Sandalwood Leading OnlineMedia

ತಾಂಡವ್ ಹುಟ್ಟುಹಬ್ಬಕ್ಕೆ ದೇವನಾಂಪ್ರಿಯ ಹೊಸ ಪೋಸ್ಟರ್ ಬಿಡುಗಡೆ; ಶೀಘ್ರದಲ್ಲೇ ಶುರು ಎರಡನೇ ಹಂತದ ಚಿತ್ರೀಕರಣ

‘ಜೋಡಿ ಹಕ್ಕಿ’ ‘ಭೂಮಿಗೆ ಬಂದ ಭಗವಂತ’ ದಂತಹ ಧಾರಾವಾಹಿಗಳಲ್ಲಿ ನಟಿಸಿ ವೀಕ್ಷಕರ ಮೆಚ್ಚುಗೆ ಗಳಿಸಿದ್ದ ನಟ ತಾಂಡವ್ ರಾಮ್ ಕನ್ನಡ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರಬೇಕೆಂಬ ಕನಸು ಕಾಣುತ್ತಿದ್ದಾರೆ. ಅದರಂತೆ ಒಂದೊಳ್ಳೆ ಕಥೆ ಆಯ್ಕೆ ಮಾಡಿಕೊಂಡು ದೇವನಾಂಪ್ರಿಯ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ದೇವನಾಂಪ್ರಿಯ ಚಿತ್ರದಲ್ಲಿ ಬ್ಯುಸಿಯಾಗಿರುವ ಅವರೀಗ ಜನ್ಮದಿನದ ಖುಷಿಯಲ್ಲಿದ್ದಾರೆ. ತಾಂಡವ್ ರಾಮ್ ಹುಟ್ಟುಹಬ್ಬದ ವಿಶೇಷವಾಗಿ ದೇವನಾಂಪ್ರಿಯ ಸಿನಿಮಾದ ಹೊಸ ಪೋಸ್ಟರ್ ರಿಲೀಸ್ ಆಗಿದೆ. ಪೋಸ್ಟರ್ ಬಳಹ ಆಕರ್ಷವಾಗಿದ್ದು, ಇಡೀ ಕುಟುಂಬ ಕುಳಿತು ನೋಡುವ ಚಿತ್ರ ಅನ್ನೋದು ಗೊತ್ತಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ “ಅಪಾಯವಿದೆ ಎಚ್ಚರಿಕೆ”; ನಾಯಕನಾಗಿ “ಅಣ್ಣಯ್ಯ” ಧಾರಾವಾಹಿಯ ಜನಪ್ರಿಯ ನಟ ವಿಕಾಶ್ ಉತ್ತಯ್ಯ .

ದೇವನಾಂಪ್ರಿಯ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಮುಗಿಸಿಕೊಂಡಿದೆ. ಶೀಘ್ರದಲ್ಲೇ ಎರಡನೇ ಹಂತದ ಚಿತ್ರೀಕರಣಕ್ಕೆ ಹೊರಡಲು ಚಿತ್ರತಂಡ ಸಜ್ಜಾಗಿದೆ. ಫ್ಯಾಮಿಲಿ ಹಾಗೂ ರೀವಿಂಜ್ ಕಥಾಹಂದರ ಹೊಂದಿರುವ ‘ದೇವನಾಂಪ್ರಿಯ’ ಸಿನಿಮಾವನ್ನು ಎ ಕ್ಯೂಬ್ ಫಿಲಂಸ್ ಸಂಸ್ಥೆಯ ಅಡಿಯಲ್ಲಿ ಮೂಡಿ ಬರಲಿದೆ. ಹಿರಿಯ ನಟಿ ಉಮಾಶ್ರೀ. ತಾರಾ ಅನುರಾಧಾ, ಚರಣ್ ರಾಜ್, ವೀಣಾ ಸುಂದರ್, ಧರ್ಮ, ತಬಲಾ ನಾಣಿ, ರವಿಶಂಕರ್ ಸೇರಿದಂತೆ ಮತ್ತಿತರರು ತಾರಾಬಳಗದ ಚಿತ್ರದಲ್ಲಿದೆ. ಕಾರ್ತಿಕ್ ಶರ್ಮಾ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ ಚಿತ್ರಕ್ಕಿದೆ.

 

 

 

Share this post:

Translate »