್ಲರ್ ಸಿನಿಮಾವಿದು. ಬಾಲಿವುಡ್ ನಟಿ ಜಾಹ್ನವಿ ಕಪೂರ್ ಮೊದಲ ಬಾರಿಗೆ ಸೌತ್ ಸಿನಿಮಾದಲ್ಲಿ ನಟಿಸುತ್ತಿರುವ ಸಿನಿಮಾ ಎಂಬ ವಿಶೇಷತೆ ಇದರದ್ದು.