ಹಾಟ್ ನಟಿ ದೀಪಿಕಾ ಪಡುಕೋಣೆ ಸಂಜಯ್ ಲೀಲಾ ಬನ್ಸಾಲಿ ಅವರ ಭಾಜೀರಾವ್ ಮಸ್ತಾನಿ ಸಿನಿಮಾದಲ್ಲಿ ಅಭಿನಯಿಸಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು. ಸಿನಿಮಾದಲ್ಲಿ ರಣವೀರ್ ಸಿಂಗ್ ಹಾಗೂ ಪ್ರಿಯಾಂಕ ಛೋಪ್ರಾ ದಿಪ್ಪಿಗೆ ಸಾಥ್ ನೀಡಿದ್ದರು. ಮುಂದಿನ ಸಿನಿಮಾ ಕೂಡ ಅಭಿಮಾನಿಗಳ ತೀವ್ರ ನಿರೀಕ್ಷೆ ಹುಟ್ಟು ಹಾಕಿದೆ. ಇದೀಗ ತಮ್ಮ ಜೀವನದ ಮತ್ತೊಂದು ರಹಸ್ಯವನ್ನು ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ ವಿಜಯ್ ದೇವರಕೊಂಡ ಮನೆಯಲ್ಲಿ ದೀಪಾವಳಿ ಆಚರಿಸಿದ ರಶ್ಮಿಕಾ
ಸ್ಟಾರ್ ದ ಬಳಿಕ ಅವರ ಜೀವನ ಕ್ರಮಗಳು ಬದಲಾಗೋದು ಸಹಜ . ಆದ್ರೆ ದೀಪಿಕಾ ಪಡುಕೋಣೆ ಮಾತ್ರ ನಾನು ಸಿನಿಮಾ ತಾರೆಯಾದ್ರೂ ನನ್ನ ಜೀವನ ಕ್ರಮಗಳನ್ನು, ನಡವಳಿಕೆಯನ್ನು ಬದಲಾಯಿಸಿಕೊಂಡಿಲ್ಲ ಅಂತಾ ಹೇಳಿದ್ದಾರೆ. ಮೊದಲು ನಾನು ಹೇಗೆ ಇದ್ದೆನೋ ಈಗಲೂ ಹಾಗೇ ಇದ್ದೇನೆ ಅಂತಾ ದಿಪ್ಪಿ ಹೇಳಿದ್ದಾರೆ.
ಕಾರ್ಯಕ್ರಮವೊಂದದರಲ್ಲಿ ಭಾಗವಹಿಸಿ ಮಾತನಾಡಿದ ಅವರು ನಾನು ಮೊದಲಿನಂತೆ ಇದ್ದೇನೆ. ನನ್ನ ಹೆತ್ತವರು, ಸ್ನೇಹಿತರು ಕೂಡ ನೀನು ಬದಲಾಗಲೇ ಇಲ್ಲ ಅನ್ನುತ್ತಾರೆ. ಸ್ಟಾರ್ ಆದ್ರೂ ಮನೆಯಲ್ಲಿ ನನಗೆ ಬೇಕಾದ ಅಡುಗೆಯನ್ನು ನಾನೇ ಮಾಡಿಕೊಳ್ಳುತ್ತೇನೆ. ನನ್ನ ಕುಟುಂಬ,ಹಾಗೇ ಸ್ನೇಹಿತರು ನನಗೆ ಮೊದಲಿನಂತೆಯೇ ಪ್ರೋತ್ಸಾಹ ನೀಡುತ್ತಿದ್ದಾರೆ ಅಂತಾ ದಿಪ್ಪಿ ಹೇಳಿದ್ದಾರೆ. ಹಾಗೇ ಅವರು ಕೂಡ ಮೊದಲು ಹೇಗಿದ್ರೋ ಈಗಲೂ ಹಾಗೇ ಇದ್ದಾರೆ ಅಂತಾ ದೀಪಿಕಾ ಹೇಳಿದ್ದಾರೆ.