Sandalwood Leading OnlineMedia

ಮುಗಿಲ್ ಪೇಟೆ ಡೈರೆಕ್ಷರ್ ಹೊಸ ಸಿನಿಮಾಗೆ ಟೈಟಲ್ ಫಿಕ್ಸ್..ಸಂಕ್ರಾಂತಿ ಹಬ್ಬಕ್ಕೆ ‘ದೇವನಾಂಪ್ರಿಯ’ ಫಸ್ಟ್ ಲುಕ್ ರಿಲೀಸ್..

ಜೋಡಿಹಕ್ಕಿ ಹೀರೋ ತಾಂಡವ್ ಈಗ ‘ದೇವನಾಂಪ್ರಿಯ’..ಸಂಕ್ರಾಂತಿ ಹಬ್ಬಕ್ಕೆ ಮುಗಿಲ್ ಪೇಟೆ ಡೈರೆಕ್ಟರ್ ಹೊಸ ಸಿನಿಮಾದ ಫಸ್ಟ್ ಲುಕ್ ರಿಲೀಸ್..‘ಅಡಚಣೆಗಾಗಿ ಕ್ಷಮಿಸಿ’ ಮತ್ತು ‘ಮುಗಿಲ್ ಪೇಟೆ’ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದ ಭರತ್ ಎಸ್. ನಾವುಂದ ಈಗ 3ನೇ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಈ ಸಿನಿಮಾದ ಮೂಲಕ ‘ಜೋಡಿಹಕ್ಕಿ’ ಧಾರಾವಾಹಿ ಖ್ಯಾತಿಯ ನಟ ತಾಂಡವ್ ರಾಮ್ ಅವರು ಹೀರೋ ಆಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಈ ಜೋಡಿಯ ಹೊಸ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ಸುಗ್ಗಿ ಹಬ್ಬದ ವಿಶೇಷವಾಗಿ ಇಂದು ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ ಅದ್ದೂರಿ ಸೆಟ್ ನಲ್ಲಿ ಪ್ರಜ್ವಲ್ ದೇವರಾಜ್ ಅಭಿನಯದ “ಚೀತಾ” ಚಿತ್ರದ ಚಿತ್ರೀಕರಣ .ಇದು ನೃತ್ಯ ನಿರ್ದೇಶಕ ರಾಜ ಕಲೈ ಕುಮಾರ್ ನಿರ್ದೇಶನದ ಮೊದಲ ಚಿತ್ರ .

‘ಮುಗಿಲ್ ಪೇಟೆ’ ಸಿನಿಮಾ ಮೂಲಕ ಪ್ರೇಕ್ಷಕರಲ್ಲಿ ಭರವಸೆ ಮೂಡಿಸಿರುವ ಭರತ್ ಹಾಗೂ ‘ಜೋಡಿಹಕ್ಕಿ’ ಧಾರಾವಾಹಿ ಖ್ಯಾತಿ ಗಳಿಸಿರುವ ತಾಂಡವ್ ರಾಮ್ ಸಿನಿಮಾಗೆ ‘ದೇವನಾಂಪ್ರಿಯ’ ಎಂಬ ಶೀರ್ಷಿಕೆ ಇಡಲಾಗಿದೆ. “ದೇವನಾಂಪ್ರಿಯ” ಅಂದರೆ “ದೇವತೆಗಳಿಗೆ ಪ್ರಿಯನಾದವನು” ಎಂದು ಕರೆಯಲಾಗುತ್ತದೆ. ಫಸ್ಟ್ ಲುಕ್ ಪೋಸ್ಟರ್ ಸಖತ್ ಇಂಪ್ರೆಸಿವ್ ಆಗಿದ್ದು, ನಾನಾ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪೋಸ್ಟರ್ ನ್ನು ಸೂಕ್ಷ್ಮವಾಗಿ ಗಮನಿಸಿದ್ದರೆ ಕಿಚ್ಚು ಹಾಯಿಸುತ್ತಿರುವ ನಾಯಕ, ವೀರಭದ್ರ ಸ್ವಾಮಿ, ನಾಯಕನ ಬೆನ್ನಿಂದ ಮಹಿಳೆಯ ಆಕೃತಿ, ಎರಡು ಗ್ರಾಮಗಳು ಹೀಗೆ ನಾನಾ ವಿಷಯಗಳು ಕಾಣ ಸಿಗುತ್ತವೆ.

ಇದನ್ನೂ ಓದಿ ಜ.26ಕ್ಕೆ ಕೇಸ್ ಆಫ್ ಕೊಂಡಾಣ ಬಿಡುಗಡೆ… ಖಾಕಿ ಖದರ್‌ನಲ್ಲಿ ಚಿನ್ನಾರಿ ಮುತ್ತ

ಫ್ಯಾಮಿಲಿ ಹಾಗೂ ರೀವಿಂಜ್ ಕಥಾಹಂದರ ಹೊಂದಿರುವ ‘ದೇವನಾಂಪ್ರಿಯ’ ಸಿನಿಮಾವನ್ನು ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಬಹುತಾರಾಗಣದೊಂದಿಗೆ ನಿರ್ಮಾಣವಾಗಲಿದೆ. ಎ ಕ್ಯೂಬ್ ಫಿಲಂಸ್ ಸಂಸ್ಥೆಯ ಅಡಿಯಲ್ಲಿ ಈ ಚಿತ್ರ ಮೂಡಿ ಬರಲಿದೆ. ಮುಂದಿನ ವಾರದಿಂದ ‘ದೇವನಾಂಪ್ರಿಯ’ ಸಿನಿಮಾದ ಚಿತ್ರೀಕರಣ ಶುರುವಾಗಲಿದೆ.

Share this post:

Related Posts

To Subscribe to our News Letter.

Translate »